Advertisement

ಮತ್ತೆ ಶತಕ ದಾಟಿದ ಕೋವಿಡ್‌ ಪಾಸಿಟಿವ್‌

02:30 PM Aug 09, 2020 | Suhan S |

ಕಾರವಾರ: ಜಿಲ್ಲೆಯಲ್ಲಿ ಶನಿವಾರ 117 ಕೋವಿಡ್‌ ಪ್ರಕರಣ ದೃಢಪಟ್ಟಿವೆ. ಶುಕ್ರವಾರದಂತೆ ಶನಿವಾರವೂ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದು, ಕಾರವಾರ ಮತ್ತು ಹಳಿಯಾಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Advertisement

ಕಾರವಾರದಲ್ಲಿ 43, ಅಂಕೋಲಾ 3, ಭಟ್ಕಳದಲ್ಲಿ 5, ಹೊನ್ನಾವರದಲ್ಲಿ 16, ಶಿರಸಿಯಲ್ಲಿ 2, ಮುಂಡಗೋಡದಲ್ಲಿ 11, ಹಳಿಯಾಳದಲ್ಲಿ 37 ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ.

ಗುಣಮುಖ: 69 ಜನ ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 4, ಕುಮಟಾ 10, ಹೊನ್ನಾವರ 2, ಭಟ್ಕಳ 9, ಹಳಿಯಾಳದಲ್ಲಿ 44 ಮಂದಿ ಗುಣಮುಖರಾಗಿ ವಿವಿಧ ತಾಲೂಕು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯ 2,723 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,852 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಮೃತಪಟಿದ್ದು, 845 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ಹಳಿಯಾಳದಲ್ಲಿ 9 ಜನರಿಗೆ ಕೋವಿಡ್‌ ಸೋಂಕು :  ಶನಿವಾರದ ಗಂಟಲು ದ್ರವ ಪರೀಕ್ಷೆ ವರದಿಯಲ್ಲಿ 8 ಜನರಿಗೆ ಹಾಗೂ ಇಲ್ಲಿಯ ಸರ್ಕಾರಿ ಅಸ್ಪತ್ರೆಯಲ್ಲಿ ನಡೆಸಿದ ರ್ಯಾಪಿಡ್‌ ಟೆಸ್ಟ್‌ನಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ತಾಲೂಕಿನ ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. ಪಟ್ಟಣವೊಂದರಲ್ಲೇ 6 ಪ್ರಕರಣಗಳು ದೃಢಪಟ್ಟಿದ್ದು, ದೇಶಪಾಂಡೆನಗರ, ಗುತ್ತಿಗೇರಿಗಲ್ಲಿ, ಬಸವರಾಜ ಗಲ್ಲಿಯ 8 ವರ್ಷದ ಬಾಲಕಿ, 35, 40, 23ರ ಮಹಿಳೆಯರು ಹಾಗೂ 70 ವರ್ಷದ ವೃದ್ಧೆ, 60 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆಯಾಗಿದೆ. ಮುಗದಕೊಪ್ಪ ಗ್ರಾಮದ 55ವರ್ಷದ ಪುರುಷ, ಮದ್ನಳ್ಳಿ ಗ್ರಾಮದ 62 ವರ್ಷದ ವೃದ್ಧ ಹಾಗೂ ಮುರ್ಕವಾಡ ಗ್ರಾಮದ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಶನಿವಾರ ಒಬ್ಬರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಒಟ್ಟೂ ಬಿಡುಗಡೆಗೊಂಡವರ ಸಂಖ್ಯೆ 186 ಆಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 50 ಆಗಿದೆ.

ಹೊನ್ನಾವರ 16 ಪಾಸಿಟಿವ್‌ ಪ್ರಕರಣ :  ಶುಕ್ರವಾರ ಮತ್ತು ಶನಿವಾರ ತಲಾ 16 ಪಾಸಿಟಿವ್‌ ಪ್ರಕರಣ ದಾಖಲಾಗಿದೆ. ಶನಿವಾರ 8 ಜನ ಬಿಡುಗಡೆಗೊಂಡಿದ್ದಾರೆ. ಮಂಕಿ ಕೇಂದ್ರ ಖಾಲಿಯಾಗಿದ್ದು, ತಾಲೂಕಾಸ್ಪತ್ರೆಯಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಿನವರು ಹೋಂ ಕ್ವಾರಂಟೈನ್‌ ಬಯಸುತ್ತಿದ್ದು, ದುಬೈ ಅಥವಾ ದೇಶದ ಯಾವ ಮೂಲೆಯಿಂದ ಬಂದಿದ್ದರೂ ಯಾವುದೇ ಲಕ್ಷಣಗಳಿಲ್ಲವಾದರೆ ಅವರಿಗೆ ಹೋಂ ಕ್ವಾರಂಟೈನ್‌ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಜನರಲ್ಲಿ ಕೋವಿಡ್‌ ಭೀತಿ ಕಡಿಮೆಯಾಗಿ ಕಾಳಜಿ ಹೆಚ್ಚುತ್ತಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಉಷಾ ಹಾಸ್ಯಗಾರ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next