Advertisement
ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಅದೇ ತರಗತಿಯಲ್ಲಿ ಓದುತ್ತಿದ್ದ ಎಲ್ಲ ಮಕ್ಕಳಿಗೂ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ತಿಳಿಸಿ ತಪಾಸಣೆ ನಡೆಸಲು ತಿಳಿಸಿದ್ದಾರೆ .
Related Articles
Advertisement
ಇದನ್ನೂ ಓದಿ : ಪಿರಾನ್ಹಾ ಮೀನು ದಾಳಿಗೆ ನಾಲ್ವರು ಸಾವು, ಹಲವು ಮಂದಿಗೆ ಗಾಯ
ಶಾಲೆಗೆ 1ವಾರ ರಜಾ ಘೋಷಿಸಿದ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್ ಶಾಲೆಯ 582 ಜನ ವಿದ್ಯಾರ್ಥಿನಿಯರು ಸೇರಿದಂತೆ ಶಾಲೆಯ ಶಿಕ್ಷಕರು ಅಡುಗೆ ಸಿಬ್ಬಂದಿಗಳು ಹಾಗೂ ಶಾಲೆಗೆ ಸಂಬಂಧಿಸಿದಂತೆ ಯಾರೇ ಇದ್ದರೂ ಕೂಡ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸುವಂತೆ ಮೇಲಧಿಕಾರಿಗಳ ಸೂಚನೆ ಮೇರೆಗೆ ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಎನ್.ಎಸ್ ಮತನಾಡಿ ಶಾಲೆಯ ಎಲ್ಲಾ ಮಕ್ಕಳನ್ನು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಲು ಶಿಕ್ಷಕರಿಗೆ, ಪೋಷಕರಿಗೆ ತಿಳಿಸಲಾಗಿದೆ. ಶಾಲೆಯ ಪಕ್ಕದಲ್ಲಿರುವ ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಮಾಡಿಸಲು ಸಂಬಂಧಿಸಿದ ವಾರ್ಡನ್ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಶಾಲೆಗೆ ಏಳು ದಿನ ರಜೆ ಘೋಷಿಸಲಾಗಿದೆ. ಮತ್ತು ಶಾಲೆಯ ಸುತ್ತಮುತ್ತ ಕಂಟೈನ್ ಮೆಂಟ್ ಝೋನ್ ಮಾಡಲಾಗಿದೆ ಎಂದು ತಿಳಿಸಿದರು.