ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ಹಾಗೂ ತೇರದಾಳ ನಗರದ ಪೋಲಿಸ್ ಠಾಣೆಗಳನ್ನು ಸೀಲ್ ಡೌನ ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಎರಡು ಠಾಣೆಯ ಎಲ್ಲ ಪೋಲಿಸ ಅಧಿಕಾರಿಗಳ ಸ್ವ್ಯಾಬ್ ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು ಅದರಲ್ಲಿ ಬನಹಟ್ಟಿ ಠಾಣೆಯ 54 ವರ್ಷದ ಎಎಸ್ಐ ಹಾಗೂ ತೇರದಾಳ ಠಾಣೆಯ ಒರ್ವ ಕಾನ್ಸಟೇಬಲಗೆ ಕೋವಿಡ ಪಾಜಿಟಿವ ದೃಡವಾದ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಇರ್ವರನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ.
ಭಯದಲ್ಲಿ ತಾಲ್ಲೂಕಿನ ಜನತೆ : ಇದೀಗ ತಾಲೂಕಿನ ಎಎಸ್ಐ ಹಾಗೂ ಕಾನ್ಸಟೇಬಲ್ ಸ್ವ್ಯಾಬ್ ಟೆಸ್ಟ ರೀಪೋರ್ಟ ಬರುವ ಮುಂಚೆಯಿಂದಲೂ ಕರ್ತವ್ಯ ನಿರ್ವಹಣೆ ಮಾಡಿದ್ದರಿಂದ ಅವರು ಎಲ್ಲ ಕಡೆ ತಿರುಗಾಡಿದ್ದು ಇವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ತಾಲೂಕಿನ ಜನತೆ ಭಯಬೀತರಾಗುವಂತೆ ಮಾಡಿದೆ.
ಸ್ಯಾನಿಟೈಸರ್ ಸಿಂಪರಣೆ : ಬನಹಟ್ಟಿ ಹಾಗೂ ತೇರದಾಳ ಪೊಲೀಸ್ ಠಾಣೆಗೆ ನಗರಸಭೆ ಹಾಗೂ ಪುರಸಭೆ ಸಿಬ್ಬಂದಿಗಳು ಸ್ಯಾನಿಟೈಸರ್ ಸಿಂಪರಣೆ ಮಾಡಿದರು.