Advertisement

ಉಡುಪಿಯಲ್ಲಿಂದು 170 ಜನರಿಗೆ ಸೋಂಕು ದೃಢ: 5 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

05:58 PM Aug 04, 2020 | keerthan |

ಉಡುಪಿ: ಜಿಲ್ಲೆಯಲ್ಲಿ ಇಂದು 170 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಐದು ಸಾವಿರ ಸನಿಹಕ್ಕೆ ತಲುಪಿದೆ.

Advertisement

ಜಿಲ್ಲೆಯಲ್ಲಿಂದು 1522 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 170 ಮಾದರಿ ಫಲಿತಾಂಶ ಪಾಸಿಟಿವ್ ಆಗಿದೆ. ಉಳಿದ 1352 ವರದಿಗಳ ಫಲಿತಾಂಶ ನೆಗೆಟಿವ್ ಎಂದು ಬಂದಿದೆ.

ಜಿಲ್ಲೆಯ ಇಂದಿನ 170 ಹೊಸ ಸೋಂಕು ಪ್ರಕರಣಗಳಿಂದ ಒಟ್ಟು ಸೋಂಕಿತರ ಸಂಖ್ಯೆ 4970ಕ್ಕೆ ಏರಿಕೆಯಾಗಿದೆ. ಇದರಲ್ಲಿ ಇದುವರೆಗೆ 2948 ಜನರು ಗುಣಮುಖರಾಗಿದ್ದು, 42 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸದ್ಯ 1980 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿಂದು 1700 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 36,200 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಅದರಲ್ಲಿ 30,256 ಮಾದರಿಗಳು ನೆಗೆಟಿವ್ ಆಗಿದೆ. 4970 ಮಾದರಿ ಪಾಸಿಟಿವ್ ವರದಿಯಾಗಿದ್ದು, 704 ಮಾದರಿ ಪರೀಕ್ಷಾ ಫಲಿತಾಂಶ ಇನ್ನೂ ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next