Advertisement

ಕಂಪ್ಲಿ ಪ್ರಭು ಕ್ಯಾಂಪಿನ ಮಹಿಳೆಗೆ ಸೋಂಕು ದೃಢ

08:31 AM Jun 21, 2020 | Suhan S |

ಕಂಪ್ಲಿ: ತಾಲೂಕಿನಲ್ಲಿ ಮತ್ತೂಂದು ಕೋವಿಡ್ ವೈರಸ್‌ ಸೋಂಕಿತ ಪ್ರಕರಣ ಪತ್ತೆಯಾಗಿದ್ದು ಸೋಂಕಿತ ಮಹಿಳೆ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ತಾಲೂಕಿನ ನಂ10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಪ್ರಭುಕ್ಯಾಂಪಿನ 35 ವರ್ಷದ ಮಹಿಳೆಗೆ ಕೋವಿಡ್ ವೈರಸ್‌ ಪಾಸಿಟಿವ್‌ ಪತ್ತೆಯಾಗಿದ್ದು, ಕಳೆದ ವಾರ ತೋರಣಗಲ್‌ನ ಕುರೆಕುಪ್ಪೆಯಿಂದ ಆಗಮಿಸಿದ್ದ ಐವರಿಗೆ ಸೋಂಕು ತಗುಲಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ ಈ ಮಹಿಳೆಗೆ ಸೋಂಕು ತಗುಲಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಸೋಂಕಿತ ಮಹಿಳೆಯನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್ ಸೋಂಕಿತ ಮಹಿಳೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಕೋವಿಡ್ ಪತ್ತೆಯಾದ ಪ್ರಭುಕ್ಯಾಂಪಿಗೆ ತಹಶೀಲ್ದಾರ್‌ ಎಂ. ರೇಣುಕಾ, ಪಿಎಸ್‌ಐ ಮೌನೇಶ್‌ ರಾಥೋಡ್‌, ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಆಯುಷ್ಯ ವೈದ್ಯಾಧಿಕಾರಿ ಡಾ| ಮಲ್ಲೇಶಪ್ಪ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್‌, ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next