ಹೊಸದಿಲ್ಲಿ: ಯುನೈಟೆಡ್ ಕಿಂಗ್‌ಡಂನಿಂದ ಅಂಗೀಕಾರ ಪಡೆದಿರುವ ಮೊತ್ತಮೊದಲ ಕೊರೊನಾ ನಿಗ್ರಹ ಮಾತ್ರೆ ಮೊಲು°ಪಿರವಿರ್‌ನ ತುರ್ತು ಬಳಕೆಗೆ ಸದ್ಯದಲ್ಲೇ ಭಾರತ ಸರಕಾರವೂ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಕೋವಿಡ್ ಕಾರ್ಯತಂತ್ರ ತಂಡದ ಮುಖ್ಯಸ್ಥ ಡಾ| ರಾಮ್ ವಿಶ್ವಕರ್ಮ ಹೇಳಿದ್ದಾರೆ.
ಯಾವ ಸೋಂಕಿತರ ಪರಿಸ್ಥಿತಿ ಗಂಭೀರವಾಗುವ ಲಕ್ಷಣಗಳಿರುತ್ತದೋ ಯಾರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯ ವಿರುತ್ತದೋ ಅಂಥವರಿಗೆ ನೀಡಲಾಗುವ ಮಾತ್ರೆ ಇದು. ಇದಲ್ಲದೇ ಫೈಜರ್ ಸಂಸ್ಥೆ ಪ್ಯಾಕ್ಸ್‌ಲೋವಿಡ್ ಎಂಬ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದು, ಅದರ ಬಳಕೆಗೆ ಸಮ್ಮತಿ ಸಿಗಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದಿದ್ದಾರೆ.
ನೇಸಲ್ ವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ: ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಕೊವ್ಯಾಕ್ಸಿನ್‌ನ ಎರಡನೇ ಡೋಸ್‌ನ ಬದಲಿಗೆ ಬಳಸ ಬಹುದು.
ಇದನ್ನೂ ಓದಿ:ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್‌ಗಳ ನವೀಕರಣ
ಇಂಜೆಕ್ಟ್ ಮಾಡುವಂಥ ಲಸಿಕೆಗೆ ಹೋಲಿಸಿದರೆ ಮೂಗಿನ ಮೂಲಕ ನೀಡುವ ಲಸಿಕೆಯು ಸೋಂಕಿನ ಪ್ರಸರಣ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿ. ಹೀಗಾಗಿ ಈ ಲಸಿಕೆ ಪಡೆದರೆ, ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕಾದ ಅಗತ್ಯವಿರುವು ದಿಲ್ಲ’ ಎಂದು ಭಾರತ್ ಬಯೋಟೆಕ್ ಸಿಎಂಡಿ ಕೃಷ್ಣ ಎಲ್ಲಾ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, “ಎರಡನೇ ಡೋಸ್ ಲಸಿಕೆ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯುವುದು ಉತ್ತಮ. ಆದರೆ ಅಂತಿಮ ನಿರ್ಧಾರ ಸರಕಾರಕ್ಕೆ ಬಿಟ್ಟಿದ್ದು ಎಂದೂ ತಿಳಿಸಿದ್ದಾರೆ.