Advertisement

ಕೋವಿಡ್ ಒಂದೇ ವರದಿ ಬಾಕಿ

06:41 AM Jun 12, 2020 | Suhan S |

ಗದಗ: ಜಿಲ್ಲೆಯಲ್ಲಿ ಈ ವರೆಗೆ ಕೋವಿಡ್ ಸೋಂಕು ಪರೀಕ್ಷೆಗಾಗಿ 7499 ಜನರಿಂದ ಗಂಟಲಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ 7449 ಜನರ ವರದಿ ನಕಾರಾತ್ಮಕವಾಗಿವೆ. 49 ಜನರಿಗೆ ಕೋವಿಡ್‌-19 ದೃಢಪಟ್ಟಿದ್ದು, ಒಬ್ಬರ ವರದಿ ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

Advertisement

ಇನ್ನುಳಿದಂತೆ ಜಿಲ್ಲೆಯಲ್ಲಿ 6981 ಜನರು ನಿಗಾಕ್ಕೆ ಒಳಗಾಗಿದ್ದು, 31 ಜನರು ಆಸ್ಪತ್ರೆಯಲ್ಲಿ ನಿಗಾಕ್ಕೆ ಒಳಗಾಗಿದ್ದಾರೆ. ಇನ್ನುಳಿದಂತೆ ಸೋಂಕಿನಿಂದಾಗಿ ಪಿ-166 ಹಾಗೂ ಪಿ-4082 ಮೃತಪಟ್ಟಿದ್ದು, 35 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರದವರೆಗೆ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 589 ಪ್ರಯಾಣಿಕರು ಆಗಮಿಸಿದ್ದು, ಇವರಲ್ಲಿ 245 ಜನರು ಜಿಲ್ಲೆಗೆ ಸೇರಿದವರಾಗಿದ್ದಾರೆ. 227 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, 18 ಜನರು ಕ್ವಾರಂಟೈನ್‌ ಅವಧಿ  ಮುಗಿಸಿದ್ದಾರೆ. ಉಳಿದಂತೆ 340 ಜನರು ಬೇರೆ ಜಿಲ್ಲೆಯವರಾಗಿದ್ದು, ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ. 4 ಜನರು ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next