ಗದಗ: ಜಿಲ್ಲೆಯ ವರವಿ ಗ್ರಾಮದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ನಿಂದ ಸೋಂಕಿತ ವ್ಯಕ್ತಿಯೊಬ್ಬರು ಪರಾರಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಉತ್ತರ ಪ್ರದೇಶ ವಿಷ್ಣುಪುರ ಜಿಲ್ಲೆ ದೊರಿಯಾ ಗ್ರಾಮದ ಆಜಾದ್ ಚವ್ಹಾಣ್ (28 ವ) ಎಂಬಾತನಿಗೆ ಇತ್ತೀಚೆಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಸ್ಥಳೀಯ ರಸ್ತೆ ಕಾಮಗಾರಿಯಲ್ಲಿ ಕಾರ್ಮಿನಾಗಿದ್ದರಿಂದ ಸೂಕ್ತ ವಸತಿ, ಪೌಷ್ಠಿಕ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮೇ 20 ರಂದು ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:ಕೋವಿಡ್ ಮುಂದುವರಿಸಲು ಕಾಂಗ್ರೆಸ್ ನಿಂದ ಸತತ ಪ್ರಯತ್ನ: ಈಶ್ವರಪ್ಪ ಆರೋಪ
ಆದರೆ, ಮೇ.21 ರಂದು ಸಂಜೆ ಕೇಂದ್ರದಿಂದ ಪರಾರಿಯಾಗಿದ್ದಾನೆ ಎಂದು ಶಿರಹಟ್ಟಿ ಕಂದಾಯ ನಿರೀಕ್ಷಕ ಮಹಾಂತೇಶ ಬಾಪು ಮುಗದುಮ್ ತಿಳಿಸಿದ್ದಾರೆ.
ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.