ಮಣಿಪಾಲ: ಇದು ಕೋವಿಡ್ ಸೋಂಕನ್ನು ಗೆದ್ದವರ ಕತೆ. ಸತತ 32 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿದ ಬೆಲ್ಲೊ ಅವರ ಕತೆ. ಒಂದು ವೇಳೆ ಆ ಸಂದರ್ಭ ವೆಂಟಿಲೇಟರ್ ಇಲ್ಲದೇ ಹೋಗಿದ್ದರೆ ಬಹುಶಃ ಈ ಕತೆಗಳು ಜೀವ ಕಳೆದುಕೊಳ್ಳುತ್ತಿದ್ದವು. ಇವರು ಮಾರ್ಚ್ ಆರಂಭದಲ್ಲಿ ನ್ಯೂ ಹ್ಯಾಂಪೈರ್‌ನ ವೈಟ್ ಪರ್ವತಗಳ ಮೇಲೆ ಸಂಚರಿಸಿದ್ದರು. ಅಲ್ಲಿಂದ ನೇರವಾಗಿ ಬಂದಿಳಿದದ್ದು ಆಸ್ಪತ್ರೆಗೆ.
ಹೌದು. ಬೆಲ್ಲೊ ಎಂಬವರು ಪರ್ವತಾರೋಹಣ ಮುಗಿಸಿದ ಬಳಿಕ ತೀವ್ರವಾದ ಜ್ವರಕ್ಕೆ ತುತ್ತಾದರು. ಸುಮಾರು 103 ಡಿಗ್ರಿ ಜ್ವರವಿತ್ತು. ಉಸಿರಾಡಲು ಹೆಣಗಾಡುತ್ತಿದ್ದ ಸಂದರ್ಭ ತುರ್ತು ಆಕ್ಸಿಜನ್ ಪೂರೈಸಲಾಗುತ್ತಿತ್ತು. ಬಳಿಕ ಎಕ್ಸ್‌ರೇಯನ್ನು ನಡೆಸಿದ ಅವರ ವೈದ್ಯರಾದ ಡಾ| ಪೌಲ್ ಶ್ವಾಸಕೋಶವು ಮೂಳೆಯಂತೆ ಬಿಳಿಯಾಗಿದೆ. ನಾನು ನೋಡಿದ ಕೆಟ್ಟ ಎದೆಯ ಎಕ್ಸರೆಗಳಲ್ಲಿ ಇದೂ ಒಂದು ಎಂದರು. ಇದು ಕುಟುಂಬವನ್ನು ಆತಂಕಕ್ಕೆ ಒಳಪಡಿಸಿತ್ತು.
ಬೆಲ್ಲೂ ಅವರನ್ನು ಐಸಿಯು ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಒಂದು ಹಂತದಲ್ಲಿ ಇವರು ಬದುಕುವುದೇ ಅನುಮಾನ ಎಂದಾಗಿತ್ತು. ಉಸಿರಾಡುವ ಪ್ರಕ್ರಿಯೆಗೆ ಶ್ವಾಸಕೋಶವನ್ನು ಒಗ್ಗಿಸಲು ವೈದ್ಯರು ಪ್ರಯತ್ನಿಸಿದರು. ವಿವಿಧ ದೇಶಗಳ ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆ ನೀಡಲಾಯಿತು.
ಅದು ಕೋವಿಡ್-19 ವೈರಸ್‌ನ ಮೊದಲ ಪ್ರಕರಣ. ಇದಾದ ಬಳಿಕ ಹಲವರಲ್ಲಿ ಸೋಂಕು ಪತ್ತೆಯಾಯಿತು. ಕೆಮ್ಮು ಮತ್ತು ಉಸಿರಾಟದ ಸಂದರ್ಭ ಎದೆ ಬಿಗಿಯತೊಡಗಿತು. ಬಳಿಕ ಆಸ್ಪತ್ರೆ ಸೇರಿದ್ದರು. ಅನೇಕ ಕೋವಿಡ್ -19 ರೋಗಿಗಳಂತೆ, ಬೆಲ್ಲೂ ಅವರಲ್ಲಿ ತೀವ್ರವಾದ ಉಸಿರಾಟದ ಸಮಸ್ಯೆ ಇತ್ತು. ಶ್ವಾಸಕೋಶವು ತುಂಬಾ ಉಬ್ಬಿಕೊಂಡು ದ್ರವ ತುಂಬಿತ್ತು. ರಕ್ತಕ್ಕೆ ಆಮ್ಲಜನಕವನ್ನು ವರ್ಗಾಯಿಸುವ ಸಣ್ಣ ಗಾಳಿಯ ಚೀಲಗಳು ಬಲೂನುಗಳಾಗಿ ಮಾರ್ಪಟ್ಟಿದ್ದವು. ಅವನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ವೆಂಟಿಲೇಟರ್‌ಗಳಲ್ಲಿ ಮಾಪನಾಂಕ ನಿರ್ಣಯಿಸಲಾಗುತ್ತದೆ. ಅವುಗಳನ್ನು ವ್ಯಕ್ತಿಯ ಆರೋಗ್ಯಕ್ಕೆ ಅನುಗುಣವಾಗಿ ಹೊಂದಿಸಲಾಗುತ್ತದೆ. ಆಮ್ಲಜನಕ, ಉಸಿರಾಟದ ಪ್ರಮಾಣ ಹಾಗು ಒತ್ತಡ ಇತ್ಯಾದಿ ಅಂಶಗಳಿಗೆ ತಕ್ಕಂತೆ ಅದು ಕೆಲಸ ಮಾಡುತ್ತದೆ. ಅವರ ಮೊದಲ ದಿನ ವೆಂಟಿಲೇಟರ್ ಶೇ. 65ರಷ್ಟು ಆಮ್ಲಜನಕವನ್ನು ಪೂರೈಸುತ್ತಿತ್ತು. ಮರುದಿನ ಅದನ್ನು ಮತ್ತಷ್ಟು ಶೇ. 35ಕ್ಕೆ ಇಳಿಸಲಾಗಿತ್ತು. ಇದು ಚಿಕಿತ್ಸೆಗೆ ರೋಗಿ ಸ್ಪಂದಿಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷ್ಯ. ಇದನ್ನು ಗಮನಿಸಿ ವೈದ್ಯರು ನಿರಾಳವಾದರು. ಇಷ್ಟೆಲ್ಲಾ ಆಗುತ್ತಿರುವಾಗ ಅವರ ಸ್ಥಿತಿ ಏಕಾಏಕಿ ಹದ ಗೆಟ್ಟಿತು. ವೆಂಟಿಲೇಟರ್- ಸರಬರಾಜು ಮಾಡಿದ ಆಮ್ಲಜನಕವನ್ನು ಗರಿಷ್ಠ ಶೇ. 100ಕ್ಕೆ ಏರಿಸಲಾಯಿತು.
ಚಿಕಿತ್ಸೆ ನಿಲ್ಲಿಸಲಿಲ್ಲ. ಬರೊಬ್ಬರಿ 32ದಿನಗಳ ಕಾಲ ವೆಂಟಿಲೇಟರ್‌ನಲ್ಲೇ ಬೆಲ್ಲೋ ಇದ್ದರು. ವೈದ್ಯರಿಗೂ ಒಳಗೆ ಪ್ರವೇಶವಿರಲಿಲ್ಲ.
ಮೂರು ವಾರಗಳ ಬಳಿಕ ಬೆಲ್ಲೊ ಅವರು ಮಾತನಾ ಡಲು ಪ್ರಯತ್ನಿಸುತ್ತಿದ್ದರು. ಹೆಂಡತಿ ಮತ್ತು ಮಕ್ಕಳ ಜತೆ ವಿಡಿಯೋ ಕರೆ ಮಾಡಿದ್ದರು. ಆದರೆ ಮೂಗಿಗೆ ಉಸಿರಾಟಕ್ಕೆ ಟ್ಯೂಬ್‌ಗಳನ್ನು ಅಳವಡಿಸಿದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ.
32ದಿನಗಳ ವೆಂಟಿಲೇಟರ್ ಚಿಕಿತ್ಸೆದ ಬಳಿಕ ಎಪ್ರಿಲ್ 14ರಂದು ವೆಂಟಿಲೇಟರ್‌ನ ಸಹಾಯದಿಂದ ಹೊರಬಂದರು. ಬಳಿಕ ತನ್ನದೇ ಪ್ರಯತ್ನದಿಂದ ಉಸಿರಾಡಲು ಪ್ರಾರಂಭಿಸಿದರು. ಬಳಿಕ ಇವರ ಆರೋಗ್ಯದ ದಿನ ನಿತ್ಯದ ವರದಿಯನ್ನು ವೈದ್ಯರು ಬೆಲ್ಲೊ ಪತ್ನಿ ಅವರಿಗೆ ಕರೆ ಮಾಡಿ ತಿಳಿಸುತ್ತಿದ್ದರು. ಈಗ ಸೋಂಕನ್ನು ಗೆದ್ದು ಬೆಲ್ಲೊ ಮನೆಗೆ ಹಿಂದಿರುಗಿದ್ದಾರೆ.