ಅಹಮದಾಬಾದ್: ವಿಶ್ವದ ಅತಿದೊಡ್ಡ ಪ್ರತಿಮೆ, ಭಾರತದ ಏಕತೆಯ ಮೂರ್ತಿಯನ್ನು ಒಎಲ್‌ಎಕ್ಸ್ ಹರಾಜಿಗಿಟ್ಟು, ಅಪಮಾನ ಎಸಗಿದೆ. ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಮೂರ್ತಿಯನ್ನು 30 ಸಾವಿರ ಕೋಟಿ ರೂ.ಗೆ ಮಾರಾಟಕ್ಕಿಟ್ಟಿರುವ ಬಗ್ಗೆ ವ್ಯಕ್ತಿಯೊಬ್ಬರು, ಒಎಲ್‌ಎಕ್ಸ್‌ನಲ್ಲಿ ಪ್ರತಿಮೆಯ ಫೋಟೊ ಪ್ರಕಟಿಸಿದ್ದರು.
ಕೋವಿಡ್ 19 ವೈರಸ್ ಸೋಂಕಿತರ ವೈದ್ಯಕೀಯ ಸೌಲಭ್ಯಕ್ಕೆ ಹಣ ಬಳಸುವುದಾಗಿ ಮಾಹಿತಿ ದಾಖಲಿಸಿದ್ದರು. ಆದರೆ, ಇದೊಂದು ದೇಶದ್ರೋಹಿ ಜಾಹೀರಾತು ಎಂಬುದನ್ನೂ ನೋಡದೆ, ಒಎಲ್‌ಎಕ್ಸ್ ಪ್ರಕಟಿಸಿದೆ. ಇದೀಗ ಸಂಸ್ಥೆಯ ಮೇಲೆ ಮೊಕದ್ದಮೆ ದಾಖಲಾಗಿದೆ.
‘ಏಕತೆಯ ಪ್ರತಿಮೆ ಭಾರತದ ಆಸ್ತಿ. ಇಂಥ ಜಾಹೀರಾತನ್ನು ಪ್ರಕಟಿಸುವ ಮುನ್ನ ಸಂಸ್ಥೆ ಪೂರ್ವಪರ ವಿಚಾರಿಸಬೇಕಿತ್ತು’ ಎಂದು ಕೇವಾಡಿಯಾ ಠಾಣೆಯ ಅಧಿಕಾರಿ ಪಿ.ಟಿ. ಚೌಧರಿ ಹೇಳಿದ್ದಾರೆ.