ಮೈಸೂರು: ಕೋವಿಡ್ ಸಂದರ್ಭದಲ್ಲಿಯೂ ಸ್ವತ್ಛತಾಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಅಗತ್ಯಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ಪ್ರತ್ಯೇಕಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸಫಾಯಿಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದರು.
ನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಪೌರ ಕಾರ್ಮಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು,ಪೌರ ಕಾರ್ಮಿಕರ ವಿಚಾರದಲ್ಲಿ ನಿರ್ಲಕ್ಷ ವಹಿಸಿದ್ದಲ್ಲಿಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಪೌರ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನೂ ನೀಡುವ ವಿಚಾರದಲ್ಲಿ ತಾರ ತಮ್ಯಮಾಡಿದರೆ ಸಹಿಸಲ್ಲ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಗಂಬೂಟುಗಳನ್ನು ನೀಡಿದ್ದರೂ ಸರಿಯಾಗಿ ಬಳಸಿಕೊಳ್ಳದೆಇರುವುದು ನನ್ನ ಗಮನಕ್ಕೆ ಬಂದಿದೆ. ವಲಯಆಯುಕ್ತರು, ಆರೋಗ್ಯಾಧಿಕಾರಿಗಳು, ಪರಿಸರಎಂಜಿನಿಯರ್ ಪೌರಕಾರ್ಮಿಕರಲ್ಲಿ ಆರೋಗ್ಯದ ಬಗ್ಗೆಜಾಗೃತಿ ಮೂಡಿಸಿ, ಅವುಗಳನ್ನು ಬಳಸುವಂತೆ ನೋಡಿಕೊಳ್ಳಬೇಕು. ಒಂದು ವಾರದೊಳಗೆ ಈ ವ್ಯವಸ್ಥೆಆಗಬೇಕು ಎಂದು ಸೂಚನೆ ನೀಡಿದರು.ಪೌರ ಕಾರ್ಮಿಕರನ್ನು ಫ್ರಂಟ್‌ಲೆçನ್ ವಾರಿಯರ್‌ಗಳಂತೆಪರಿಗಣಿಸಬೇಕು.ಆರೋಗ್ಯಕಾರ್ಯಕರ್ತರು,ಪೊಲೀಸರು ಎಷ್ಟು ಮುಖ್ಯಮೋ ಅದೇ ರೀತಿ ಪೌರಕಾರ್ಮಿಕರೂ ಅಷ್ಟೇ ಮುಖ್ಯವಾಗಿದ್ದಾರೆ.
ಪೌರಕಾರ್ಮಿಕರ ಆರೋಗ್ಯ ಕಾಪಾಡುವ ವಿಚಾರದಲ್ಲಿತಾರತಮ್ಯ ಮಾಡಿದರೆ ಸ್ವಯಂಪ್ರೇರಿತ ಮೊಕದ್ದಮೆದಾಖಲಿಸಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.ನಗರಪಾಲಿಕೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಪೌರಕಾರ್ಮಿ ಕರು,ಹೊರಗುತ್ತಿಗೆ ಪೌರ ಕಾರ್ಮಿಕರು, ಒಳಚರಂಡಿಕಾರ್ಮಿಕರು, ಆಟೋ, ಟಿಪ್ಪರ್‌ಗಳ ಚಾಲಕರಿಗೆಒಂದೊಂದು ರೀತಿಯ ವೇತನ, ಸೌಲಭ್ಯಗಳು ಇವೆ.ಕಾಯಂ ಪೌರ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಹೊರ ಗುತ್ತಿಗೆ ನೌಕರರಿಗೆ ಇಲ್ಲ. ಹೀಗಾಗಿ, ಒಂದೇಚೌಕಟ್ಟಿಗೆ ಎಲ್ಲರನ್ನೂ ತಂದು ಏಕರೂಪದ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಲಾಗಿದೆಎಂದರು.ಸಭೆಯಲ್ಲಿ ಮೇಯರ್ ರುಕ್ಮಿಣಿ, ಪಾಲಿಕೆ ಆಯುಕ್ತೆಶಿಲ್ಪಾ ನಾಗ್, ಸಫಾಯಿ ಕರ್ಮಚಾರಿ ಆಯೋಗದಸದಸ್ಯ ವೆಂಕಟೇಶ್, ಕಾರ್ಯದರ್ಶಿ ರಮಾ,ಆರೋಗ್ಯಾಧಿಕಾರಿ ಹೇಮಂತರಾಜ್ ಇತರರಿದ್ದರು.