ಬೆಂಗಳೂರು: ಕೊರೊನಾ ಪಾಸಿಟಿವ್ ಎಂದುಸಾಕು ಹತ್ತಿರ ಸುಳಿಯಲು ಭಯಬೀತರಾಗಿತಿರುವ ಸಂದರ್ಭದಲ್ಲಿ ಕೊರೊನಾವನ್ನು ಲೆಕ್ಕಿಸದೆಪ್ರಾಣ ಪಣಕ್ಕಿಟ್ಟು ಸಮಾಜಕೋಸ್ಕರದುಡಿಯುತ್ತಿರುವ ಕೆಲಸಗಾರರನ್ನು ನಾಗರಿಕರು ಕೀಳರಿಮೆಯಿಂದ ಕಾಣದೆ ಗೌರವಿಸಬೇಕೆಂದುಕಂದಾಯ ಸಚಿವ ಆರ್.ಅಶೋಕ್ ಮನವಿಮಾಡಿದರು.
ಜಯನಗರದ ಪಟ್ಟಾಭಿರಾಮ ನಗರ ವಾರ್ಡ್‌ವ್ಯಾಪ್ತಿಯ ಹಂಡೆ ಹಾಲ್ ಬಳಿ ಕೊರೊನಾಸಂದರ್ಭದಲ್ಲೂ ಸಮಾಜಮುಖೀಯಾಗಿದುಡಿಯುತ್ತಿರುವವರಿಗೆ ದಿನಸಿ ಕಿಟ್ ವಿತರಿಸಿಹಾಗೂ ಕೊರೊನಾ ರೋಗಿಗಳಿಗೆ ಉಚಿತವಾಗಿನೀಡಿದ ಆಕ್ಸಿಜನ್ ವಾಹನಕ್ಕೆ ಚಾಲನೆ ನೀಡಿಶುಕ್ರವಾರ ಮಾತನಾಡಿದರು.
ಕೊರೊನಾದಿಂದ ಮೃತಪಟ್ಟರೆ ನಮ್ಮ ಸ್ವಂತಕುಟುಂಬದವರು, ಆತ್ಮೀಯ ಸ್ನೇಹಿತರುಗಳೇರೋಗ ನಮಗೂ ಬರಬಹುದೆಂಬ ಆತಂಕದಿಂದದೂರ ಉಳಿಯುತ್ತಾರೆ ಇಂತಹ ಸಂದರ್ಭದಲ್ಲಿಪೌರಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರುಇನ್ನು ಹಲವಾರು ಕೆಲಸಗಾರರು ಸಮಾಜಕೋಸ್ಕರಪ್ರಾಣವನ್ನೇ ಪಣಕ್ಕಿಟ್ಟು ದುಡಿಯುತ್ತಿದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಟೋ, ಕ್ಯಾಬ್ ಚಾಲಕರು, ಮಡಿವಾಳ,ಚಮ್ಮಾರ ಸಮುದಾಯದವರು ಕೂಡ ಕೊರೊನಾಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.ಇಂಥ ವರ್ಗದವರೆಲ್ಲ ಗುರುತಿಸಿ ರಕ್ಷಾಫೌಂಡೇಶನ್ ದಿನಸಿ ಕೀಟ್‌ಗಳನ್ನುನೀಡುತ್ತಿರುವುದು ಶ್ಲಾಘನೀಯ ಎಂದರು.
ರಕ್ಷಾ ಫೌಂಡೇಶನ್ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಮಾತನಾಡಿ, ಕೊರೊನಾಸಂದರ್ಭದಲ್ಲೂ ನಮ್ಮ ಕೆಲಸವೇ ನಮಗೆಕಾಯಕವೆಂದು ದುಡಿಯುತ್ತಿರುವವರಿಗೆ ನಮ್ಮಸಂಸ್ಥೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಅಳಿಲು ಸೇವೆ ಮಾಡುತ್ತಿದ್ದು,ಸರ್ಕಾರದಿಂದ ಕೊರೊನಾ ಸಂದರ್ಭದಲ್ಲಿಘೋಷಿಸಿರುವ ಪ್ಯಾಕೇಜನ್ನು ಪಡೆಯಲು ನೀವುಅರ್ಹರಿದ್ದರೆ ಸೂಕ್ತ ದಾಖಲೆಯೊಂದಿಗೆ ನಮ್ಮಕಚೇರಿ ಭೇಟಿ ಮಾಡಬಹುದು ಎಂದು ತಿಳಿಸಿದರು.ಮಾಜಿ ಮಹಾನಗರ ಪಾಲಿಕೆ ಸದಸ್ಯೆ ನಾಗರತ್ನ, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಇತರರು ಇದ್ದರು.