ಹಾಸನ: ಚಿಕ್ಕಮಗಳೂರು, ಕೊಡಗು, ಹಾಸನಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ,ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟಮಾಡುವ ಅಧಿಕೃತ ಏಜೆಂಟರು ಕೊರೊನಾದಿಂದ ಮೃತಪಟ್ಟಿದ್ದರೆ ಅಂತಹ ಕುಟುಂಬಗಳಿಗೆ ಒಕ್ಕೂಟಒಂದು ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರಕುಟುಂಬಗಳಿಗೂ ಹಾಸನ ಹಾಲು ಒಕ್ಕೂಟ, ಎಚ್‌ಡಿಸಿಸಿ ಬ್ಯಾಂಕ್‌ನಿಂದ ಪರಿಹಾರ ನೀಡುವ ಬಗ್ಗೆಚಿಂತನೆ ನಡೆದಿದೆ ಎಂದರು.ಹಾಸನ ಡೇರಿ ಆವರಣದಲ್ಲಿ ನಿರ್ಮಿಸಿರುವಪೆಟ್‌ಬಾಟಲ್ ಘಟಕದ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ. ಕೊರೊನಾ ಅಬ್ಬರ ಕಡಿಮೆಯಾದನಂತರ ಅಧಿಕೃತವಾಗಿ ಉದ್ಘಾಟನೆಮಾಡಲಾಗುವುದು.
ಈ ಘಟಕ ದಕ್ಷಿಣ ಭಾರತದಪ್ರಥಮ ಹಾಗೂ ದೇಶದ 3ನೇ ಘಟಕವಾಗಿದೆ.ಗಂಟೆಗೆ 30 ಸಾವಿರ, ದಿನಕ್ಕೆ ಸುವಾಸಿತ ಹಾಲಿನಪೆಟ್‌ಬಾಟಲ್‌ಗಳನ್ನು ಈ ಘಟಕದಲ್ಲಿಉತ್ಪಾದಿಸಲಾಗವುದು ಎಂದರು.5,40 ಲಕ್ಷ ಬಾಟಲ್ ಉತ್ಪಾದಿಸಬಹುದಾಗಿದೆ. ಈಘಟಕದಲ್ಲಿ ಸುವಾಸಿತ ಹಾಲು, ಲಸ್ಸಿ, ಮಸಾಲಮಜ್ಜಿಗೆ, ಯುಎಚ್‌ಟಿ ಹಾಲಿನ ಬಾಟಲ್‌ಗಳನ್ನೂಉತ್ಪಾದಿಸಬಹುದಾಗಿದೆ. ಭಾರತೀಯ ಸೇನೆಯಿಂದಫ್ಲೇವರ್ಡ್ ಮಿಲ್ಕ್ ಲಸ್ಸಿ ಸರಬರಾಜಿಗೆ ಬೇಡಿಕೆಬಂದಿದ್ದು 2021ನೇ ಸಾಲಿನಿಂದ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
1995ರಲ್ಲಿ ತಾನು ಹಾಸನ ಹಾಲು ಒಕ್ಕೂಟದಅಧ್ಯಕ್ಷನಾದಾಗ ವಾರ್ಷಿಕ 25 ಕೋಟಿ ರೂ. ವಹಿವಾಟು ಇತ್ತು. ಈಗ 1900 ಕೋಟಿ ರೂ. ವಹಿವಾಟುನಡೆಸಲಾಗುತ್ತಿದೆ. ಪ್ರತಿ ತಿಂಗಳೂ ಹಾಲು ಉತ್ಪಾದಕರಿಗೆ 100 ಕೋಟಿ ರೂ.ಬಟವಾಡೆ ಮಾಡಲಾಗುತ್ತಿದೆಎಂದರು. ಶಾಸಕ ಸಿ.ಎನ್.ಬಾಲಕೃಷ್ಣ, ಒಕ್ಕೂಟದವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.