Advertisement

ಕೋವಿಡ್‌ ಆರೈಕೆ ಕೇಂದ್ರಗಳನು ಸದ್ಯಕ್ಕೆ ಮುಚ್ಚಬೇಡಿ

01:56 PM Jun 11, 2021 | Team Udayavani |

ಬೆಂಗಳೂರು: ಕೋವಿಡ್‌-19 ಮೂರನೇಸಂಭಾವ್ಯ ಅಲೆಯ ಸಾಧ್ಯತೆಗಳು ಮತ್ತು ಅದನ್ನು ಎದುರಿಸುವ ಮಾರ್ಗೋಪಾಯಗಳ ಕುರಿತುತಜ್ಞರ ಸಮಿತಿ ವರದಿ ನೀಡುವ ತನಕ ಈಗತೆರೆಯಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ಹಾಗೂ ಟ್ರಯಾಜ್‌ ಸೆಂಟರ್‌ಗಳನ್ನು ಮುಚ್ಚದಂತೆಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಕೋವಿಡ್‌-19 ಚಿಕಿತ್ಸೆ ಮತ್ತು ನಿರ್ವಹಣೆಗೆಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವುಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಅರವಿಂದ ಕುಮಾರ್‌ ಅವರಿದ್ದವಿಭಾಗೀಯ ನ್ಯಾಯಪೀಠ ಗುರುವಾರ ಈನಿರ್ದೇಶನ ನೀಡಿತು. ಮೊದಲ ಅಲೆಸಂದರ್ಭದಲ್ಲಿ ತೆರೆಯಲಾಗಿದ್ದ ಅನೇಕ ಕೋವಿಡ್‌ಕೇರ್‌ ಸೆಂಟರ್‌ಗಳನ್ನು ನಂತರದಲ್ಲಿ ಮುಚ್ಚಲಾಯಿತು. ಇದರಿಂದಾಗಿ ಎರಡನೇ ಅಲೆ ಆರಂಭವಾದಾಗ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡನಿರ್ಮಾಣ ಆಗಿತ್ತು.

ಈಗ ಮೂರನೇ ಅಲೆನಿಯಂತ್ರಣಕ್ಕೆ ಸಿದ್ಧತೆಗಳನ್ನು ಕೈಗೊಳುವುದಕ್ಕಾಗಿವರದಿ ನೀಡಲು ಸರ್ಕಾರ ಕಾರ್ಯಪಡೆಯನ್ನುರಚಿಸಿದೆ. ಅದು ವರದಿ ನೀಡುವವರೆಗೆ ಮತ್ತುಸರ್ಕಾರ ಆ ಕುರಿತು ನಿರ್ಧಾರಗಳನ್ನುಕೈಗೊಳ್ಳುವವರೆಗೆ ಯಾವುದೇ ಕೋವಿಡ್‌ ಆರೈಕೆಕೇಂದ್ರ ಮತ್ತು ಟ್ರಯಾಜ್‌ ಸೆಂಟರ್‌ಗಳನ್ನುಮುಚ್ಚಬಾರದು ಅಥವಾ ಸ್ಥಗಿತಗೊಳಿಸಬಾರದುಎಂದು ರದ್ದುಗೊಳಿಸಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಪಾಲಿಕೆ ಪರ ವಾದ ಮಂಡಿಸಿದ ವಕೀಲರಾದವಿ.ಶ್ರೀನಿಧಿ,ಯಾವುದೇ ಕೋವಿಡ್‌ ಆರೈಕೆಕೇಂದ್ರಗಳನ್ನೂ ಪಾಲಿಕೆ ಮುಚ್ಚಿಲ್ಲ, ಮೂರನೇಅಲೆ ಎದುರಿಸಲು ಪಾಲಿಕೆ ಎಲ್ಲ ರೀತಿಯಲ್ಲೂಸಜ್ಜಾಗಿದೆ ಎಂದು ನ್ಯಾಯಾಲಯಕ್ಕೆ ಭರವಸೆನೀಡಿದರು. ಪ್ರಕರಣದಲ್ಲಿ ನ್ಯಾಯಾಲಯಕ್ಕೆಸಹಕರಿಸಲು ಅಮಿಕಸ್‌ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲ ವಿಕ್ರಂ ಹುಯಿಲಗೋಳ,ಮೊದಲನೇ ಅಲೆಯ ನಂತರ ಬಿಳಿಯಾನೆಯಂತಾಗಿದ್ದ ಕೆಲವು ಕೋವಿಡ್‌ ಆರೈಕೆ ಕೇಂದ್ರಗಳನ್ನುಮುಚ್ಚಲಾಗಿತ್ತು. ಆನಂತರ ಎರಡನೇ ಅಲೆವೇಳೆ ಹೊಸ ಕೋವಿಡ್‌ ಕೇಂದ್ರಗಳನ್ನು ಸೃಷ್ಟಿಸಲಾಯಿತು. ಹಾಗಾಗಿ ಇದೀಗ ಸಮತೋಲಿತವಾದನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next