Advertisement
ನಿಮ್ಮ ಕ್ಷೇತ್ರದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ?
Related Articles
Advertisement
ಸೋಂಕಿತರಿಗೆ ಯಾವ ರೀತಿಯ ಸೇವೆ ನೀಡಲಾಗುತ್ತಿದೆ?
ಕೊರೊನಾ ಸೋಂಕಿತರುಬಡವರಾದರೆ ವೈಯಕ್ತಿ ಕವಾಗಿಕುಟುಂಬಕ್ಕೆ ಬೇಕಾದಷ್ಟುಆಹಾರ ಧಾನ್ಯನೀಡಲಾಗುತ್ತಿದೆ. ಕೊರೊನಾ ಸೋಂಕಿತರುಮನೆಯಲ್ಲೇ ಹೋಂ ಐಸೋಲೇಷನ್‌ಗೆ ಅವಕಾಶಇದ್ದರೆ ಮೆಡಿಕಲ್ ಕಿಟ್ ಸಹಿತ ಎಲ್ಲ ಅಗತ್ಯ ವಸ್ತುಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಹೊರಗಡೆಓಡಾಡದಂತೆ ನಿಗಾ ವಹಿಸುತ್ತೇವೆ.
ಸೋಂಕಿತರಿಗೆ ನೆರವು ಕಲ್ಪಿಸಲು ಸ್ವಯಂ ಸೇವಕರ ತಂಡಇದೆಯಾ?
ಹೌದು, 100 ಜನರ ಸ್ವಯಂಸೇವಕರ ತಂಡ ದಿನದ 24 ಗಂಟೆಕೆಲಸ ಮಾಡು ತ್ತಿದೆ. ವಾರ್ ರೂಂತೆರೆಯಲಾಗಿದ್ದು ಅಲ್ಲಿ ವೈದ್ಯಕೀಯಸಿಬ್ಬಂದಿ ಮತ್ತು ಸ್ವಯಂ ಸೇವಕರುಎಲ್ಲೆಲ್ಲಿ ಹಾಸಿಗೆ ಲಭ್ಯ ಇದೆ, ಯಾವಸೌಲಭ್ಯ ಇದೆ ಎಂಬುದರ ಮಾಹಿತಿನೀಡುತ್ತದೆ.
ಬಡವರ್ಗಕ್ಕೆ ನೀಡುತ್ತಿರುವನೆರವು ಏನು?
ಇಸ್ಕಾನ್‌ನ ಅಕ್ಷಯ ಪಾತ್ರ ವತಿಯಿಂದ ನಿತ್ಯ 1 ಸಾವಿರ ಆಹಾರಪೊಟ್ಟಣ ನಮ್ಮ ಕ್ಷೇತ್ರಕ್ಕೆನೀಡುತ್ತಿದ್ದಾರೆ. ಅವರ ಸೇವೆಗೆನಾವು ಅಭಿನಂದನೆ ಸಲ್ಲಿಸುತ್ತೇವೆ. ಜತೆಗೆ, ನಮ್ಮಕಡೆಯಿಂದ 4 ಸಾವಿರ ಆಹಾರ ಪೊಟ್ಟಣ ಅಗತ್ಯಇದ್ದವರಿಗೆ ಪೂರೈಕೆ ಮಾಡುತ್ತಿದ್ದೇವೆ.
ಸೋಂಕಿತರಿಗೆ ಎಲ್ಲೆಲ್ಲಿ ಚಿಕಿತ್ಸೆನೀಡಲಾಗುತ್ತಿದೆ ?
ರಕ್ಷಣಾ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡುಸೆಂಟ್ ಜಾನ್ಸ್ ರಸ್ತೆಯ ಕಾಮರಾಜ್ ರಸ್ತೆಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ 55 ಆಕ್ಸಿಜನ್‌ಯುಕ್ತ 100 ಹಾಸಿಗೆ ಆಸ್ಪತ್ರೆ ತೆರೆಯಲಾಗಿದೆ. ಜತೆಗೆ,ಬೌರಿಂಗ್, ಚರಕ, ಎಚ್‌ಬಿಎಸ್, ಶಿಫಾ ಆಸ್ಪತ್ರೆಗಳುನಮಗೆ ತುಂಬಾ ಸಹಾಯ ಮಾಡುತ್ತಿವೆ. ಅಲ್‌ಅಮೀನ್ ಆಸ್ಪತ್ರೆ ಮುಚ್ಚಿ ಹೋಗಿದ್ದು ಕೋವಿಡ್‌ಗಾಗಿ ಪ್ರಾರಂಭಿಸಿದ್ದು ಎಲ್ಲ ಸೌಕರ್ಯಒದಗಿಸಿದ್ದೇವೆ.
ಕೊರೊನಾ ಲಸಿಕೆ ಅಭಿಯಾನ ಹೇಗಿದೆ?
ಲಸಿಕೆ ಅಭಿಯಾನಕ್ಕೆ ತಂಡ ರಚಿಸಲಾಗಿದೆ ಆದರೆ,ಲಸಿಕೆಯೇ ಸಿಗುತ್ತಿಲ್ಲ. ಅದೇ ಸಮಸ್ಯೆಯಾಗಿದೆ.ಇದುವರೆಗೂ ನಮ್ಮ ಕ್ಷೇತ್ರದಲ್ಲಿ 18 ರಿಂದ 44ವಯಸ್ಸಿನವರಿಗೆ 10 ಸಾವಿರ ಮಂದಿಗೆ ಮಾತ್ರಲಸಿಕೆ ನೀಡಲಾಗಿದೆ.
ನಮ್ಮ ಕ್ಷೇತ್ರದಲ್ಲಿ ಬಡವರುಹಾಗೂ ಶ್ರಮಿಕ ವರ್ಗದವರುಅತಿ ಹೆಚ್ಚು. ಸರ್ಕಾರವು ಆದ್ಯತೆಮೇರೆಗೆ ಲಸಿಕೆಗೆ ಹೆಚ್ಚುಗಮನನೀಡಿದರೆ ಅನುಕೂಲವಾಗುತ್ತದೆ. ಕ್ಷೇತ್ರದಲ್ಲಿ ಲಸಿಕೆಅಭಿಯಾನಕ್ಕಾಗಿಯೇ ವಿಶೇಷತಂಡ ರಚಿಸಲಾಗಿದೆ. ಬೌರಿಂಗ್‌ಆಸ್ಪತ್ರೆಯಲ್ಲಿ 10 ಐಸಿಯು ಹಾಸಿಗೆಸಾಮರ್ಥ್ಯ 150ಕ್ಕೆ ಹೆಚ್ಚಿಸಲಾಗಿದೆ.ಇದರಿಂದ ಮೂರನೇ ಅಲೆಎದುರಿಸಲು ಅನುಕೂಲವಾಗುತ್ತದೆ.-
ರಿಜ್ವಾನ್ ಅರ್ಷದ್
ಎಸ್.ಲಕ್ಷ್ಮಿನಾರಾಯಣ