Advertisement
ಸೌಲಭ್ಯಗಳನ್ನು ಕಲ್ಪಿಸಿ: ಕೋವಿಡ್ 2ನೇ ಅಲೆ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಸಿಬ್ಬಂದಿಗೆ ಆರೋಗ್ಯ ಭದ್ರತೆ, ಉಚಿತ ಚಿಕಿತ್ಸೆ ಮತ್ತು ಜೀವ ವಿಮೆ ಒದಗಿಸ ಬೇಕು. ಮೂರು ತಿಂಗಳಿಗಾಗುವಂತೆ ದಿನಸಿ ಪದಾ ರ್ಥಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಆಡಳಿತ ಸಂಸ್ಥೆ ಗಳು ರೂಪಿಸುವ ಯೋಜನೆಗಳಲ್ಲಿ ಮತ್ತು ಟಾಸ್ಕ್ ಫೋರ್ಸ್ನಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ನಡೆಸುವಂತೆ ಆದೇಶ ಹೊರಡಿಸಬೇಕು. ಕೋವಿಡ್ನಿಂದ ಸಾವು ಸಂಭವಿಸಿ ತಮ್ಮವರನ್ನು ಕಳೆ ದುಕೊಂಡು ನೋವಿನಲ್ಲಿರುವ ಕುಟುಂಬಗಲಿಗೆ ತಲಾ 5 ಲಕ್ಷ ಆರ್ಥಿಕ ನೆರವು ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.