ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿಎಲ್ಲಾ ವರ್ಗದ ಜನರಿಗೆ ಸಮಸ್ಯೆಗಳುಉಂಟಾ ಗಿದ್ದು ಇದರ ಮಧ್ಯೆ ಮಂಗಳಮುಖೀ ಸಮುದಾಯದವರು ಹಲವುಸಮಸ್ಯೆ ಗಳನ್ನು ಎದುರಿಸುತ್ತಿದ್ದು ಇವರಿಗೆಸಹಾಯ ಮಾಡಬೇಕೆಂಬ ಉದ್ದೇಶದಿಂದದಿನಸಿ ಕಿಟ್ ವಿತರಣೆ ಹಾಗೂ ಲಸಿಕೆನೀಡುವ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಡಾ. ಉದಯ್ ಗರುಡಾಚಾರ್‌ಹೇಳಿದರು.
ಚಿಕ್ಕಪೇಟೆ ವಿಧಾನಸಭಾ ವ್ಯಾಪ್ತಿಯಟೌನ್ ಹಾಲ್ ಮುಂಭಾಗ ಗರುಡ ಫೌಂಡೇ ಶನ್ ವತಿಯಿಂದ ಮಂಗಳ ಮುಖೀಯರಿಗೆ ದಿನಸಿ ಕಿಟ್ ವಿತರಣೆ ಮತ್ತು ಬಿಬಿಎಂಪಿ ವತಿಯಿಂದ ಲಸಿಕಾ ಅಭಿಯಾನಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಮಂಗಳಮುಖೀಯರಿಗೆಸಾಮಾಜಿಕ ಗೌರವ ನೀಡಿ ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಲಸಿಕೆನೀಡುವ ಕಾರ್ಯ ಹಮ್ಮಿಕೊಂಡಿದ್ದುಮುಂ ದಿನ ದಿನಗಳಲ್ಲಿ ಕ್ಷೇತ್ರವ್ಯಾಪ್ತಿಮಂಗಳಮುಖೀಯರಿಗೆ ಲಸಿಕೆ ನೀಡುವಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ.ಕ್ಷೇತ್ರದಲ್ಲಿ ಕೊರೊನಾ ದಿಂದ ತೊಂದರೆಗೊಳಗಾಗಿದೆ ಎಲ್ಲಾ ಜನರನ್ನು ಗುರುತಿಸಿಅವರಿಗೆ ಬೇಕಿರುವ ಅನುಕೂಲಗಳನ್ನುಮಾಡಿ ಕೊಡುವ ಪ್ರಯತ್ನ ಮಾಡುತ್ತೇನೆಎಂದು ಹೇಳಿದರು.
ಮಂಗಳಮುಖೀಯರು ಎಲ್ಲಾ ವರ್ಗದ ವರಂತೆ ಲಸಿಕೆಪಡೆದು ಆರೋಗ್ಯವಂತರಾಗಿ ಬದುಕಿಜೀವನ ಸಾಗಿಸಬೇಕೆಂಬ ನಮ್ಮ ಆಶಯವಾಗಿದ್ದು ಮಹಾಮಾರಿ ಇಂದ ಅವರನ್ನುಕಾಪಾಡಿ ಆರೋಗ್ಯವಂತ ಬದುಕುನಡೆಸಲು ಸಹಕಾರ ನೀಡುವುದು ನಮ್ಮೆಲ್ಲರಕರ್ತವ್ಯವೆಂದು ಆಶಯ ವ್ಯಕ್ತಪಡಿಸಿದರು.ಪೊಲೀಸ್ ಅಧಿಕಾರಿಗಳಾದ ರವಿಕಾಂತೇಗೌಡ, ರಾಜಣ್ಣ, ನಜ್ಮಾ ಇದ್ದರು.