ಹಾಸನ: ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸಾಸೇವೆ ನೀಡುತ್ತಾ ಹಾಸನ ವೈದ್ಯಕೀಯ ಕಾಲೇಜು(ಹಿಮ್ಸ್) ಆಸ್ಪತ್ರೆ ರಾಜ್ಯದ ಗಮನ ಸೆಳೆದಿದ್ದರೆ, ಈಗಹೋಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇಅಗ್ರಸ್ಥಾನ ಪಡೆದು ಪ್ರಶಂಸೆಗೆ ಪಾತ್ರವಾಗಿದೆ.
ಹಿಮ್ಸ್‌ನ ಅಂತಿಮ ವರ್ಷದ ಎಲ್ಲ 70 ವಿದ್ಯಾರ್ಥಿಗಳು ಸೋಂಕಿತರ ಸೇವೆ ಹಾಗೂ ಆನ್‌ಲೈನ್‌ಮೂಲಕ ಹೋಂ ಕ್ವಾರಂಟೈನ್‌ನಲ್ಲಿ ಇರುವವರಆರೋಗ್ಯ ವಿಚಾರಣೆ, ಕೌನ್ಸೆಲಿಂಗ್ ಕಾರ್ಯದಲ್ಲಿತೊಡಗಿ ಮೆಚ್ಚುಗೆ ಗಳಿಸಿದ್ದಾರೆ.ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಮೂಲಕ ರಾಜ್ಯದ ಎಲ್ಲ 45 ವೈದ್ಯಕೀಯಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು, ಶೇ100 ರ ಸಾಧನೆಯೊಂದಿಗೆ ಹಿಮ್ಸ್ ಮೊದಲ ಸ್ಥಾನದಲ್ಲಿದೆ.
ಆನ್‌ಲೈನ್‌ನಲ್ಲಿ ದಿನಕ್ಕಿಷ್ಟು ಹೋಂ ಕ್ವಾರೆಂಟೈನಲಿ Éರುವ ರೋಗಿಗಳ ಆರೋಗ್ಯ ವಿಚಾರಿಸುವುದು,ಕೌನ್ಸೆ ಲಿಂಗ್ ಹಾಗೂ ಮಾರ್ಗದರ್ಶನ ಮಾಡುವಕರ್ತವ್ಯ ನಿರ್ವಹಣೆಯ ಹೊಣೆಯನ್ನು ಎಲ್ಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಪ್ರತೀ ವಾರ ಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್‌ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯಮೌಲ್ಯ ಮಾಪನ ಮಾಡಿ ಕಾಲೇಜುವಾರುಮೌಲ್ಯಾಂಕ ಪ್ರಕಟಿಸಲಾಗುತ್ತದೆ.
ಈ ಸಂಬಂಧರಾಜ್ಯದ ಎಲ್ಲ 45 ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ. ಎಸ್.ಎಸ್. ಇನ್ಸ್‌ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರೀಸರ್ಚ್ ಸೆಂಟರ್ ಹಾಗೂಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ .
ಕೇವಲ ಹೊಂ ಕ್ವಾರಂಟೈನ್ ನಲ್ಲಿದ್ದವರ ಸೇವೆಮಾತ್ರ ವಲ್ಲದೆ ಹಿಮ್ಸ್‌ನ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿಯೂ ಸೋಂಕಿತರ ಚಿಕಿತ್ಸೆಯಲ್ಲಿಯೂಅಂತಿಮ ವರ್ಷದ ವಿದ್ಯಾರ್ಥಿಗಳು ತೊಡಗಿಜಿಲ್ಲೆಯ ಚಿಕಿತ್ಸಾ ವ್ಯವಸ್ಥೆಗೆ ಬಲ ತುಂಬಿದ್ದಾರೆ.ಹಿಮ್ಸ್‌ನ ಸುಮಾರು 800 ಹಾಸಿಗೆಗಳ ಕೊರೊನಾಆಸ್ಪತ್ರೆಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್‌ನಿರ್ದೇಶಕರಾದ ಡಾ.ಬಿ.ಸಿ.ರವಿಕುಮಾರ್,ಪ್ರಾಂಶು ಪಾಲ ಡಾ.ನಾಗೇಶ್ ಹಾಗೂ ವೈದ್ಯಕೀಯಅಧೀಕ್ಷಕ ಡಾ.ವಿ.ಆರ್. ಕೃಷ್ಣಮೂರ್ತಿ ಅವರುಅಭಿನಂದನೆ ಸಲ್ಲಿಸಿದ್ದಾರೆ.