ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುನಿಯಂತ್ರಿಸಲು ಜಿಲ್ಲಾಡಳಿತ ಜೂ.7ರ ಬೆಳಗ್ಗೆ 6ಗಂಟೆಯವರೆಗೆ ಘೋಷಿಸಿದ್ದ 2ನೇ ಕಠಿಣ ಲಾಕ್‌ಡೌನ್‌ಯಶಸ್ವಿ ಆಗಿದೆ. ಈ ಅವಧಿ ಯಲ್ಲಿ ಅನಗತ್ಯವಾಗಿ ಸಂಚಾರ ನಡೆಸಿದ 133 ವಾಹನ ಜಪ್ತಿ ಮಾಡಿರುವಪೊಲೀಸರು 23 ದೂರು ದಾಖಲಿಸಿ, 18,800 ರೂ.ದಂಡ ವಸೂಲಿ ಮಾಡಿದ್ದಾರೆ.
ಈ ಕಠಿಣ ಲಾಕ್‌ಡೌನ್ ಅವ ಧಿಯಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರಡಿವೈಎಸ್ಪಿ ರವಿಶಂಕರ್, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮನೆಯಿಂದಹೊರಬಂದ ವಾಹನಗಳಿಗೆ ದಂಡ ವಿ ಧಿಸುವ ಜೊತೆಗೆಜಪ್ತಿ ಮಾಡಿ ಎಚ್ಚರಿಕೆ ನೀಡಲಾಯಿತು.
ಸೋಂಕು ನಿಯಂತ್ರಣಕ್ಕೆ: ರಾಜ್ಯದ ಬೇರೆ ಜಿಲ್ಲೆಗಳಿಗೆಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕುಗಣನೀಯವಾಗಿ ಕಡಿಮೆ ಆಗಿದೆ. ಆದರೆ, ಸಂಪೂರ್ಣಸೋಂಕು ಮುಕ್ತ ಮಾಡಲು ಡೀಸಿ ಆರ್.ಲತಾ ನೇತೃತ್ವದಜಿಲ್ಲಾ ಕಾರ್ಯಪಡೆ ಸಮಿತಿ ಮೂರು ಹಂತದಲ್ಲಿ ಜಿಲ್ಲಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿತು. ಇದರ ಫಲದಿಂದಜಿಲ್ಲೆಯಲ್ಲಿ ಸೋಂಕು ನಿಯಂತ್ರಣಗೊಂಡಿದೆ.ಮಾರ್ಗಸೂಚಿ ಪಾಲಿಸಿ: ಜೂ.7, ಬೆಳಗ್ಗೆ 6ರಿಂದ ದಿನಸಿಇನ್ನಿತರೆ ಅಗತ್ಯ ವಸ್ತು ಖರೀದಿ ಮಾಡುವ ಅಂಗಡಿಮುಂಗಟ್ಟುಗಳ ಮಾಲಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟುಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡುವ ಜೊತೆಗೆ ಜಿಲ್ಲಾಡಳಿತ ಎಚ್ಚರವಹಿಸಬೇಕಾಗಿದೆ.
ಅಧಿಕಾರಿಗಳ ಸಾಮೂಹಿಕ ಪ್ರಯತ್ನ: ಆರೋಗ್ಯ ಸಚಿವಡಾ.ಕೆ.ಸುಧಾಕರ್ ತವರು ಜಿಲ್ಲೆಯಲ್ಲಿ ಕೊರೊನಾಸೋಂ ಕಿ ತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇಲೋಪ ಆಗದಂತೆ ಎಚ್ಚರವಹಿಸಲು ಜಿಲ್ಲಾ ಧಿಕಾರಿ ಆರ್.ಲತಾ ನೇತೃತ್ವದಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಅಪರಜಿಲ್ಲಾ ಧಿಕಾರಿ ಅಮರೇಶ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಸಿ ರಘುನಂದನ್, ಜಿಲ್ಲಾ ಆರೋಗ್ಯಾ ಧಿಕಾರಿಡಾ.ಇಂದಿರಾ ಆರ್.ಕಬಾಡೆ, ಜಿಲ್ಲೆಯ ಶಾಸಕರು,ತಹಶೀಲ್ದಾರ್, ತಾಪಂ ಇಒ, ಆರೋಗ್ಯಾಧಿ ಕಾರಿಗಳು,ಗ್ರಾಪಂ ಸದಸ್ಯರು, ಪಿಡಿಒ, ಕೊರೊನಾ ಕಾರ್ಯಪಡೆಗಳಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತರು, ವಿಶೇಷವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಮತ್ತು ಪ್ರತಿಯೊಂದು ತಾಲೂಕುಗಳಿಗೆ ನಿಯೋಜನೆಗೊಂಡಿರುವ ನೋಡಲ್ ಅ ಧಿಕಾರಿಗಳ ಸಾಮೂಹಿಕ ಶ್ರಮದಿಂದ ಜಿಲ್ಲೆಯಲ್ಲಿ ಸೋಂಕು ದಿನೇ ದಿನೆ ನಿಯಂತ್ರಣಕ್ಕೆ ಬರುತ್ತಿದೆ.
ಜಿಲ್ಲಾ ಧಿಕಾರಿ, ಜಿಪಂ ಸಿಇಒ ರೌಂಡ್ಸ್: ಜಿಲ್ಲೆಯಲ್ಲಿಕೊರೊನಾ ಸೋಂಕು ನಿಯಂತ್ರಿಸಲು ಜಿಲ್ಲಾ ಧಿಕಾರಿಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್ ತಮ್ಮ ಅ ಧೀನಅ ಧಿಕಾರಿಗಳೊಂದಿಗೆ ಜಿಲ್ಲಾದ್ಯಂತ ಸಂಚರಿಸಿ, ಕೋವಿಡ್‌ಕೇರ್ ಸೆಂಟರ್‌ಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯ ಪರಿಶೀಲಿಸಿದರು. ಗ್ರಾಪಂ ಮಟ್ಟದ ಕೊರೊನಾಕಾರ್ಯಪಡೆಗಳ ಸದಸ್ಯರೊಂದಿಗೆ ಸಭೆ ನಡೆಸಿ ಪ್ರಗತಿಊಟ, ನೀರು ವಿತರಣೆ ಪರಿಶೀಲಿಸಿದರು.
ಎಂ.ಎ.ತಮೀಮ್ ಪಾಷ