Advertisement

ಕೊರೊನಾ ಸಮರಕ್ಕೆ ಸ್ಟಾರ್ಟಪ್‌ಗಳ ‌ಆವಿಷ್ಕಾರ ಕೊಡುಗೆ

08:12 PM May 25, 2021 | Team Udayavani |

ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿಇಡೀ ಜಗತ್ತು ನಿರತವಾಗಿರುವ ನಡುವೆಯೇಸ್ಟಾರ್ಟಪ್‌ ರಾಜಧಾನಿ ಬೆಂಗಳೂರಿನ ವಿವಿಧ ಸ್ಟಾರ್ಟಪ್‌ಗ್ಳೂ ಸಹ ಕೊರೊನಾ ಮಣಿಸಲು ವಿವಿಧ ಉತ್ಪನ್ನಗಳ ಆವಿಷ್ಕಾರದಲ್ಲಿ ತೊಡಗಿವೆ.ಸೆಂಟರ್‌ ಫಾರ್‌ ಸೆಲ್ಯುಲಾರ್‌ ಆ್ಯಂಡ್‌ಮಾಲಿಕ್ಯುಲರ್‌ ಪ್ಲಾಟ್‌ ಫಾರ್ಮಸ್‌ (ಸಿ-ಕ್ಯಾಂಪ್‌)ಕೇಂದ್ರದಲ್ಲಿರುವ ಸ್ಟಾರ್ಟಪ್‌ಗ್ಳು ಕೋವಿಡ್‌ಸೋಂಕು ತಡೆ ಮುನ್ನೆಚ್ಚರಿಕೆ ಸಾಧನಗಳ ಅಭಿವೃದ್ಧಿಪಡಿಸಿದ್ದು, ದೀರ್ಘಾವಧಿವರೆಗೆ ಬ್ಯಾಕ್ಟಿರಿಯಾ,ವೈರಾಣು ರಕ್ಷಕವಾಗಿ ಕಾರ್ಯ ನಿರ್ವಹಿಸುವ”ಹ್ಯಾಂಡ್‌ ಸ್ಯಾನಿಟೈಸರ್‌’, “ಸಫೇìಸ್‌ ಕ್ಲೀನರ್‌’ಅಭಿವೃದ್ಧಿಪಡಿಸಿವೆ.

Advertisement

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ತಡೆಜತೆಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲುಪೂರಕವಾದ ಸಾಧನಗಳ ಅಭಿವೃದ್ಧಿಗೂ ನಾನಾಸ್ಟಾರ್ಟಪ್‌ಗ್ಳು ಒತ್ತು ನೀಡಿದೆ. ಅದರಂತೆ “ಐ ಶೀಲ್ಡ್ ‘(ಇನ್‌ಫೆಕ್ಷನ್‌ ಶೀಲ್ಡ…) ಸ್ಟಾರ್ಟಪ್‌ ಸುಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.ಐ ಶೀಲ್ಡ್  ಇಂಡಿಯಾ ಸ್ಟಾರ್ಟಪ್‌ ವತಿಯಿಂದದೀರ್ಘಾವಧಿವರೆಗೆಕಾರ್ಯ ನಿರ್ವಹಿಸುವಹ್ಯಾಂಡ್‌ಸ್ಯಾನಿಟೈಸರ್‌, ಸಫೇìಸ್‌ ಕ್ಲೀನರ್‌ ಅಭಿವೃದ್ಧಿಪಡಿಸಲಾಗಿದೆ. ಆಲ್ಕೋಹಾಲ್‌ ಮಿಶ್ರಿತ ಹ್ಯಾಂಡ್‌ಸ್ಯಾನಿಟೈಸರ್‌ 2-3 ನಿಮಿಷಗಳಲ್ಲಿ ಒಣಗುವುದರಿಂದ20- 30 ನಿಮಿಷಕ್ಕೊಮ್ಮೆ ಬಳಸಬೇಕಾಗುತ್ತದೆ.]

ಆದರೆ”ಟೆಕ್‌ ಗ್ಲೋವ್‌’ ಸ್ಯಾನಿಟೈಸರ್‌ ಬಳಸಿದರೆ ನಾಲ್ಕುಗಂಟೆವರೆಗೆ ಬ್ಯಾಕ್ಟೀರಿಯಾ, ವೈರಾಣು ವಿರುದ್ಧ ಅದುಕಾರ್ಯ ನಿರ್ವಹಿಸುತ್ತಿರುತ್ತದೆ. ಇದರಿಂದ ಆಗಾಗ್ಗೆಸ್ಯಾನಿಟೈಸರ್‌ ಬಳಸುವ ಅಗತ್ಯ ಬರುವುದಿಲ್ಲ’ ಎಂದುಐ ಶೀಲ್ಡ್  ಸ್ಟಾರ್ಟ್‌ಆ್ಯಪ್‌ನ ಸಹ ಸ್ಥಾಪಕ ಎಸ್‌. ನಿತೀಶ್‌”ಉದಯವಾಣಿ’ಗೆ ತಿಳಿಸಿದರು.

ದೇಶದಲ್ಲೇ ಪ್ರಥಮ: “ಟೆಕ್‌ ಕ್ಲೀನ್‌’ ಹೆಸರಿನಸಫೇìಸ್‌ ಕ್ಲೀನರ್‌ ಅಭಿವೃದ್ಧಿಪಡಿಸಲಾಗಿದೆ. ಈದ್ರಾವಣವನ್ನು ಯಾವುದೇ ವಸ್ತು, ಉಪಕರಣ,ಸಾಧನದ ಮೇಲೆ ಸಿಂಪಡಿಸಿದರೆ ಮೂರು ದಿನಗಳಕಾಲ ಇದು ಬ್ಯಾಕ್ಟೀರಿಯಾ, ವೈರಾಣು ತಡೆಯುವಲ್ಲಿಸಕ್ರಿಯವಾಗಿರುತ್ತದೆ. ಇದನ್ನು ಆಸ್ಪತ್ರೆ, ಕೋವಿಡ್‌ಕೇರ್‌ ಸೆಂಟರ್‌ ಇತರೆಡೆ ಪರಿಣಾಮಕಾರಿಯಾಗಿಬಳಸಬಹುದಾಗಿದೆ. ದೀರ್ಘಾವಧಿವರೆಗೆ ವೈರಾಣುಗಳನ್ನು ತಡೆಗಟ್ಟುವ ಕ್ಲೀನರ್‌ ದೇಶದಲ್ಲೇ ಮೊದಲಪ್ತಯತ್ನವಾಗಿದೆ. ಈ ಎರಡೂ ಉತ್ಪನ್ನಗಳಿಗೆ ಇತ್ತೀಚೆಗೆಕಾಯ್ದೆಯಡಿ ದೃಢೀಕರಣ ದೊರಕಿದ್ದು, ಪರವಾನಗಿಸಿಕ್ಕಿದೆ. ಬಯೋ ಮಾನಿಟಾ ಸ್ಟಾರ್ಟ್‌ಆ್ಯಪ್‌ ಗಾಳಿಶುದ್ಧೀಕರಣ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.ಈ ಸಾಧನದಲ್ಲಿರುವ ಫಿಲ್ಟರ್‌ ಗಾಳಿಯಲ್ಲಿರುವಬ್ಯಾಕ್ಟೀರಿಯಾ, ವೈರಾಣುವನ್ನು ಶೋಧಿಸಿ,ಕೊಲ್ಲುತ್ತದೆ.

ಐಸಿಯು, ಕ್ಯಾನ್ಸಪೀìಡಿತರು, ರೋಗ ನಿರೋಧಕ ಶಕ್ತಿಕಡಿಮೆಯಿದ್ದವರು ಇರುವ ಕಡೆ ಇದನ್ನುಬಳಸಬಹುದಾಗಿದೆ. ಬಗ್‌ವಕÕ… ಸ್ಟಾರ್ಟ್‌ಆ್ಯಪ್‌ಬ್ಯಾಕ್ಟೀರಿಯಾ, ವೈರಾಣು ಹಾವಳಿ ತಡೆಗೆ ಔಷಧಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಪರೀಕ್ಷಾರ್ಥ ಪ್ರಯೋಗ ಹಂತದಲ್ಲಿದೆ.ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರನ್ನು “ಕಾವೇರಿ’ ನಿವಾಸದಲ್ಲಿ ಭೇಟಿಯಾಗಿದ್ದಐಶೀಲ್ಡ್  ಇಂಡಿಯಾ ಸಹ ಸ್ಥಾಪಕ ಎಸ್‌. ನಿತೀಶ್‌,ಬಯೋ ಮಾನಿಟಾ ಸಹ ಸ್ಥಾಪಕಿ ಡಾ.ಜನನಿ, ಬಗ್‌ವರ್ಕಸ್‌ ಸಹಸ್ಥಾಪಕ ಡಾ.ಆನಂದ್‌ ಹೊಸ ಉತ್ಪನ್ನ,ಸಾಧನಗಳನ್ನು ನೀಡಿ ಅವುಗಳ ಉಪಯುಕ್ತತೆ ಬಗ್ಗೆಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next