Advertisement
ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣದ ಜತೆಗೆಬಡಜನರಿಗೆ ಲಾಕ್‌ಡೌನ್ ಸಂಕಷ್ಟ ಎದುರಾಗದಂತೆನೋಡಿಕೊಳ್ಳಲಾಗಿದೆ ಎಂದು ಹೇಳುತ್ತಾರೆ.
Related Articles
Advertisement
1,09,754 ಮಂದಿಗೆ ಲಸಿಕೆ ಹಾಕಲಾಗಿದೆ. ರಾಜೇಂದ್ರನಗರ ಕೊಳಗೇರಿಯಲ್ಲಿಯುನೈಟೆಡ್ ವೇ ಸೇವಾ ಸಂಸ್ಥೆ ಯುಮಾರ್ಗ ಜತೆಗೂಡಿ 867 ಮಂದಿಗೆ ಲಸಿಕೆಹಾಕಿಸಿದೆ.
ಲಸಿಕೆಗಾಗಿ ಕೈಗೊಂಡಿರುವ ವಿಶೇಷ ಕ್ರಮಗಳೇನು?
ವಿಶೇಷ ಚೇನತರಿಗಾಗಿ ಪ್ರಸ್ಟೀಜ್ ಅಪಾರ್ಟ್‌ಮೆಂಟ್ ಹಾಗೂ ಕೋರಮಂಗಲ 8 ನೇ ಬ್ಲಾಕ್,ಆಟೋ, ಟ್ಯಾಕ್ಸಿ ಚಾಲಕರು, ಬೀದಿ ವ್ಯಾಪಾರಿಗಳು,ಕಟ್ಟಡ ಕಾರ್ಮಿಕರಿಗಾಗಿ ಐದನೇ ಬ್ಲಾಕ್ ಕೆಎಚ್‌ಬಿ ಕಾಲೋನಿಯ ಬಿಬಿಎಂಪಿ ಕಟ್ಟಡ, ಬಿಪಿಎಲ್‌ಕಾರ್ಡ್‌ದಾರರ ಕುಟುಂಬಕ್ಕಾಗಿ ರಾಜೇಂದ್ರ ನಗರದಸರ್ಕಾರಿ ಶಾಲೆ, ಬೆಂಗಳೂರು ಡೈರಿ ಸಿಬ್ಬಂದಿಗಾಗಿಡೈರಿ ಕ್ಯಾಂ.ಪಸ್, ಪೆಟ್ರೋಲ್ ಬಂಕ್‌ಮತ್ತು ಅಡುಗೆ ಆನಿಲ ವಿತರಣೆ ಕಂಪನಿಸಿಬ್ಬಂದಿಗಾಗಿ ಐದನೇ ಬ್ಲಾಕ್‌ಜ್ಞಾನಮಂದಿರ, ಕೊವಿಡ್ ಕೆಲಸಕ್ಕೆನಿಯೋಜಿಸಿರುವ ಶಿಕ್ಷಕರಿಗೆ ಎನ್‌ಜಿವಿಹೌಸಿಂಗ್ ಕಾಂಪ್ಲೆಕ್ಸ್ ಶರಾವತಿ ಬ್ಲಾಕ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೀಸಲುಪಡೆ ಪೊಲೀಸರು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಬಿಎಂಟಿಸಿ ಡಿಪೋನಲ್ಲಿ ಆದ್ಯತೆಮೇರೆಗೆ ಲಸಿಕೆ ಹಾಕಿಸಲಾಗುತ್ತಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿಕೈಗೊಂಡಿರುವ ಕ್ರಮಗಳೇನು?
ಆಡುಗೋಡಿಯ ಬಾಷ್ ಕ್ರೀಡಾ ಸಂಕೀರ್ಣದಲ್ಲಿ75 ಹಾಸಿಗೆ ಹಾಗೂ ಕೋರಮಂಗಲ ಒಳಾಂಗಣಕ್ರೀಡಾಂಗಣದಲ್ಲಿ 200 ಹಾಸಿಗೆ ಕೋವಿಡ್ ಕೇರ್‌ಸೆಂಟರ್ ತೆರೆಯಲಾಗಿದೆ. ಹೋಂ ಐಸೋಲೇಷನ್‌ಇರುವವರಿಗೆ ಮನೆ ಬಾಗಿಲಿಗೆ ಮೆಡಿಕಲ್ ಕಿಟ್‌ಒದಗಿಸಲಾಗುತ್ತಿದೆ.
ಬಡವರು ಹಾಗೂ ಶ್ರಮಿಕ ವರ್ಗದವರಿಗೆಯಾವ ರೀತಿ ನೆರವು ನೀಡಲಾಗುತ್ತಿದೆ?
ಆರು ಕಡೆ ಅಡುಗೆ ಕೋಣೆ ಪ್ರಾರಂಭಿಸಿ ನಿತ್ಯ 32ಸಾವಿರ ಜನರಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.8 ವಾರ್ಡ್‌ನ 77 ಸ್ಥಳಗಳಲ್ಲಿ ವಿತರಣೆ ನಡೆಯುತ್ತದೆ.ರಾಜೇಂದ್ರನಗರ ಕೊಳಗೇರಿಯ 5600 ಮನೆಗಳಿಗೂನಿತ್ಯ ಆಹಾರ ಪೊಟ್ಟಣ ಪೂರೈಕೆ ಮಾಡಲಾಗುತ್ತಿದೆ.60 ಸಾವಿರ ಆಹಾರಧಾನ್ಯಗಳ ಕಿಟ್ ವಿತರಣೆಗೂಕ್ರಮ ಕೈಗೊಳ್ಳಲಾಗಿದೆ.
ಎಸ್.ಲಕ್ಷ್ಮಿನಾರಾಯಣ