Advertisement

ಆರೈಕೆ ಜತೆಗೆ ಆರೋಗ್ಯದ ಕಾಳಜಿ ಇರಲಿ

08:17 PM May 24, 2021 | Team Udayavani |

ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಆಶಾಕಾರ್ಯಕರ್ತೆಯರ ಸೇವೆ ಅನನ್ಯವಾಗಿದ್ದು,ಸೋಂಕಿತರ ಆರೈಕೆ ಜತೆಗೆ ತಮ್ಮ ಆರೋಗ್ಯದ ಕಡೆಗಮನಹರಿಸ ಬೇಕು ಎಂದು ಶಾಸಕ ಡಿ.ಸಿ.ಗೌರಿಶಂಕರ್‌ ಸಲಹೆ ನೀಡಿದರು.

Advertisement

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಹಾರ ಕಿಟ್‌ ವಿತರಿಸಿ ಮಾತನಾಡಿದಅವರು, ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಸೋಂಕುವ್ಯಾಪಿಸುತ್ತಿದೆ. ಸೋಂಕಿತರಿಗೆಮೊದಲು ಸೇವೆಮಾಡುವುದು. ಅವರಿಗೆ ಧೈರ್ಯ ತುಂಬಿ ಮಾಹಿತಿ ನೀಡುತ್ತಿದ್ದಾರೆ.

ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡುವುದರಜತೆಗೆ ಕೊರೊನಾ ವೈರಸ್‌ ಪೀಡಿತರಾಗಿರುವಕುಟುಂಬಸ್ಥರ ನಿಗಾ ವಹಿಸುವ ಜವಾಬ್ದಾರಿ ಅವರಮೇಲಿದೆ. ನಿಮ್ಮ ಜವಾಬ್ದಾರಿ ನಿರ್ವಹಿಸುವ ಜತೆಗೆಆರೋಗ್ಯದಕಡೆ ಗಮನ ಹರಿಸಬೇಕು ಎಂದರು.ಈಗ ಅಗತ್ಯವಿರುವ ಆಹಾರಕಿಟ್‌ ವಿತರಣೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಫೇಸ್‌ಶೀಲ್ಡ…, ಮಾಸ್ಕ್  ಸೇರಿದಂತೆ ಅಗತ್ಯಪರಿಕರಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಆಯಾಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕವಿತರಿಸಲುಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಮೇಲ್ವಿಚಾರಕರ ನೇಮಕ: ಒಬ್ಬರು ವೈದ್ಯರು, ಇಬ್ಬರುನರ್ಸ್‌, ಇಬ್ಬರು ಸ್ವೀಪರ್ಸ್‌, ಒಬ್ಬರು ಮೇಲ್ವಿಚಾರಕರನ್ನು ನೇಮಿಸಿ ಎಲ್ಲರಿಗೂ ಸ್ವಂತ ಖರ್ಚಿನಲ್ಲಿ ವೇತನಪಾವತಿಸಿ ಕೋವಿಡ್‌ ಕೇರ್‌ ಸೆಂಟರ್‌ಗೆ ನೇಮಿಸಿಕೊಳ್ಳಲಾಗಿದೆ. ಕೋವಿಡ್‌ ಕೇರ್‌ ಸೆಂಟರ್‌ನಲ್ಲಿರುವರೋಗಿಗಳಿಗೆ ನೀಡುವ ಊಟ,ತಿಂಡಿಯನ್ನು ಅಲ್ಲಿನೇಮಿಸಿರುವ ಮೇಲ್ವಚಾರಕರು ತಾವೇ ಸ್ವತಃ ಸೇವಿಸಿಗುಣಮಟ್ಟದ ಖಾತ್ರಿಪಡಿಸಿದ ಬಳಿಕ ರೋಗಿಗಳಿಗೆನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

ಕೋವಿಡ್‌ ಕೇರ್‌ ಸೆಂಟರ್‌ಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದ್ದು, ಶೀಘ್ರವೇ ರೋಗಿಗಳ ಸೇವೆಗೆ ಮುಕ್ತಗೊಳಿಸಲಾಗುವುದು. ರೋಗಿಗಳುಯಾವುದೇ ರೀತಿಅಂಜಿಕೆಗೊಳಗಾಗದೆದೈರ್ಯದಿಂದಿದ್ದರೆ ಅರ್ಧ ಕಾಯಿಲೆ ಗೆಲ್ಲಬಹುದು ಎಂದರು.

ಸರ್ಕಾರದ ನಿಯಮ ಪಾಲಿಸಿ: ಕೊರೊನಾ ಎರಡನೇಅಲೆ ವಿಶ್ವವ್ಯಾಪಿಯಾಗಿ ಮಾರಣಾಂತಿಕವಾಗಿ ಹಬ್ಬಿದೆ.ರೋಗ ನಿರ್ಮೂಲನೆಗೆ ಜನರ ಸಹಭಾಗಿತ್ವ ಅಗತ್ಯ.ಸರ್ಕಾರದ ನಿಯಮಾವಳಿ ಪಾಲಿಸಿ, ಪರಸ್ಪರ ಅಂತರಕಾಪಾಡಿಕೊಂಡು, ಸ್ವತ್ಛತೆ ಪಾಲಿಸಿ ರೋಗಮುಕ್ತಜೀವನ ನಡೆಸುವಂತೆ ಸಲಹೆ ನೀಡಿದರು.ತಾ.ಜೆಡಿಎಸ್‌ ಅಧ್ಯಕ್ಷ ರಾಮಚಂದ್ರಪ್ಪ, ಹೊನ್ನುಡಿಕೆಜಿಪಂಉಸ್ತುವಾರಿಪಾಲನೇತ್ರಯ್ಯ,ಜೆಡಿಎಸ್‌ಮುಖಂಡಸೀರಾಕ್‌ ರವೀಶ್‌, ತನ್ವೀರ್‌, ಮಂಜುನಾಥ್‌, ಗಂಗಣ್ಣ,ಜಯಂತ್‌ ಗೌಡ, ಟಿಎಚ್‌ಒ ಡಾ.ಮೋಹನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next