Advertisement

ಸಾಲ ವಸೂಲಿ ಮುಂದೂಡಿ: ಶ್ರೀನಿವಾಸ್‌ ಆಗ್ರಹ

06:45 PM Jun 04, 2021 | Team Udayavani |

ತುಮಕೂರು: ಕಳೆದ ಒಂದುವರೆ ವರ್ಷದಿಂದಜನರು ಕೋವಿಡ್‌ನಿಂದ ಕೆಲಸವಿಲ್ಲದೆ, ಹೊಟ್ಟೆ,ಬಟ್ಟೆಗೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಬ್ಯಾಂಕ್‌ಗಳು ಸಾಲ ವಸೂಲಿಗೆ ಮುಂದಾಗಿದ್ದು,ಗೂಂಡಾಗಳ ಮೂಲಕ ಹಲವು ರೀತಿಯ ತೊಂದರೆ ನೀಡುತ್ತಿದ್ದಾರೆ.

Advertisement

ಇದನ್ನು ಸರ್ಕಾರ ನಿಲ್ಲಿಸಬೇಕುಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷಶ್ರೀನಿವಾಸ್‌ ಒತ್ತಾಯಿಸಿದರು.ನಗರಪಾಲಿಕೆ ಆವರಣದಲ್ಲಿ ಯುವಕಾಂಗ್ರೆಸ್‌ವತಿಯಿಂದ ಬಡ ಜನರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, ಬ್ಯಾಂಕ್‌ನವರು ನೀಡುತ್ತಿರುವ ಕಿರುಕುಳದಿಂದ ಮಾನ ಮರ್ಯಾದೆಗೆ ಅಂ ಜಿಕೆಲವರು ಆತ್ಮಹತ್ಯೆಗೆ ಯತ್ನಿಸುತ್ತಿರುವ ಪ್ರಕರಣ ವರದಿಯಾಗುತ್ತಿವೆ.

ಈ ಹಿನ್ನೆಲೆ ಸರ್ಕಾರ ಯಾವುದೇರೀತಿಯ ಸಾಲದ ವಸೂಲಿಯನ್ನು ಕನಿಷ್ಠ 6ತಿಂಗಳವರೆಗೆ ಮುಂದೂಡಿ, ಬ್ಯಾಂಕ್‌ಗಳಿಗೆ ಸೂಚನೆನೀಡಬೇಕೆಂದು ಆಗ್ರಹಿಸಿದರು.ಶೀಘ್ರ ದಿನಸಿ ಕಿಟ್‌:ಕೊರೊನಾ ಮೊದಲ ಮತ್ತುಎರಡನೇ ಅಲೆಯ ಲ್ಲಿಯೂ ಯುವ ಕಾಂಗ್ರೆಸ್‌ಸಂಕಷ್ಟದಲ್ಲಿರುವ ಜನ ರಿಗೆ ಆಹಾರದ ಕಿಟ್‌ ಜತೆಗೆದಿನಸಿ ಪದಾರ್ಥಗಳು, ಔಷಧಗಳನ್ನು ನೀಡುವಕೆಲಸ ಮಾಡುತ್ತಿದೆ. ನಗರಪಾಲಿಕೆ ನಗರದಲ್ಲಿರುವ35 ವಾರ್ಡ್‌ಗಳ ಸ್ಲಂ ನಿವಾಸಿಗಳ ಪಟ್ಟಿ ನೀಡಿದ್ದು,ಅವರೆಲ್ಲರಿಗೂ ಶೀಘ್ರ ದಲ್ಲಿಯೇ ದಿನಸಿ ಕಿಟ್‌ಗಳನ್ನುವಿತರಿಸಲಾಗುವುದು ಎಂದರು.

ಎಚ್ಚೆತ್ತು ಕೆಲಸ ಮಾಡಲಿ: ಒಂದು ಲಸಿಕೆಗೆ 900-1200 ರೂ. ನೀಡಬೇಕಾಗಿದೆ. ಬಡವರು ಈ ಹಣವನ್ನು ಇಂತಹ ಸಂಕಷ್ಟಕಾಲದಲ್ಲಿ ಭರಿಸುವುದುಕಷ್ಟಸಾಧ್ಯ. ಆದ್ದರಿಂದ ಸರ್ಕಾರ ರಾಷ್ಟ್ರದ ಎಲ್ಲಾ ಜನರಿಗೆಉಚಿತವಾಗಿ ಲಸಿಕೆ ನೀಡಬೇಕು. ಕೊರೊನಾಮಹಾಮಾರಿಯಿಂದ ಶೇ. 95ರಷ್ಟು ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆಸ್ಪಂದಿಸಬೇಕಾದ ಕೇಂದ್ರ, ರಾಜ್ಯ ಸರ್ಕಾರ ಮಂತ್ರಿಗಳು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದರು.

ಕೆಲವರು ದೆಹಲಿಯಲ್ಲಿ ಬೀಡುಬಿಟ್ಟಿದ್ದರೆ, ಇನ್ನೂಕೆಲವರು ಮನೆಬಿಟ್ಟು ಹೊರಬರುತ್ತಿಲ್ಲ. ಇದುನಿಜಕ್ಕೂ ನಾಚಿಕೆ ಗೇಡಿನ ಸಂಗತಿ. ಜನರ ಸಂಕಷ್ಟಕ್ಕೆಮಿಡಿದು ಕೆಲಸ ಮಾಡಬೇಕಾದ ಜನ ಪ್ರತಿನಿಧಿಗಳುಎಲ್ಲವನ್ನು ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳುವುದು ಸರಿಯಲ್ಲ. ಈಗಲಾದರೂ ಎಚ್ಚೆತ್ತುಕೆಲಸ ಮಾಡಲಿ ಎಂದು ಆಗ್ರಹಿಸಿದರು.

Advertisement

ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ರûಾರಾಮಯ್ಯ,ಮುಖಂಡ ರಾಜ್ಯ ಉಸ್ತುವಾರಿ ಸುರಭಿ, ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮs…, ಅನಿಲ್‌ ಕುಮಾರ್‌, ಮೋಹನ್‌,ಇಲಾಹಿ ಸಿಖಂದರ್‌, ಪಾಲಿಕೆ ಸದಸ್ಯ ನಯಾಜ್‌ಅಹಮದ್‌, ರಾಜೇಶ್‌ ದೊಡ್ಡಮನೆ, ಆಟೋರಾಜು,ಮೆಹಬೂಬಪಾಷ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next