ಚಿಕ್ಕಬಳ್ಳಾಪುರ: ಮುಂದಿನ 15 ದಿನಗಳಲ್ಲಿಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಲುಗುರಿ ಹೊಂದಿದ್ದು, ಮಿಂಡಗಲ್ಲು ಗ್ರಾಪಂಮಾದರಿಯಲ್ಲೇ ಇತರರೂ ಕ್ರಮಕೈಗೊಳ್ಳಲುಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಹಲವುಗ್ರಾಪಂಗೆ ತೆರಳಿ,ಕಾರ್ಯ ಪಡೆ ಸದಸ್ಯರೊಂದಿಗೆಸಂವಾದ ನಡೆಸಿ, ಅಲ್ಲಿನ ಕೋವಿಡ್ ಸ್ಥಿತಿಗತಿಬಗ್ಗೆ ಖುದ್ದು ಪರಿಶೀಲಿಸಿ ಮಾತನಾಡಿ,ಜಿಲ್ಲೆಯಲ್ಲಿ ಒಟ್ಟು 157 ಗ್ರಾಪಂ, 1704ಗ್ರಾಮ ಇವೆ. ಇಲ್ಲಿ ಟಾಸ್ಕ್ಫೋರ್ಸ್ ಸಮಿತಿಮಾಡಿದ್ದು, ಕೊರೊನಾ ಸೋಂಕುನಿಯಂತ್ರಣಕ್ಕೆ ಕೈಗೊಂಡಕ್ರಮಗಳ ಬಗ್ಗೆ ಪ್ರತಿನಿತ್ಯವೂ ಪ್ರಗತಿ ಪರಿಶೀಲಿಸಲಾಗುತ್ತಿದೆಎಂದು ವಿವರಿಸಿದರು.
ಹೆಚ್ಚು ಸಕ್ರಿಯ ಪ್ರಕರಣ ಇರುವ ಗ್ರಾಮಕ್ಕೆಭೇಟಿನೀಡಿಪರಿಶೀಲಿಸಲಾಗುತ್ತಿದೆ. ಸೋಂಕುದಾಖಲಾಗಿಲ್ಲದಿದ್ದರೆ ಯಥಾಸ್ಥಿತಿ ಕ್ರಮಕಾಪಾಡಿಕೊಳ್ಳುವಂತೆ, ಒಂದೆರಡು ಸಕ್ರಿಯಕೇಸುಗಳಿದ್ದರೆ ಆದಷ್ಟು ಬೇಗ ಶೂನ್ಯಕ್ಕೆತರುವಂತೆ ಸೂಚಿಸಲಾಗಿದೆ ಎಂದರು.ಮಿಂಡಗಲ್ ಕೊರೊನಾ ಮುಕ್ತ ಗ್ರಾಪಂ:ಈಗಾಗಲೇ ಮಿಂಡಗಲ್ಲು ಗ್ರಾಪಂ ಅನ್ನುಕೋವಿಡ್ ಮುಕ್ತ ಮಾಡಲಾಗಿದೆ. ಇದೇರೀತಿ ಎಲ್ಲಾ ಟಾಸ್ಕ್ ಫೋರ್ಸ್‌ಗೆ ಗುರಿ ನಿಗದಿಮಾಡಿದ್ದೇವೆ.
ಮುಂದಿನ 15 ದಿನಗಳಲ್ಲಿಜಿಲ್ಲೆ ಕೊರೊನಾ ಮುಕ್ತ ಮಾಡಲುಪ್ರಾಮಾಣಿಕ ಪ್ರಯತ್ನ ಮಾಡಲಾಗುವುದುಎಂದು ಡೀಸಿ ವಿಶ್ವಾಸ ವ್ಯಕ್ತಪಡಿಸಿ, ಈಪಂಚಾಯ್ತಿ ಸಾಧನೆಗೆ ಕೇಂದ್ರ ಸರ್ಕಾರಅಭಿನಂದನೆ ತಿಳಿಸಿದ್ದನ್ನು ಶ್ಲಾ ಸಿದರು.ಜಾನುವಾರುಗಳದ್ದೇ ಚಿಂತೆ: ರೇಣುಮಾಕಲಹಳ್ಳಿಯ ವಸತಿ ಶಾಲೆಗೆ ಭೇಟಿನೀಡಿದ್ದ ಡೀಸಿ ಮುಂದೆ ಅಳಲುತೋಡಿಕೊಂಡ ಸೋಂಕಿತರೊಬ್ಬರು, ಇಲ್ಲಿಊಟ, ತಿಂಡಿ, ಆರೋಗ್ಯ ಸೇವೆ ಎಲ್ಲವೂಚೆನ್ನಾಗಿದೆ.
ನಮಗ್ಯಾರಿಗೂ ರೋಗಲಕ್ಷಣಗಳಿಲ್ಲ. ನಮ್ಮ ಮನೆಯಲ್ಲಿಇರುವವರೆಲ್ಲರೂ 5 ದಿನಗಳಿಂದ ಇಲ್ಲೇಇದ್ದೇವೆ. ನಮ್ಮ ಗ್ರಾಮಪಂಚಾಯ್ತಿ ಸದಸ್ಯರು,ಅಧಿಕಾರಿಗಳು ಮನವೊಲಿಸಿ ಇಲ್ಲಿಗೆ ತಂದುಬಿಟ್ಟಿದ್ದಾರೆ. ಇಲ್ಲಿ ನಾವೇನೋ ಚೆನ್ನಾಗಿದ್ದೇವೆ.ಜಾನುವಾರುಗಳನ್ನು ಪಕ್ಕದ ಮನೆಯವರಿಗೆನೋಡಿಕೊಳ್ಳಲು ಹೇಳಿದ್ದೇವೆ. ನಮ್ಮನ್ನುಇಲ್ಲಿಂದ ಕಳುಹಿಸಿಕೊಡಿ ಎಂದು ಮನವಿಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿ ಡೀಸಿ, ಕನಿಷ್ಠ 10ದಿನಗಳಾದರೂ ಈ ಕೇಂದ್ರದಆರೈಕೆಯಲ್ಲಿರಬೇಕು. ನಂತರ ಆರೋಗ್ಯಾಧಿಕಾರಿಗಳು ತಪಾಸಣೆ ಮಾಡಿ ತಮ್ಮ ಮನೆಗೆತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಅಲ್ಲಿಯವರೆಗೆ ಸಹಕರಿಸಿ ಎಂದು ಸಮಾಧಾನಪಡಿಸಿದರು.
ಜಿಪಂ ಪಿ.ಶಿವಶಂಕರ್, ತಾಲೂಕುಕೋವಿಡ್ ನೋಡಲ್ ಅಧಿಕಾರಿ ಎನ್.ಭಾಸ್ಕರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ,ತಾಪಂ ಇಒ ಹರ್ಷವರ್ಧನ್, ತಾಲೂಕುಮಟ್ಟದ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಪಿಡಿಒ, ಸ್ಥಳೀಯ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.