ಬೆಂಗಳೂರು: ಎರಡು ವಾರದ ಹಿಂದಿನಕೊರೊನಾ ವೈರಾಣುವಿನ ತೀವ್ರತೆಯ “”ಎಫೆಕ್ಟ್”ಕೊರೊನಾ ಸೋಂಕಿತರ ಸಾವಿನವಿಚಾರದಲ್ಲಿ ಈಗಲೂಮುಂದುವರೆದಿದೆ.ಆವೇಳೆಯಲ್ಲಿಸೋಂಕಿತರಾಗಿದ್ದ ಸಾವಿರಾರುಮಂದಿ ಐಸಿಯುನಲ್ಲಿದ್ದು, ಚಿಕಿತ್ಸೆಫಲಕಾರಿಯಾಗದೇ ಈಗಮೃತಪಡುತ್ತಿದ್ದಾರೆ.
ಈ ಹಿನ್ನೆಲೆರಾಜ್ಯದಲ್ಲಿ ಸೋಂಕು ಇಳಿಕೆಯಾದರೂ,ಸಾವು ಮಾತ್ರ ಇಳಿಕೆಯಾಗುತ್ತಿಲ್ಲ.ರಾಜ್ಯದಲ್ಲಿ ಗರಿಷ್ಠ 50 ಸಾವಿರಕ್ಕೆ ಹೆಚ್ಚಿದ್ದಕೊರೊನಾ ಹೊಸ ಪ್ರಕರಣಗಳು, ಈಗ 15 ಸಾವಿರಆಸುಪಾಸಿಗೆ ತಗ್ಗಿವೆ. ಅಲ್ಲದೆ, ಸೋಂಕು ಪರೀಕ್ಷೆಪಾಸಿಟಿವಿಟಿದರವೂಕೂಡಾ ಶೇ.36 ರಿಂದ ಶೇ.12ಕ್ಕೆಬಂದಿದೆ. ಸಕ್ರಿಯ ಪ್ರಕರಣಗಳು 6 ಲಕ್ಷದಿಂದಮೂರು ಲಕ್ಷಕ್ಕೆ ಬಂದಿವೆ.
ಆದರೆ, ಸೋಂಕಿತರ ಸಾವುಮಾತ್ರ 500 ಆಸುಪಾಸಿನಲ್ಲಿಯೇ ಇದ್ದು,ಇಳಿಕೆಯಾಗದಿರುವುದು ಆತಂಕ ಮೂಡಿಸಿತ್ತು.ಸಾವು ಯಾಕೆ ಇಳಿಕೆಯಾಗುತ್ತಿಲ್ಲ? ಇನ್ನು ಎಷ್ಟುದಿನ ಸಾವು ಮುಂದುವರೆಯುತ್ತದೆ ಎಂಬ ಪ್ರಶ್ನೆಸಾರ್ವಜನಿಕರಿಗಿದ್ದವು.ಈ ಕುರಿತು ಪ್ರತಿಕ್ರಿಯಿಸಿದ ತಜ್ಞ ವೈದ್ಯರು,ಸಾಮಾನ್ಯ ವಾರ್ಡ್‌ನಲ್ಲಿ ಮರಣ ದರ ಶೇ.5 ರಷ್ಟುಇದ್ದರೆ, ಐಸಿಯುನಲ್ಲಿ ಶೇ.50 ರಷ್ಟು ಇರುತ್ತದೆ.ಸೋಂಕಿನ ತೀವ್ರತೆಯ ಸಂದರ್ಭದಲ್ಲಿ ಆಸ್ಪತ್ರೆಗೆದಾಖಲಾಗಿದ್ದ ಹಲವರಲ್ಲಿಸೋಂಕು ಗಂಭೀರವಾದ ಹಿನ್ನೆಲೆ ಎರಡು ವಾರಕ್ಕಿಂತಲೂ ಹೆಚ್ಚು ದಿನಐಸಿಯು ಮತ್ತು ವೆಂಟಿಲೇಟರ್‌ಗಳಲ್ಲಿದ್ದರು. ಸದ್ಯಅವರು ಚೇತರಿಕೆ ಕಾಣದೇ ಮೃತಪಡುತ್ತಿದ್ದಾರೆ.
ಹೀಗಾಗಿಯೇ ಸಾವು ಇಳಿಕೆಯಾಗುತ್ತಿಲ್ಲ ಎಂದುತಿಳಿಸಿದ್ದಾರೆ.ಆರು ಸಾವಿರ ಸೋಂಕಿತರು ಐಸಿಯುನಲ್ಲಿ;ಸಾವಿನ ಸಂಖ್ಯೆ ಹೆಚ್ಚು?: ಗುರುವಾರದ ಅಂತ್ಯಕ್ಕೆ(ಜೂ.3) ರಾಜ್ಯದಲ್ಲಿ 6.166 ಸೋಂಕಿತರು ಸ್ಥಿತಿಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ2,911 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ವೈದ್ಯರ ಪ್ರಕಾರ ಐಸಿಯುಸೋಂಕಿತರ ಗುಣಮುಖ ಪ್ರಮಾಣ ಶೇ.50ರಷ್ಟಿದ್ದಿದೆ. ಅಲ್ಲದೆ, 16 ಸಾವಿರ ಮಂದಿ ಆಕ್ಸಿಜನ್‌ವಾರ್ಡ್‌ನಲ್ಲಿದ್ದು, ಇವರಲ್ಲಿಯೂ ಶೇ.25 ರಷ್ಟುಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈಹಿನ್ನೆಲೆ ಸಾವಿನ ಸಂಖ್ಯೆ ಇನ್ನು ಒಂದು ವಾರಹೆಚ್ಚಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.
ಜಯಪ್ರಕಾಶ್ ಬಿರಾದಾರ್