ಬೆಂಗಳೂರು: ಲಸಿಕೆ ವಿಚಾರದಲ್ಲಿ ಸರ್ಕಾರವೇ ನೇಮಿಸಿದಸಲಹೆಗಾರರಾದ ಗಗನ್ ದೀಪ್ ಕಾಂಗ್ ಅವರ ಮಾತು ಒಪ್ಪುತ್ತದೆಯೇಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸಲಹೆಗಾರರ ಮಾತು ಕೇಳಿದರೆಪರಿಣಾಮಕಾರಿಯಾಗಿ ಲಸಿಕೆ ಅಭಿಯಾನ ಮಾಡಬಹುದು. ಸರ್ಕಾರಮೊದಲು ಅವರ ಸಲಹೆ ಪಾಲಿಸಲಿ ಎಂದು ಆಗ್ರಹಿಸಿದರು.
ಕಾಂಗ್ ಅವರು ಖ್ಯಾತ ವೈರಾಣು ತಜ್ಞರಾಗಿದ್ದು,ಕಳೆದ ತಿಂಗಳು ರಾಜ್ಯ ಸರ್ಕಾರ ಇವರನ್ನು ಲಸಿಕೆತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಲಸಿಕೆ ಖರೀದಿ ಪ್ರಕ್ರಿಯೆ ಕೇಂದ್ರಸರ್ಕಾರ ಮಾಡಬೇಕೇ ಹೊರತು, ರಾಜ್ಯ ಸರ್ಕಾರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಕೇಂದ್ರ ಸರ್ಕಾರವು ಜಾಗತಿಕಕಂಪನಿಗಳಿಂದ ಲಸಿಕೆಖರೀದಿಯಲ್ಲಿ ವಿಳಂಬ ಮಾಡಿದೆ ಎಂದು ಹೇಳಿದ್ದಾರೆ. ಇದನ್ನಾದರೂಸರ್ಕಾರ ಒಪುತ್ತಾ ಎಂದು ಕೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿಕಾಂಗ್ ಅವರುಕೋವಿಡ್ ನಿರ್ವಹಣೆ ವಿಚಾರವಾಗಿ ವ್ಯಕ್ತಪಡಿಸಿರುವ 10ಅಂಶಗಳನ್ನು ಉಲ್ಲೇಖೀಸಿದ ಶಿವಕುಮಾರ್, ಜಾಗತಿಕ ಟೆಂಡರ್‌ಸಂಪನ್ಮೂಲದ ವ್ಯರ್ಥ ಎಂದು ಹೇಳಿದ್ದಾರೆ. ಹಾಗಾದರೆ ಸರ್ಕಾರ ಅವರಸಲಹೆ ಪರಿಗಣಿಸಲಿಲ್ಲವೇ ಎಂದರು.
ರಾಜ್ಯ ಸರ್ಕಾರವು ಬಿಜೆಪಿನಾಯಕರು ಕಾಳಸಂತೆಯಲ್ಲಿ ಲಸಿಕೆ ಮಾರಿಕೊಳ್ಳಲು ಅವಕಾಶನೀಡುವುದನ್ನುಬಿಟ್ಟು,ಕೋವಿಡ್ ನಿರ್ವಹಣೆವಿಚಾರದಲ್ಲಿ ಮೊದಲು ತನ್ನಸಲಹೆಗಾರರ ಮಾತನ್ನು ಕೇಳಬೇಕಿದೆ ಎಂದು ಆಗ್ರಹಿಸಿದರು.