Advertisement

20 ಆಕ್ಸಿಜನ್‌ ಕಾನ್ಸ್ ನ್‌ಟ್ರೇಟರ್‌ ನೆರವು

09:20 PM May 29, 2021 | Team Udayavani |

ದೇವನಹಳ್ಳಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೊರೊನಾಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಕ್ಸಿಜನ್‌ ಕಾನ್ಸೆನ್‌ಟ್ರೇಟರ್‌ನೀಡಿ ಅನುಕೂಲ ಮಾಡಿದೆ. ಕೊರೊನಾಕಟ್ಟಿಹಾಕಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಕ್ಸಿಜನ್‌ ಕಾನ್ಸೆನ್‌ಟ್ರೇಟರ್‌ ಗಳನ್ನು ಕೊರೊನಾ ಸೋಂಕಿತರಿಗೆ ಚಾಲನೆ ನೀಡಿ ಮಾತನಾಡಿದರು.ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 20 ಅಕ್ಸಿಜನ್‌ ಕಾನ್ಸೆನ್‌ಟ್ರೇಟರ್‌ ಗಳನ್ನು ನೀಡಿದ್ದಾರೆ.

ಸರ್ಕಾರಗಳು ಕೊರೊನಾ, ಬ್ಲ್ಯಾಕ್‌ ಫ‚‌ಂಗಸ್‌,ವೈಟ್‌ಫ‚‌ಂಗಸ್‌ ಸೋಂಕು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ ಎಂದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಸಂಸ್ಥೆಯ ಯೋಜನಾಧಿಕಾರಿ ಅಕ್ಷತಾ ರೈಮಾತನಾಡಿ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯಿಂದ ಆನೇಕಲ್‌,ದೇವನಹಳ್ಳಿಯಲ್ಲಿ ಆಕ್ಸಿಜನ್‌ ಕನ್ವರ್ಟರ್‌ಗಳನ್ನು ಇರಿಸಲಾಗಿದೆ. ಆಕ್ಸಿ ಜನ್‌ ಕಾನ್ಸೆನ್‌ಟ್ರೇಟರ್‌ ಗಳ ಅಗತ್ಯ 9844930496ನಂಬರಿಗೆ ಸಂಪರ್ಕಿಸಿ ಎಂದರು.

ಜನಜಾಗೃತಿ ವೇದಿಕೆಯ ಅಧ್ಯಕ್ಷಬಿ.ಕೆ.ನಾರಾಯಣಸ್ವಾಮಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾಯೋಜನಾಧಿಕಾರಿ ಸತೀಶ್‌ ನಾಯಕ್‌,ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ,ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್‌ ಬಾಬು, ಪುರಸಭಾ ಸದಸ್ಯರಾದಜಿ.ಎ. ರವೀಂದ್ರ, ವೈ.ಆರ್‌.ರುದ್ರೇಶ್‌ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next