ಮುಂಬಯಿ: ಬಾಂದ್ರಾ ಬಿಕೆಸಿ ಜಂಬೋ ಕೋವಿಡ್ ಕೇಂದ್ರವು ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಕಳೆದ ಒಂದು ವರ್ಷದಲ್ಲಿ 24,000ಕ್ಕೂ ಹೆಚ್ಚು ಕೊರೊನಾ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗಾಗಲೇ ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಮೂರನೇ ಅಲೆಯನ್ನು ನಿಭಾಯಿಸಲು ಮಕ್ಕಳಿಗೆ 100 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಕೋವಿಡ್ ಸೆಂಟರ್ ಡೀನ್ ಡಾ| ರಾಜೇಶ್ ಢೇರೆ ಹೇಳಿದ್ದಾರೆ.
ಎರಡು ಚಂಡಮಾರುತ ಎದುರಿಸಿದ ಕೇಂದ್ರದೇಶದ ಮೊದಲ ಜಂಬೋ ಕೋವಿಡ್ ಕೇಂದ್ರದ ಪರಿಕಲ್ಪನೆಯನ್ನು ಬಾಂದ್ರಾ ಬಿಕೆಸಿಯಲ್ಲಿ ಜಾರಿಗೆ ತರಲಾಯಿತು. ಮೇ 25ರಂದು ಅದು ಒಂದು ವರ್ಷವನ್ನು ಪೂರ್ಣಗೊಳಿಸಿದೆ. ತೆರೆದ ಮೈದಾನದಲ್ಲಿ ಭವ್ಯವಾದ ಆಸ್ಪತ್ರೆ ವ್ಯವಸ್ಥೆಯನ್ನು ಯೋಜಿಸುವುದು ಒಂದು ದೊಡ್ಡ ಸವಾಲಾಗಿತ್ತು. ಈಗಾಗಲೇ ನಿಸರ್ಗ ಮತ್ತು ತೌಖೆ¤à ಈ ಎರಡು ಚಂಡಮಾರುತಗಳನ್ನು ಕೇಂದ್ರ ಎದುರಿಸಿದೆ.
ಎಂಎಂಆರ್‌ಡಿಎ 61,618 ಚದರ ಮೀಟರ್ ಪ್ರದೇಶದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಮೊದಲ “ನಿಸರ್ಗ’ ಚಂಡಮಾರುತ ಅಪ್ಪಳಿಸಿದಾಗ 238 ರೋಗಿಗಳನ್ನು ಸುರಕ್ಷಿತವಾಗಿ ವರ್ಲಿ, ಸಾಯನ್ ಆಸ್ಪತ್ರೆ, ಕೆಇಎಂ ಮತ್ತು ಕೂಪರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಪ್ರಸ್ತುತ ತೌಖೆ¤à ಚಂಡಮಾರುತದಲ್ಲಿ 198 ರೋಗಿಗಳನ್ನು ಸಾಯನ್, ನಾಯರ್, ಕೂಪರ್, ರಾಜವಾಡಿ, ನೆಸ್ಕೊ ಮತ್ತು ಜಿಟಿಗೆ ದಾಖಲಿಸಲಾಯಿತು. ಇದಕ್ಕಾಗಿ ವೈದ್ಯರು ಮತ್ತು ದಾದಿಯರ ತಂಡಗಳನ್ನು ನೇಮಿಸಲಾಯಿತು ಎಂದು ಡಾ| ಢೇರೆ ಹೇಳಿದ್ದಾರೆ.
ಇಲ್ಲಿ ಚಿಕಿತ್ಸೆ ಪಡೆದ ಅನೇಕ ರೋಗಿಗಳು ವೈದ್ಯಕೀಯ ವ್ಯವಸ್ಥೆಯನ್ನು ಶ್ಲಾ ಸಿದ್ದಾರೆ. ಈ ಕೇಂದ್ರದಲ್ಲಿ ಸಾವಿನ ಪ್ರಮಾಣ ಶೇ. 3.2ರಷ್ಟಿದೆ. ಜಂಬೋ ಕೋವಿಡ್ ಕೇಂದ್ರದಲ್ಲಿ 2,328 ಹಾಸಿಗೆಗಳನ್ನು ಹೊಂದಿದ್ದು, ಇದರಲ್ಲಿ ತೀವ್ರನಿಗಾ ಘಟಕದಲ್ಲಿ 108 ಹಾಸಿಗೆಗಳು ಮತ್ತು ಡಯಾಲಿಸಿಸ್ ರೋಗಿಗಳಿಗೆ 12 ಹಾಸಿಗೆಗಳಿವೆ. ಆಸ್ಪತ್ರೆಯಲ್ಲಿ 30 ಎಂಡಿ ಅಥವಾ ಅಂತಹುದೇ ಸ್ನಾತಕೋತ್ತರ ವೈದ್ಯಕೀಯ ಸಲಹೆಗಾರರು, 18 ಎಂಬಿಬಿಎಸ್ ವೈದ್ಯರು ಮತ್ತು 93 ಬಿಎಎಂಎಸ್ ವೈದ್ಯರು, 14 ಬಿಡಿಎಸ್ ವೈದ್ಯರು, 308 ದಾದಿಯರು ಮತ್ತು 399 ವಾರ್ಡ್ ಸಹಾಯಕರು ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೋಗ್ಯ ರಕ್ಷಣಾ ಸಂಸ್ಥೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನೇಮಿಸಲಾದ 21 ಎಂಡಿ ಅಥವಾ ಅಂತಹುದೇ ವಿದ್ಯಾವಂತ ಸಲಹೆಗಾರರು, 54 ಸ್ಥಾನೀಯ ವೈದ್ಯಕೀಯ ಅಧಿಕಾರಿಗಳು, 95 ದಾದಿಯರು, ತೀವ್ರ ನಿಗಾ ಘಟಕದ 18 ತಂತ್ರಜ್ಞರು ಮತ್ತು 54 ರೋಗಿಗಳ ಸಹಾಯಕರು ತೀವ್ರನಿಗಾ ಘಟಕದಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡುತ್ತಿದ್ದಾರೆ ಎಂದುಡಾ| ಢೇರೆ ಹೇಳಿದ್ದಾರೆ.ರೋಗಿಗಳಿಗೆ ಅನುಕೂಲ ವಾತಾವರಣ ಈ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಎಕ್ಸ್‌ರೇಗಳು, ಸಿಟಿ ಸ್ಕ್ಯಾನ್‌ಗಳು, ಎಂಆರ್‌ಐಗಳು, ಪೋರ್ಟಬಲ್ ವೆಂಟಿಲೇಟರ್‌ಗಳು, ಚರ್ಮದ ಮಾನಿಟರಿಂಗ್ ಮತ್ತು ಆಸ್ಪತ್ರೆಯ ದಾಖಲಾತಿಗಳಿಗೆ ಜೈವಿಕ ಸುರಕ್ಷಾ ಪ್ರವೇಶ ನಿಯಂತ್ರಣ ವ್ಯವಸ್ಥೆ ಇದೆ. ಮುಖ್ಯವಾಗಿ ಆಹಾರ ಮತ್ತು ಔಷಧಗಳನ್ನು ರೋಬೋಟ್‌ಗಳ ಮೂಲಕ ವಿತರಿಸಲಾಗುತ್ತದೆ.
ಅತ್ಯಾಧುನಿಕ ಸಾಫ್ಟ್ವೇರ್ ವ್ಯವಸ್ಥೆಯು ಪ್ರತಿದಿನವೂ ರೋಗಿಗಳ ಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ತಿಳಿಸುತ್ತದೆ ಮತ್ತು ರೋಗಿಗಳಿಗೆ ವೀಡಿಯೋ ಸಂಭಾಷಣೆಗಳ ಸೌಲಭ್ಯವೂ ಇದೆ.ಉತ್ತಮ ಆಹಾರ ಸೌಲಭ್ಯಕೊರೊನಾ ಸೋಂಕಿತರನ್ನು ಚಿಕಿತ್ಸೆಗಾಗಿ ಬಿಕೆಸಿ ಕೋವಿಡ್ ಕೇಂದ್ರಕ್ಕೆ ದಾಖಲಿಸಿದಾಗ ಅವರು ಆಘಾತದ ಸ್ಥಿತಿಯಲ್ಲಿರುತ್ತಾರೆ. ಇಲ್ಲಿ ದಾಖಲಾತಿ, ವೈದ್ಯರ ಸಹಕಾರ ಮತ್ತು ದೈನಂದಿನ ಪರೀಕ್ಷೆಗಳು, ಚಹಾ, ತಿಂಡಿ ಮತ್ತು ಔಷಧೋಪಚಾರ ಉತ್ತಮವಾಗಿದೆ ಎಂದು ಡಾ| ಶಾಲಿನಿ ದೇಶಪಾಂಡೆ ಅವರು ಹೇಳಿದ್ದಾರೆ.
ಜಂಬೋ ಕೋವಿಡ್ ಕೇಂದ್ರಕ್ಕೆಎದುರಾದ ಸವಾಲುಇಷ್ಟು ದೊಡ್ಡ ಮತ್ತು ತಾತ್ಕಾಲಿಕ ಕೋವಿಡ್ ಕೇಂದ್ರ ಸ್ಥಾಪಿಸುವುದು ಮೊದಲ ಪ್ರಯೋಗವಾಗಿತ್ತು. ಈ ಕೇಂದ್ರವನ್ನು ನಡೆಸುವ ಅನುಭವ ಯಾರಿಗೂ ಇರಲಿಲ್ಲ. ಕೇಂದ್ರವನ್ನು ಹೇಗೆ ನಡೆಸುವುದು ಎಂಬ ಬಗ್ಗೆ ನಾವು ಮಾರ್ಗಸೂಚಿಗಳನ್ನು ರಚಿಸಿದೆವು. ಮೊದಲಿಗೆ ವೈದ್ಯರು ಕೆಲಸಕ್ಕಾಗಿ ಇಲ್ಲಿಗೆ ಬರಲು ಸಿದ್ಧರಿರಲಿಲ್ಲ. ನಮ್ಮ ವೈದ್ಯರ ಮತ್ತು ರೋಗಿಗಳ ಮನಃಸ್ಥಿತಿಯನ್ನು ತಿಳಿಯಲು ಸುಮಾರು ಮೂರು ತಿಂಗಳುಗಳು ತೆಗೆದುಕೊಂಡಿತು. ತರಬೇತಿ ಸವಾಲಾಗಿತ್ತು. ಎಂಬಿಬಿಎಸ್ ಅಥವಾ ಬಿಎಎಂಎಸ್ ವೈದ್ಯರು ಮತ್ತು ದಾದಿಯರಿಗೆ ಪ್ರತೀದಿನ ಬೆಳಗ್ಗೆ ಮತ್ತು ಸಂಜೆ ತರಬೇತಿ ನೀಡಲಾಯಿತು. ಈಗ ನಾವು ಮೂರನೇ ಅಲೆ ಎದುರಿಸಲು ತಯಾರಿ ನಡೆಸುತ್ತಿದ್ದೇವೆ. ಆರಂಭದಲ್ಲಿ ಮಕ್ಕಳಿಗೆ 28 ಹಾಸಿಗೆಗಳು ಮತ್ತು ಒಬ್ಬ ಶಿಶುವೈದ್ಯರು ಇದ್ದರು. ಈಗ 100 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳ ವೈದ್ಯರನ್ನು ನೇಮಿಸಬೇಕಾಗಿದೆ ಎಂದು ಆರಂಭಿಕ ಮತ್ತು ಪ್ರಸ್ತುತ ಸವಾಲುಗಳ ಬಗ್ಗೆ ಡಾ| ರಾಜೇಶ್ ಢೇರೆ ಹೇಳಿದ್ದಾರೆ.