ಬಂಗಾರಪೇಟೆ: ಸ್ಥಳೀಯ ಶಾಸಕರು ಸರ್ಕಾರಗಳ ವಿರುದ್ಧಆರೋಪ ಮಾಡುವುದನ್ನು ಬಿಟ್ಟು ಜನರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಇದರಲ್ಲಿಯೂ ರಾಜಕೀಯ ಮಾಡುವುದು ಸಮಂಜಸವಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ಸಲಹೆ ನೀಡಿದರು.ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಲಸಿಕಾ ವಿತರಣಾಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು.
ಶಾಸಕರುಕೊರೊನಾ ಸಂಕಷ್ಟದಲ್ಲಿ ತಮ್ಮ ರಾಜಕೀಯ ಬೇಳೆಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಸದ್ಯಕ್ಕೆ ಯಾವುದೇಚುನಾವಣೆಗಳಿಲ್ಲ ಎಂದರು.ಸಂಸದರು ಕೋವಿಡ್ ಸಮಯದಲ್ಲಿ ಇಡೀ ಜಿಲ್ಲೆ ಪ್ರವಾಸಮಾಡಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಆದರೆ, ಶಾಸಕರು,ಅಧಿಕಾರಿಗಳ ಮೇಲೆ ದರ್ಪ ತೋರಿಸಿ ಸಂಸದರ ಸಭೆಗೆ ಏಕೆಹೋಗುತ್ತೀರಿ ಎಂದು ಪ್ರಶ್ನೆ ಮಾಡಿ ತಡೆಯುತ್ತಿದ್ದಾರೆಂದರು.ಲಸಿಕೆ ಪಡೆಯುವುದರಿಂದ ಕೊರೊನಾ ಸೋಂಕನ್ನುಎದುರಿಸಲು ಬೇಕಾಗಿರುವ ರೋಗ ನಿರೋಧಕ ಶಕ್ತಿದೇಹದಲ್ಲಿ ಉಂಟಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಸೋಂಕು ತಗಲಿದರೂ ಪ್ರಾಣಾಪಾಯ ಆಗುವುದಿಲ್ಲ. ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಆಲದಮರದ ಭಾರತ್‌ನಗರ, ಎಂ.ವಿನಗರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ಕಡ್ಡಾಯವಾಗಿ ಲಸಿಕೆಪಡೆದು ಕೊರೊನಾದಿಂದ ಮುಕ್ತರಾಗಬೇಕೆಂದರು.ಡಿ.ಕೆ.ಹಳ್ಳಿ ಗ್ರಾಪಂ ಅಧ್ಯಕ್ಷೆ ಕಲಾವತಿ ರಮೇಶ್, ಉಪಾಧ್ಯಕ್ಷೆರಾಧಮ, ಪಿಡಿಒ ವಸಂತಕುಮಾರ್, ಸದಸ್ಯರಾದ ರಾಮಯ್ಯ,ಸವಿತಾ ಬಾಬು, ಕುಮಾರ್, ಸುಧಾಗೌಡ, ಮುಖಂಡರಾದವೆಂಕಟೇಶ್‌ಮೂರ್ತಿ, ಬೋಸ್ಲೆ , ಕೃಷ್ಣನ್, ಅನುº,ರಾಜಕುಮಾರ್, ಕೃಷ್ಣ ಮತ್ತಿತರರಿದ್ದರು.
ಮಹೇಶ್