ಚಿತ್ರದುರ್ಗ: ಜಗತ್ತಿನ ಮುಂದುವರೆದರಾಷ್ಟ್ರಗಳು ಕೂಡ ಕೋವಿಡ್ ಲಸಿಕೆ ಹಾಕುವಲ್ಲಿಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆಭಾರತ ಇಂಥದ್ದೊಂದು ಮಹತ್ತರ ಸಾಧನೆಮಾಡಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಕೆಳಗೋಟೆ ಬಾರ್‌ಲೈನ್‌ಸರ್ಕಾರಿ ಶಾಲೆ ಆವರಣದಲ್ಲಿ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್‌ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಕೋವಿಡ್-19 ವೈರಾಣುವಿಗೆ ರೋಗ ನಿರೋಧಕಶಕ್ತಿ ಹೆಚ್ಚಿಸುವ ಸಾರ್ವಜನಿಕರಿಗೆ ಉಚಿತಲಸಿಕೆ ಹಾಕುವಲ್ಲಿ ಭಾರತದ 100 ಕೋಟಿಸಾಧನೆ ಮಾಡಿರುವುದು ಉತ್ತಮ ಬೆಳವಣಿಗೆ.ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಆರೋಗ್ಯ ಇಲಾಖೆ ಅ ಧಿಕಾರಿಗಳು, ಸಿಬ್ಬಂದಿಮನೆ, ಮನೆ ಮನೆಗೆ ಭೇಟಿ ನೀಡಿದರು.ರೈತರ ಹೊಲ, ತೋಟ, ಬಸ್ ನಿಲ್ದಾಣ,ಅಲೆಮಾರಿಗಳ ಜಾಗ ಸೇರಿದಂತೆ ಮತ್ತಿತರಕಡೆಗಳಲ್ಲಿ ತಿರುಗಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಲಸಿಕೆ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲೂ ಲಸಿಕಾಕರಣಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆಆರೋಗ್ಯ ಇಲಾಖೆ ಅ ಧಿಕಾರಿಗಳು ಹಾಗೂಸಿಬ್ಬಂದಿ ಶ್ರಮ ಅಪಾರವಾಗಿದೆ. ಈಗಿನ ಸನ್ಮಾನಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿಮುಂದಿನ ದಿನಗಳಲ್ಲಿ ಇನ್ನಷ್ಟು ಚೆನ್ನಾಗಿ ಕೆಲಸಮಾಡಲು ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಆರ್. ರಂಗನಾಥ್ ಮಾತನಾಡಿ,ಕೋವಿಡ್- 19 ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಸಹಕಾರಿ ಆಗಿರುವ ಲಸಿಕಾಕರಣದಲ್ಲಿ ಭಾರತದಲ್ಲಿ 100 ಕೋಟಿ ಸಾಧನೆಯಾಗಿದೆ.
ಯೂರೋಪ್ ರಾಷ್ಟ್ರದಲ್ಲಿ 83 ಕೋಟಿ,ಉತ್ತರ ಅಮೇರಿಕಾದಲ್ಲಿ 66 ಕೋಟಿ, ದಕ್ಷಿಣಅಮೇರಿಕಾದಲ್ಲಿ 48 ಕೋಟಿ, ಆμÅಕಾದಲ್ಲಿ17 ಕೋಟಿ, ಓಷಿನಿಯಾ ದೇಶದಲ್ಲಿ 40 ಲಕ್ಷಲಸಿಕಾಕರಣದ ಸಾಧನೆಯಾಗಿದೆ ಎಂದುಮಾಹಿತಿ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ,ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್, ನಗರಸಭೆ ಸದಸ್ಯರಾದಹರೀಶ್, ಶ್ವೇತಾ, ವಕ್ತಾರ ದಗ್ಗೆ ಶಿವಪ್ರಕಾಶ್,ನಗರಾಭಿವೃದ್ಧಿ ಪ್ರಾಧಿ ಕಾರದ ಸದಸ್ಯೆ ರೇಖಾ,ಮುಖಂಡರಾದ ತಿಮ್ಮಣ್ಣ, ಶಿವಣ್ಣಾಚಾರ್,ಕೃಷ್ಣ ಇದ್ದರು. ಆರ್‌ಸಿಎಚ್ ಅ ಧಿಕಾರಿ ಡಾ|ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕಡಾ| ಬಸವರಾಜಪ್ಪ, ಆರೋಗ್ಯ ಇಲಾಖೆನಿರೀಕ್ಷಣಾ ಧಿಕಾರಿಗಳಾದ ಎ. ಗಂಗಾಧರ, ಎಂ.ಪ್ರಸನ್ನಕುಮಾರ್, ರುದ್ರಮುನಿ, ಶುಶ್ರೂಷಾಅ ಧಿಕಾರಿ ವಿಜಯಲಕ್ಷ್ಮೀ ಅವರನ್ನುಸನ್ಮಾನಿಸಲಾಯಿತು.