Advertisement

ಕೊರೊನಾ ಪರೀಕ್ಷೆಗೆಂದು ಹಲ್ಲೆ: ಭಿನ್ನ ಹೇಳಿಕೆ

08:10 PM May 26, 2021 | Team Udayavani |

ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆಮಾಡಿಸಿಕೊಳ್ಳಲು ನಿರಾಕರಿಸಿದ ಸಾರ್ವಜನಿಕರನ್ನು ಥಳಿಸಿದ ನಗರ್ತಪೇಟೆ ಪ್ರಕರಣದಲ್ಲಿ ಪಾಲಿಕೆ ನಡೆಯ ಬಗ್ಗೆಅನುಮಾನ ಮೂಡಿದೆ. ನಗರ್ತಪೇಟೆಯ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಸಾರ್ವಜನಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಿದ್ದು, ಥಳಿಸಿದ್ದವಿಡಿಯೋ ಸೋಮವಾರ ವೈರಲ್‌ಆಗಿತ್ತು.

Advertisement

ಈಪ್ರಕರಣಕ್ಕೆಸಂಬಂಧಿಸಿದಂತೆಮಂಗಳವಾರ ಸಂಜೆಯ ಒಳಗಾಗಿ ವರದಿ ನೀಡುವಂತೆ ಪಾಲಿಕೆಮುಖ್ಯ ಆಯುಕ್ತ ಗೌರವ ಗುಪ್ತ ಸೂಚಿಸಿದರು .ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆಮಂಗಳವಾರ ಯಾವುದೇ ಸಿಬ್ಬಂದಿಯ ಮೇಲೆಕ್ರಮವಾಗಿಲ್ಲ.ಅಲ್ಲದೆ,ಪ್ರಕರಣಕ್ಕೆಸಂಬಂಧಿಸಿದಂತೆ ಅಧಿಕಾರಿಗಳು, ಆಯುಕ್ತರು ಭಿನ್ನ ಹೇಳಿಕೆ ನೀಡಿದ್ದಾರೆ.

ವರದಿ ಬಂದಿರಬೇಕು ನೋಡುವೆ: ವರದಿ ನೀಡುವುದಕ್ಕೆಸೂಚನೆ ನೀಡಲಾಗಿತ್ತು. ಮಂಗಳವಾರ ವಿವಿಧ ಸಭೆಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ವರದಿ ಬಂದಿರಬೇಕು ನೋಡುತ್ತೇನೆ ಎಂದು ಪಾಲಿಕೆಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದ್ದಾರೆ.

ಹೇಳಿಕೆ ಪಡೆಯಲಾಗುತ್ತಿದೆ: ನಗರ್ತಪೇಟೆ ಪ್ರಕರಣಕುರಿತು ಇನ್ನೂ ವರದಿ ಸಲ್ಲಿಸಿಲ್ಲ. ಸ್ವಲ್ಪ ಕಾಲಾವಕಾಶ ಕೋರಲಾಗಿದ್ದು,ಬುಧವಾರ ವರದಿ ನೀಡಲಾಗುವುದು. ಸಂಬಂಧಪಟ್ಟವರ ಹೇಳಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ದಕ್ಷಿಣವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next