ಕೋಲಾರ: ವೈದ್ಯ ಸಿಬ್ಬಂದಿ ಸೇರಿದಂತೆ ವೈದ್ಯಕೀಯ ಸಲಕರಣೆಗಳಕೊರತೆಯನ್ನು ಎದುರಿಸುತ್ತಿದ್ದ ಜಿಲ್ಲಾ ಮತ್ತು ತಾಲೂಕು ಸರಕಾರಿಆಸ್ಪತ್ರೆಗಳಿಗೆ ಕೊರೊನಾ ಮೊದಲ ಮತ್ತು ಎರಡನೇ ಅಲೆಯ ನಂತರ ಕೋವಿಡ್ ಪ್ಯಾಕೇಜ್ ಔಷಧೋಪಕರಣಗಳು ತಲುಪುತ್ತಿವೆ. ಖಾಲಿ ಇದ್ದಹುದ್ದೆಗಳಿಗೆ ಅಗತ್ಯ ವೈದ್ಯರ ಸಿಬ್ಬಂದಿ ನೇಮಕಾತಿ ನಡೆದಿದೆ.
ವೈದ್ಯರ ಹುದ್ದೆ: ಕೋವಿಡ್ ಮೂರನೇ ಅಲೆಯನ್ನು ಎದುರಿಸುವಉದ್ದೇಶದಿಂದಲೇ ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ 28 ವೈದ್ಯರಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 6 ತಜ್ಞ ವೈದ್ಯರನ್ನು ಮತ್ತು13 ಮಂದಿ ಮಕ್ಕಳ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಐಸಿಯುಘಟಕಗಳನ್ನು ನಿರ್ವಹಿಸುವ ಸಲುವಾಗಿಯೇ ಪ್ರತಿ ತಾಲೂಕು ಆಸ್ಪತ್ರೆಗೆ 3ನರ್ಸ್‌ಗಳು, 3 ಸಿಬ್ಬಂದಿ ಹಾಗೂ 3ಡಿ ಗ್ರೂಪ್ ನೌಕರರನ್ನು ನೇಮಕಮಾಡಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯ ಐಸಿಯು ನಿರ್ವಹಣೆಗಾಗಿ 10ಮಂದಿ ನೇಮಿಸಿಕೊಳ್ಳಲಾಗಿದೆ.
ಐಸಿಯು ಬೆಡ್‌ಗಳು: ಕೋಲಾರ ಜಿಲ್ಲೆಯ ಎಸ್‌ಎನ್‌ಆರ್‌ಜಿಲ್ಲಾಸ್ಪತ್ರೆಯಲ್ಲಿ 55 ಐಸಿಯು ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ.ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ 12 ಐಸಿಯು ಬೆಡ್‌ಗಳನ್ನು ಹೊಸದಾಗಿಅಳವಡಿಸಲಾಗಿದೆ.
ಪ್ರತಿ ತಾಲೂಕು ಆಸ್ಪತ್ರೆಗೆ ಕನಿಷ್ಠ 10 ಐಸಿಯು ಬೆಡ್‌ಗಳು ಇರುವಂತೆ ನೋಡಿಕೊಳ್ಳಲಾಗುತ್ತಿದ್ದು, ಈ ಪೈಕಿ ಐದು ಹಿರಿಯರಿಗೆಮತ್ತು ಐದು ಮಕ್ಕಳಿಗಾಗಿ ಮೀಸಲಿಡಲಾಗಿದೆ.
ಮಾನಿಟರ್‌ಗೆ ಬೇಡಿಕೆ: ಕೋಲಾರ ಜಿಲ್ಲೆಯಲ್ಲಿ ಕೋವಿಡ್ ರೋಗಿಯಮೇಲೆ ನಿಗಾ ಇಡುವ ಸಲುವಾಗಿ 40 ಮಾನಿಟರ್‌ಗಳಿದ್ದು, ಜಿಲ್ಲೆಗೆ ಇನ್ನೂ80 ಮಾನಿಟರ್‌ಗಳ ಅಗತ್ಯವಿದೆಯೆಂದು ಬೇಡಿಕೆ ಇಡಲಾಗಿದೆ. ಇದೇಉದ್ದೇಶಕ್ಕಾಗಿಯೇ ಬಿಪ್ಯಾಪ್ ಮತ್ತು ಸಿಪ್ಯಾಪ್ ಯಂತ್ರಗಳು ಪ್ರತಿಆಸ್ಪತ್ರೆಗೂ ಐದು ಯಂತ್ರಗಳ ಅಗತ್ಯವಿದೆ. ಎಸ್‌ಎನ್‌ಆರ್‌ಆಸ್ಪತ್ರೆಯಲ್ಲಿ ಬಬ್ಬಲ್ ಸಿ ಪ್ಯಾಪ್‌ಗೆ ಬೇಡಿಕೆ ಇದ್ದು ಇದುಕೃತಕ ಉಸಿರಾಟಕ್ಕೆ ಸಹ ಕಾರಿಯಾಗಲಿದೆ. ಇದಕ್ಕೂಬೇಡಿಕೆ ಸಲ್ಲಿಸ ಲಾಗಿದೆ. ವೆಂಟಿಲೇಟರ್‌ಗಳುಆರು ಸಂಖ್ಯೆಯಲ್ಲಿ ಮಾತ್ರವೇ ಇದ್ದು, ಇನ್ನು20 ವೆಂಟಿಲೇಟರ್‌ಗಳಿಗೆ ಬೇಡಿಕೆಇಡಲಾಗಿದೆ.
ಆರೋಗ್ಯ ನಂದನ: ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯನಂದನ ಯೋಜನೆಯನ್ನು ಆ.15ರಿಂದಸೆ.15 ರವರೆಗೂ ಜಿಲ್ಲೆಯಲ್ಲಿಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿಪ್ರತಿ ಮನೆಗೂ ಭೇಟಿ ನೀಡಿ ವಿಶೇಷವಾಗಿಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿಚಿಕಿತ್ಸೆಗೆ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ.
ಕೆ.ಎಸ್.ಗಣೇಶ್