Advertisement

ಬಾಗಿಲಿಗೆ ಲಸಿಕೆ ಬಂದರೂ ಕದ ತೆಗೆಯದ ಗ್ರಾಮೀಣರು

07:23 PM May 26, 2021 | Team Udayavani |

ಮಧುಗಿರಿ: ಹಲವು ಕಾರಣಗಳಿಂದ ಗ್ರಾಮೀಣಭಾಗದಲ್ಲಿ ಮಹಿಳೆಯರು ವ್ಯಾಕ್ಸಿನ್‌ ಹೆಸರು ಕೇಳಿದರೆಭಯ ಬೀಳುತ್ತಿದ್ದು, ಪಿಡಿಒ ಸಹಿತ ವಾರಿಯರ್ಸಮನೆ ಬಾಗಿಲಿಗೆ ಬಂದೊಡನೆ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ.

Advertisement

ತಾಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಜನ ‌ 45ವರ್ಷ ವಯೋಮಾನದವರಿದ್ದು, ಗ್ರಾಮೀಣ ಭಾಗ‌ದಲ್ಲಿ  ಕೊರೊನಾ ವ್ಯಾಕ್ಸಿನ್‌ ಹೆಸರು ಕೇಳಿದರೆ ಭಯ ಬೀರುವ ಜನರು, ನಮಗೆಈ ಕಾಯಿಲೆಯೂ ಇಲ್ಲ.ವ್ಯಾಕ್ಸಿನ್‌ ಕೂಡಾ ‌ ¸ ಬೇಡ ಎಂದು ಮೂಗುಮುರಿಯುತ್ತಿದ್ದಾರೆ.

ಈ ಬಗ್ಗೆ  ರಿಯಾಲಿಟಿ ಚೆಕ್‌ನಡೆಸಿದ ಉದಯವಾಣಿಗೆ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯ ಳೆಹಟ್ಟಿಯಲ್ಲಿಈ ದೃಶ್ಯ ಕಂಡು ಬಂದಿತು.ಗ್ರಾಮದಲ್ಲಿ ಲಸಿಕೆ ಅಭಿಯಾನದ ಬಗ್ಗೆ ಗ್ರಾಪಂಅಧ್ಯಕ್ಷೆ ಸಾವಿತ್ರಮ್ಮ ನಾಗರಾಜ್‌, ಪಿಡಿಒ ರವಿಚಂದ್ರ,ಸದಸ್ಯ ವಿರೇಶ್‌ ಸಹಿತ ಆಶಾ ಹಾಗೂ ಅಂಗನವಾಡಿಕಾರ್ಯಕರ್ತರ ತಂಡ ವ್ಯಾಕ್ಸಿನ್‌ ಪಡೆಯಿರಿ,ಕೊರೊನಾ ಗೆಲ್ಲಿರಿ ಎಂದು ಜಾಗೃತಿ ಮೂಡಿಸುತ್ತಿದ್ದರು.

ಆದರೆ, ಹಲವರು ಲಸಿಕೆ ಪಡೆದಿದ್ದೇವೆ ಎಂದು ಸುಳ್ಳುಹೇಳಿದ್ದು, ಮತ್ತೆ ಕೆಲವರು ಕೊರೊನಾದಿಂದ ಗುಣಮುಖರಾಗಿದ್ದೇವೆ. ನಮಗೇಕೆ ಲಸಿಕೆ ಎಂದು ಮುಖತಿರುಗಿಸಿ ಕೊಳ್ಳುತ್ತಿದ್ದರು. ಹೆಚ್ಚಾಗಿ ರೈತ ಮಹಿಳೆಯರೇಇಂತಹ ಮಾತುಗಳನ್ನು ಆಡುತ್ತಿದ್ದು, ಪಿಡಿಒಮನವಿಗೂ ಬೆಲೆ ಕೊಡದೆ ಒಳಗೆ ಹೋಗಿ ಬಾಗಿಲುಹಾಕಿಕೊಳ್ಳುತ್ತಿದ್ದರು. ಹೆಚ್ಚಾಗಿ ಮಾತಾಡಿದರೆ ಜಗಳಕ್ಕೆಬರುವ ಸನ್ನಿವೇಶ ಎದುರಾಗಿದ್ದು, ಅಧಿಕಾರಿಗಳು,ಜನಪ್ರತಿನಿಧಿಗಳು ದಿಕ್ಕುಕಾಣದಾದರು.

ಅನಕ್ಷರತೆ ಕಾರಣ: ಗ್ರಾಮೀಣ ಭಾಗದ ಅದರಲ್ಲೂಹೆಚ್ಚಾಗಿ ದಲಿತಕಾಲೋನಿಹಾಗೂ ಗೊಲ್ಲರಹಟ್ಟಿಗಳಲ್ಲಿಇಂತಹ ವಾತಾವರಣವಿದ್ದು, ಗ್ರಾಮದ ಯುವಕರುಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಲಸಿಕೆಬೇಡವೆನ್ನುವ ಕುಟುಂಬದ ವಿದ್ಯಾವಂñ ‌ ಯುವಕರುಮನವೊಲಿಸಿ ಅವರ ಹಿರಿಯರಿಗೆ ಲಸಿಕೆ ಹಾಕಿಸಬೇಕಿದೆ.

Advertisement

ಪಟ್ಟಣದಲ್ಲಿ ರುವ ಕೆಲವು ಮಾಧ್ಯಮಗಳಲ್ಲಿಪ್ರಾರಂಭದ ಹಂತದಲ್ಲೇ ಲಸಿಕೆಯ ಬಗ್ಗೆ ಭಯಹುಟ್ಟಿಸಿದಕಾರಣವೂ, ಗ್ರಾಮೀಣಭಾಗದ ಜನತೆಯಈ ನಡವಳಿಕೆಗೆ ಕಾರಣವಿರಬಹುದಾಗಿದೆ. ಇಂತಹಸಂದರ್ಭದಲ್ಲಿ ತಾಲೂಕು ಆಡಳಿತವು ತಿಳವಳಿಕೆನೀಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ.ಅದಕ್ಕಾಗಿ ಗ್ರಾಮದ ಮುಖಂಡರಿಗೆ  ಅದೇಗ್ರಾಮದಲ್ಲಿ ಸಾಂಕೇತಿಕವಾಗಿ ಲಸಿಕೆ ಹಾಕುವಮೂಲಕ ಲಸಿಕೆಯ ಮೇಲಿರುವ ಭಯವನ್ನುಹೋಗಲಾಡಿಸಬಹು ದಾಗಿದೆ.

ಮಧುಗಿರಿ ಸತೀಶ್

 

Advertisement

Udayavani is now on Telegram. Click here to join our channel and stay updated with the latest news.

Next