Advertisement

ಎಚ್ಚೆತ್ತರೆ ಮಾತ್ರ ಕೊರೊನಾ ನಿಯಂತ್ರಣ

06:44 PM Jul 19, 2021 | Team Udayavani |

ಬೆಂಗಳೂರು: ಸರ್ಕಾರದ ಮಾರ್ಗಸೂಚಿ.ಯಿಂದಲೇ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಸಾರ್ವಜ ನಿಕರು ಎಚ್ಚೆತ್ತುಕೊಂಡಾಗಮಾತ್ರ ಇದು ತಹಬದಿಗೆ ಬರಲು ಸಾಧ್ಯ ಎಂದುಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡಅಭಿಪ್ರಾಯಪಟ್ಟರು.

Advertisement

ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಶಾಸಕರ ಕಚೇರಿ ಯಲ್ಲಿ ಅಸಂಘಟಿತ ಕಾರ್ಮಿಕರಿಗೆಆಹಾರದ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕೋವಿಡ್‌ ಸೋಂಕುಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ತಡೆಗಟ್ಟುವುದಾದರೆ ಸಾರ್ವಜನಿಕರ ಸಹಕಾರ ಅತ್ಯಂತಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ಸರ್ಕಾರ ನಿಯಮಗಳನ್ನು ಜಾರಿ ಮಾಡಿದತಕ್ಷಣ ಸೋಂಕು ನಿಯಂತ್ರಣಕ್ಕೆ ಬಂದುಬಿಡುತ್ತದೆ ಎಂದುಕೊಳ್ಳಬೇಡಿ. ಪ್ರತಿಯೊಬ್ಬರುಎಚ್ಚೆತ್ತುಕೊಂಡು ನಿಮ್ಮ ಮನೆಯಲ್ಲಿಕಡ್ಡಾಯವಾಗಿ ಮಾÓR… ಧರಿಸುವುದು,ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ,ಅನಗತ್ಯವಾಗಿ ಹೊರಗೆ ಹೋಗದಿರುವುದುಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದರು.

ಅಬಕಾರಿಸಚಿವಗೋಪಾಲಯ್ಯಮಾತನಾಡಿ,ಕೊರೊನಾದಂತಹ ಕಷ್ಟದ ಸಂದರ್ಭದಲ್ಲೂ ನನ್ನ ಕ್ಷೇತ್ರದಜನರಿಗೆ ನ್ಯಾಯ ಒದಗಿಸಿಕೊಡುವಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಇಂದುನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ನಿಮ್ಮಆಶೀರ್ವಾದವೇ ಕಾರಣ. ನನಗೆ ಎಷ್ಟೇ, ಕಷ್ಟನೋವುಗಳಿದ್ದರೂ ಇಂತಹ ಸಂದರ್ಭದಲ್ಲಿನಿಮ್ಮನ್ನುಕೈಬಿಡುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next