Advertisement

ರಾಜ್ಯದಲ್ಲಿ ನಿತ್ಯ 4 ಲಕ್ಷ ಮಂದಿಗೆ ಲಸಿಕೆ: ಬಿಎಸ್‌ವೈ

05:28 PM Jul 04, 2021 | Team Udayavani |

ಬೆಂಗಳೂರು: ಕೋವಿಡ್‌ ಸೋಂಕುತಡೆಗಟ್ಟುವಲ್ಲಿ ಲಸಿಕೆಯು ಪ್ರಧಾನವಾಗಿದೆ.ಹೀಗಾಗಿ, ರಾಜ್ಯದಲ್ಲಿ ಲಸಿಕೆ ಅಭಿಯಾನದಜತೆಗೆ ಪ್ರತಿದಿನ ಮೂರರಿಂದ ನಾಲ್ಕು ಲಕ್ಷಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪಹೇಳಿದರು.

Advertisement

ಜಯನಗರ ವಿಧಾನಸಭಾ ಕ್ಷೇತ್ರದಪಟ್ಟಾಭಿರಾಮ ನಗರ ವಾರ್ಡ್‌ ವ್ಯಾಪ್ತಿಯಚಂದ್ರಗುಪ್ತ ಆಟದ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದದಿನಿಸಿ ಕಿಟ್‌ವಿತರಣೆ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಯನ್ನುತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಸೇವೆಸೇರಿದಂತೆ ಅಗತ್ಯತೆಗಳನ್ನು ಹೆಚ್ಚಿಸಲುಕ್ರಮಕೈಗೊಳ್ಳಲಾಗಿದೆ ಎಂದರು.

ಕೊರೊನಾ ಸಂದರ್ಭದಲ್ಲಿ ತಮ್ಮಪ್ರಾಣವನ್ನು ಲೆಕ್ಕಿಸದೆ ಸೇವೆ ಮನೋಭಾವನೆದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು,ದಾದಿಯರು ಪೊಲೀಸರು,ಪೌರಕಾರ್ಮಿಕರು, ಸಂಘ-ಸಂಸ್ಥೆಗಳು ಇನ್ನೂಹಲವರನ್ನು ಕೊರೊನಾ ಸೇನಾನಿಗಳುಎಂದು ಬಣ್ಣಿಸ ಬೇಕು. ಮುಂದಿನ ದಿನಗಳಲ್ಲಿಎಲ್ಲರಿಗೂ ಅಭಿನಂದನೆ ಮಾಡುವಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆಎಂದು ತಿಳಿಸಿದರು.

ವಿನಯ್‌ ಗುರೂಜಿ ಮಾತನಾಡಿ,ಸರ್ಕಾರದ ಚುನಾಯಿತ ಪ್ರತಿನಿಧಿಗಳುಮಾಡುವ ಸೇವೆ, ಕೆಲಸದ ಜತೆಗೆ ಉಳ್ಳವರುಸಾರ್ವಜನಿಕ ವಲಯದಲ್ಲಿ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಲು ಮುಂದಾಗಬೇಕು.ಎಲ್ಲಪಕ್ಷದಕಾರ್ಯಕರ್ತರು, ಮುಖಂಡರುಕೊರೊನಾ ಸಂದರ್ಭದಲ್ಲಿ ಮಾಡಿರುವಜನಸೇವೆಮೆಚ್ಚುವಂತದ್ದು.ತಮ್ಮಪ್ರಾಣವನ್ನುಪಣಕ್ಕಿಟ್ಟು ದುಡಿದಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯಸಿ.ಕೆ ರಾಮಮೂರ್ತಿ ಮಾತನಾಡಿ,ಕೊರೊನಾ ಸೋಂಕು ತಡೆಗಟ್ಟುವಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನುತೊರೆದು ತಿಂಗಳುಗಟ್ಟಲೆ ಮನೆಗಳನ್ನು ಬಿಟ್ಟುದುಡಿಯುತ್ತಿದ್ದಾರೆ. ಈ ಎಲ್ಲ ಕೊರೊನಾವಾರಿìಯರ್ಸ್‌ಗಳು ಬದುಕಿರುವ ನಿಜವಾದ ಆರಾಧ್ಯ ದೇವರುಗಳು.ಕೋವಿಡ್‌ಸಂದರ್ಭದಲ್ಲಿ ನೀವು ಮಾಡುತ್ತಿರುವ ಸೇವೆಗೆನಮ್ಮದೊಂದುಅಳಿಲುಸೇವೆಎಂದುಕೊಂಡು ಸನ್ಮಾನಿಸಲಾಗಿದೆ ಎಂದು ಹೇಳಿದರು.

Advertisement

ಕಂದಾಯ ಸಚಿವ ಆರ್‌.ಅಶೋಕ್‌,ಸಂಸದ ತೇಜಸ್ವಿ ಸೂರ್ಯ, ಮಹಾನಗರಪಾಲಿಕೆ ಮಾಜಿ ಸದಸ್ಯೆ ನಾಗರತ್ನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next