ರಾಮನಗರ: ಕೋವಿಡ್ ಸೋಂಕಿತರ ಚಿಕಿತ್ಸೆಗೆಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಪಟ್ಟ ಶ್ರಮಕ್ಕೆ ಎಲ್ಲರೂ ತಲೆಬಾಗಿ ನಮಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್. ಶಶಿಧರ್ ತಿಳಿಸಿದರು.
ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿಗುರುವಾರ ನಡೆದ ವೈದ್ಯರ ದಿನಾಚರಣೆಯಲ್ಲಿಮಾತನಾಡಿ, ಕೋವಿಡ್ ಸೋಂಕಿತರ ದೊಡ್ಡಸಂಖ್ಯೆ, ಜೀವ ಉಳಿಸುವ ಹೋರಾಟ,ಸೌಲಭ್ಯಗಳ ಕೊರತೆ, ವಿಶ್ರಾಂತಿ ಇಲ್ಲದೆ ಸೋಂಕಿತರ ಸೇವೆ.ಹೀಗೆ ಸಾಲು ಸಾಲು ಸವಾಲುಗಳನ್ನುಎದುರಿಸುತ್ತಾ ಕೋವಿಡ್ ಎರಡನೇ ಅಲೆವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಸಮರ ಸಾರಿದ್ದರಿಂದ ಇಂದು ಪ್ರತಿದಿನಸೋಂಕಿಗೆ ಒಳಗಾದವರಿಗಿಂತ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಇದಕ್ಕೆ ಕಾರಣ ವೈದ್ಯಲೋಕದಶ್ರಮ ಎಂದರು.ವೈದ್ಯರ ಸೇವೆ ಶ್ಲಾಘನೀಯ:ಈ ನಡುವೆ ವೈದ್ಯರ ಮೇಲೆ ಹಲ್ಲೆ, ವಾಗ್ಧಾಳಿ ಮೊದಲಾದಪ್ರಕರಣಗಳು ಜೀವ ರಕ್ಷಕರಮನಸ್ಸನ್ನು ನೋಯಿಸಿದೆ.ಆದರೂ, ದೃತಿಗೆಡದೆ ಕರ್ತವ್ಯವಿಮುಖರಾಗದೆ ರೋಗಿಗಳಪ್ರಾಣ ಉಳಿಸಲು ಶ್ರಮವಹಿಸುತ್ತಿದ್ದಾರೆ. ವೈದ್ಯರ ಸೇವೆಶ್ಲಾಘನೀಯ ಎಂದರು.
ಆರೋಗ್ಯದ ಬಗ್ಗೆ ಗಮನ ನೀಡಿ: ನಾವೆಲ್ಲರೂ ನಮ್ಮಆರೋಗ್ಯದ ಬಗ್ಗೆ ಹೆಚ್ಚುಗಮನ ಕೊಡಬೇಕಿದೆ. ರೋಗವನ್ನು ತಡೆಗಟ್ಟಲು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನುಪಾಲಿಸಬೇಕಿದೆ. ಮುಖ್ಯವಾಗಿ ಮಾಸ್ಕ್ಧರಿಸುವುದು, ಲಸಿಕೆ ಪಡೆಯುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಕೈಗಳನ್ನು ಶುಭ್ರವಾಗಿ ಇಟ್ಟುಕೊಳ್ಳುವುದುಮತ್ತು ಸಾಧ್ಯವಾದಷ್ಟು ಜನ ಜಂಗುಳಿಯಿಂದದೂರವಿರಬೇಕು. ಜನ ರಿಗೆ ಇದನ್ನುಮನದಟ್ಟು ಮಾಡಿಕೊಟ್ಟು ಇವುಗಳನ್ನುಕಡ್ಡಾಯವಾಗಿ ಪಾಲಿಸುವಂತೆ ಹೇಳಬೇಕು.ಜಗತ್ತಿನಿಂದ ಕೋವಿಡ್-19 ಸೋಂಕು ಬೇಗತೊಲಗಲಿ ಎಂದು ನಾವೆ ಲ್ಲರೂ ಆಶಿಸೋಣ.
ನಮ್ಮೆಲ್ಲರ ಜವಾಬ್ದಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಮೂಲಕ ವೈದ್ಯರಿಗೆ ಮತ್ತು ವೈದ್ಯಕೀಯಸಿಬ್ಬಂದಿಗೆ ಗೌರವ ಸಲ್ಲಿಸೋಣ ಎಂದರು.ವೈದ್ಯರಾದ ಡಾ.ಶಿವ ಸ್ವಾಮಿ, ಡಾ.ಅನಿಲ…ಕುಮಾರ್, ಡಾ.ರಾಜು, ಡಾ.ಪ್ರಕಾಶ್, ಡಾ.ಸುಷ್ಮ, ಡಾ.ಉಮಾ ಮಹೇಶ್ವರಿ, ಡಾ. ಸುರೇಶ್,ಡಾ. ನದೀಂ, ಡಾ.ಮಮತಾ ಹಾಜರಿದ್ದರು.