ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 1,164ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 11ಮಂದಿ ಬಲಿಯಾಗಿದ್ದಾರೆ.
ಮೃತರಲ್ಲಿ ಹಾಸನ ತಾಲೂಕಿನ 3,ಅರಕಲಗೂಡು, ಬೇಲೂರು ಮತ್ತು ಅರಸೀಕೆರೆ ತಾಲೂಕಿನತಲಾ ಇಬ್ಬರು, ಆಲೂರು ಮತ್ತು ಚನ್ನರಾಯಪಟ್ಟಣ ತಲಾಒಬ್ಬರು ಸೇರಿದ್ದಾರೆ.
ಸಕಲೇಶಪುರ ಮತ್ತುಹೊಳೆನರಸೀಪುರ ತಾಲೂಕಿನಲ್ಲಿ ಮಾತ್ರಸಾವಿನ ಪ್ರಕರಣಗಳು ವರದಿಯಾಗಿಲ್ಲ.ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ76,209ಕ್ಕೇರಿದ್ದು, ಸೋಂಕಿನಿಂದ ಈವರೆಗೆ ಒಟ್ಟು943 ಮಂದಿಮೃತಪಟ್ಟಿದ್ದಾರೆ. ಮಂಗಳವಾರ2,149ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿಈಗ ಸಕ್ರಿಯ ಪ್ರಕರಣಗಳ ಸಂಖ್ಯೆ12,999ಕ್ಕೆ ಇಳಿದಿದೆ.
ಮಂಗಳವಾರ ಸೋಂಕು ದೃಢಪಟ್ಟಿರುವ1,164 ಮಂದಿ ಪೈಕಿಹಾಸನ ತಾಲೂಕಿನ 316 ಮಂದಿ ಸೇರಿದ್ದರೆ, ಚನ್ನರಾಯಪಟ್ಟಣ314, ಅರಸೀಕೆರೆ249, ಅರಕಲಗೂಡು 99, ಬೇಲೂರು81,ಹೊಳೆನರಸೀಪುರ 50, ಸಕಲೇಶಪುರ33, ಆಲೂರು ತಾಲೂಕಿನ22 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ಸತೀಶ್‌ಕುಮಾರ್ ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿಮಂಗಳವಾರ2,149 ಮಂದಿ ಗುಣಮುಖರಾಗಿದ್ದಾರೆ.ಇದುವರೆಗೂ ಒಟ್ಟು62,267 ಮಂದಿ ಗುಣಮಖರಾಗಿದ್ದಾರೆ.ಐಸಿಯುನಲ್ಲಿರುವ 162 ಮಂದಿ ಸೇರಿ ಒಟ್ಟು12,999ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿನೀಡಿದ್ದಾರೆ.