Advertisement

ಲಸಿಕೆಯಲ್ಲಿ ರಾಜ್ಯ ಮುಂಚೂಣಿ: ಕಟ್ಟಾ

05:49 PM Jun 27, 2021 | Team Udayavani |

ಬೆಂಗಳೂರು:ಕೊರೊನಾ ಲಸಿಕೆ ನೀಡುವಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

Advertisement

ಹೆಬ್ಟಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆರೇಷನ್‌ ಕಿಟ್‌ ವಿತರಣೆ ಮಾಡಿ ಮಾತನಾಡಿದ ಅವರು,ಕೊರೋನಾ ಲಸಿಕೆ ನೀಡುವುದರಲ್ಲಿ ಕರ್ನಾಟಕದೇಶದಲ್ಲಿ ಮುಂಚೂಣಿಯಲ್ಲಿ ಇದೆ.ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೋನಾತೊಲಗಿಸಲು ಹಗಲಿರುಳು ಶ್ರಮ ಪಡುತ್ತಿದ್ದಾರೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪನವರು ಕೋವಿಡ್‌ನ್ನುಉತ್ತಮವಾವಿ ನಿಭಾಯಿಸುತ್ತಿದ್ದಾರೆ. ಕೊರೊನಾದಿಂದಮೃತರಾದ ವ್ಯಕ್ತಿಗಳ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ದೊರೆಯುವಂತೆ ವಿಮೆ ಮಾಡಿಸಲು ಮನವಿ ಮಾಡಿದ್ದೇವೆ.

ರೇಷನ್‌ ಕಾರ್ಡ್‌ ಹೊರತಾಗಿಯೂ ಎಲ್ಲಾ ಕೋವಿಡ್‌ ಮೃತರಿಗೆ ಪರಿಹಾರ ಒದಗಿಸಿ ಎಂದುಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಕೇಂದ್ರರಸಗೊಬ್ಬರ ಸಚಿವರಾದ ಡಿ.ವಿ. ಸದಾನಂದಗೌಡರುಹಾಗೂ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್‌ಅಜೀಂಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next