ಬಂಗಾರಪೇಟೆ: ಕೊರೊನಾ ಲಸಿಕೆ ಪಡೆಯಲುಸಾರ್ವಜನಿಕ ಆಸ್ಪತ್ರೆಯಲ್ಲಿ ನೂಕುನುಗ್ಗಲುಉಂಟಾಗಿರುವುದನ್ನು ತಪ್ಪಿಸಲುಎಲ್ಲಾವಾರ್ಡ್‌ಗಳಲ್ಲಿಯೂ ಮುಂದಿನ ದಿನಗಳಲ್ಲಿ ಲಸಿಕೆವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಪುರಸಭೆಮಾಜಿ ಅಧ್ಯಕ್ಷ ಹಾಗೂ ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷಕೆ.ಚಂದ್ರಾರೆಡ್ಡಿ ಹೇಳಿದರು.
ಪಟ್ಟಣದ 17ನೇ ವಾರ್ಡ್‌ನ ನಾಗರಿಕರಿಗೆವಾರ್ಡ್‌ನ ಸಾಯಿ ಟ್ರಾವೆಲ್ಸ್ ಬಳಿ ಏರ್ಪಡಿಸಿದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾಕಡೆ ಕೊರೊನಾ ಸೋಂಕು ದ್ವಿಗುಣವಾಗುತ್ತಿರುವುದರಿಂದ ನಾಗರಿಕರು ಲಸಿಕೆ ಹಾಕಿಸಿಕೊಳ್ಳಲುಮುಂದಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿಮಾತ್ರ ಲಸಿಕೆ ಹಾಕುವುದರಿಂದ ಜನರಿಗೆತೊಂದರೆಯಾಗಿದೆ.
ಈಬಗ್ಗೆ ಕಾಂಗ್ರೆಸ್ ಹಾಗೂ ಪುರಸಭೆ ಒತ್ತಾಯದ ಮೇರೆಗೆ ಪಟ್ಟಣ ಎಲ್ಲಾವಾರ್ಡ್‌ಗಳಲ್ಲಿ ಲಸಿಕೆ ಹಾಕುವ ಯೋಜನೆಕೈಗೊಂಡರೆ ನೂಕುನುಗ್ಗಲು ಇರುವುದಿಲ್ಲಎಂಬ ಮನವಿಗೆ ಆರೋಗ್ಯ ಇಲಾಖೆ ಸ್ಪಂದಿಸಿದ್ದು, ಒಂದೆರಡು ದಿನಗಳಲ್ಲಿ ಈ ಯೋಜನೆಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಅಲ್ಲದೆ, ಪಟ್ಟಣದಲ್ಲಿಯೂ ನಿತ್ಯ ಸೋಂಕಿಗೆ ನಾಲ್ಕೈದು ಮಂದಿ ಮೃತರಾಗುತ್ತಿದ್ದು, ರುದ್ರಭೂಮಿಯಲ್ಲಿ ಜೆಸಿಬಿ ಯಂತ್ರದಮೂಲಕ ಗುಂಡಿ ಅಗೆಯುವುದಕ್ಕೆ ದುಬಾರಿಹಣ ಕೊಡಬೇಕಾಗಿರುವುದನ್ನು ತಪ್ಪಿಸಲುಪುರ ಸಭೆಯಿಂದ ಉಚಿತವಾಗಿ ಗುಂಡಿ ಅಗೆಯಲು ಜೆಸಿಬಿ ಯಂತ್ರ ನೀಡಲು ಸಹನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದಅವರು, ಈಗಾಗಲೇ ಜಿಲ್ಲಾ ಕಾಂಗ್ರೆಸ್‌ಪಕ್ಷದಿಂದ ನಾಗರಿಕರ ಸೇವೆಗೆ ಉಚಿತವಾಗಿ 3ಆ್ಯಂಬುಲೆನ್ಸ್ ನೀಡಿದೆ ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷಎ.ವಿ.ಪ್ರಭಾಕರ್, ಪುರಸಭೆ ಸದಸ್ಯ ಸುಹೇಲ್,ಕುಂಬಾರಪಾಳ್ಯ ಮಂಜುನಾಥ್, ಸಮಾಜಸೇವಕ ಡಿ.ಕಿಶೋರ್ ಪಟೇಲ್, ಕರವೇಚಲಪತಿ, ಅಯ್ಯಮಂಜು, ಕಾರಹಳ್ಳಿ ಹರೀಶ್,ಆರೋಗ್ಯನಿರೀಕ್ಷಕರಾದ ರವಿ ಮುಂತಾದವರು ಉಪಸ್ಥಿತರಿದ್ದರು.