Advertisement

ಮಂಡ್ಯ ಅನ್‌ಲಾಕ್‌, ಹಾಸನ ಲಾಕ್

08:31 PM Jun 20, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣಶೇ.5ಕ್ಕಿಂತ ಹೆಚ್ಚಿರುವುದರಿಂದ ಮತ್ತೂಂದು ವಾರ (ಜೂ.28ರವರೆಗೆ) ಲಾಕ್‌ಡೌನ್‌ ಯಥಾಸ್ಥಿತಿ ಮುಂದುವರಿಯಲಿದೆ.ಸೋಮವಾರದಿಂದ ಅನ್‌ಲಾಕ್‌ ಆಗಬಹುದೆಂಬನಿರೀಕ್ಷೆಯಿತ್ತು. ಆದರೆ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿದರ ಶೇ.7.66 ರಷ್ಟಿದೆ. ಹೀಗಾಗಿ ಈ ಹಿಂದೆ ಜಾರಿಯಲ್ಲಿದ್ದ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ( ಜೂ.11 ರಂದುಹೊರಡಿಸಿದ್ದ ಅಧಿಸೂಚನೆಯಂತೆ) ಜಿಲ್ಲೆಯಲ್ಲಿಮುಂದುವರಿಸಲು ಸರ್ಕಾರ ಶನಿವಾರ ನಿರ್ಧರಿಸಿದೆ.

Advertisement

ವಾರದ 3 ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ,ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶವಿದೆ. ಇನ್ನುಳಿದ 4 ದಿನ ಅಂದರೆಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ವಾರದ ಎಲ್ಲಾದಿನಗಳಲ್ಲೂ ಔಷಧಿ ಅಂಗಡಿಗಳು, ಹಾಲಿನ ಬೂತ್‌, ಆಸ್ಪತ್ರೆ,ನ್ಯಾಯಬೆಲೆ ಅಂಗಡಿಗಳು ದಿನವಿಡೀ ತೆರೆದಿರಲಿವೆ.

ಬ್ಯಾಂಕು, ಅಂಚೆ ಕಚೇರಿ, ಜೀವ ವಿಮೆ ಕಚೇರಿ, ರೈತ ಸಂಪರ್ಕಕೇಂದ್ರ, ಕೃಷಿ ಯಂತ್ರೋಪಕರಣ, ರಸಗೊಬ್ಬರ ಮತ್ತುಕೀಟನಾಶಕ ಮಳಿಗೆ ಸೋಮವಾರ, ಬುಧವಾರ, ಶುಕ್ರವಾರಮಾತ್ರ ಬೆಳಗ್ಗೆ 8 ರಿಂದ 12 ಗಂಟೆವರೆಗೆ ವ್ಯವಹರಿಸಲುಅವಕಾಶವಿದೆ. ಇನ್ನುಳಿದ 4 ದಿನ ವ್ಯವಹಾರ ಸಂಪೂರ್ಣಬಂದ್‌ ಆಗಿರಲಿದೆ.ಹಣ್ಣು, ತರಕಾರಿ, ಆಹಾರ ಮತ್ತು ದಿನಸಿ ಹೋಂ ಡೆಲಿವೆರಿ ಎಲ್ಲದಿನಗಳಲ್ಲೂ ಲಭ್ಯವಿರಲಿದೆ. ಸರಕು ಸಾಗಾಣಿಕೆ ವಾಹನಗಳಸಂಚಾರಕ್ಕೆ ಮಾತ್ರ ಅವಕಾಶವಿದೆ. ಇನ್ನುಳಿದ ವಾಹನ ಹಾಗೂಜನರ ಓಡಾಟಕ್ಕೆ ಅವಕಾಶವಿಲ್ಲ. ಮಾರ್ಗದರ್ಶಿ ಸೂತ್ರಉಲ್ಲಂ ಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಪ್ರಕಾರಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next