Advertisement

ಕೊರೊನಾ ಮುಕ್ತಕ್ಕೆ ಶ್ರಮ: ಶಾಸಕ

06:09 PM Jun 20, 2021 | Team Udayavani |

ದೇವನಹಳ್ಳಿ: ತಾಲೂಕಿನಲ್ಲಿ ಗ್ರಾಮಮತ್ತುಪಟ್ಟಣಗಳನ್ನುಕೊರೊನಾಮುಕ್ತಮಾಡಲು ಶ್ರಮಿಸಲಾಗುತ್ತಿದೆ. ತಾಲೂಕಿನಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಕಡಿಮೆವಾಗುತ್ತಿದೆ ಎಂದು ಶಾಸಕನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಏರೋ ಸ್ಪೇಸ್‌ಇಟಾನ್‌ ಕಂಪನಿವತಿಯಿಂದ ಸರ್ಕಾರಿಆಸ್ಪತ್ರೆಗೆ 10 ಆಕ್ಸಿಜನ್‌ ಸಾಂದ್ರಕಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ,ಕೋವಿಡ್‌ ಸೊಂಕಿತರ ಪ್ರಾಣರಕ್ಷಣೆಗಾಗಿ ಆಮ್ಲಜನಕ ಸಾಂದ್ರಕಗಳ ನೆರವು ಸಿಕ್ಕಿರುವುದು ಉತ್ತಮ ಬೆಳವಣಿಗೆಯಾಗಿದೆ.

ಜಿಲ್ಲಾಡಳಿತವುಮೊಬೈಲ್‌ಕ್ಲಿನಿಕ್‌ ಮೂಲಕ ಹಳ್ಳಿ ಹಳ್ಳಿಗೆಹೋಗಿ ಜನರ ಆರೋಗ್ಯ ತಪಾಸಣೆಜೊತೆಗೆ, ಕೋವಿಡ್‌ ಪರೀಕ್ಷೆಯನ್ನುಉಚಿತವಾಗಿ ಮಾಡುತ್ತಿದೆ. ಜನರು,ಕೋವಿಡ್‌ ಭಯ ಬಿಟ್ಟು, ಪರೀಕ್ಷೆಮಾಡಿಸಿಕೊಳ್ಳಬೇಕು ಎಂದರು.

ಆರೋಗ್ಯದ ಬಗ್ಗೆ ಕಾಳಜಿವಹಿಸಿ:ಪ್ರತಿಯೊಬ್ಬರೂ ಆರೋಗ್ಯದ  ಬಗ್ಗೆ ಕಾಳಜಿ ಹೊಂದಿರಬೇಕು. ಎಷ್ಟುಸಾಧ್ಯವೋ ಅಷ್ಟು ಜಾಗರೂಕರಾಗಿರಬೇಕು. ಕೊರೊನಾ ಮುಕ್ತ ಮತ್ತುಆರೋಗ್ಯಕರ ಪರಿಸರ ನಿರ್ಮಾಣಮಾಡಬೇಕು. 2ನೇ ಅಲೆ ನಂತರ3ನೇ ಅಲೆ ಬರಲಿದೆ. ಮಕ್ಕಳ ಮೇಲೆತೀವ್ರ ಪರಿಣಾಮ ಬೀರಲಿದೆ ಎಂದುತಜ್ಞರು ಹೇಳುತ್ತಿದ್ದಾರೆ. ಈಗಾಗಲೇತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳ ಮೂಲಕಸೂಚನೆ ನೀಡಿಲಾಗಿದೆ.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.ತಾಲೂಕು ಆರೋಗ್ಯಾಧಿಕಾರಿಡಾ.ಸಂಜಯ್‌, ಪಿಕಾರ್ಡ್‌ ಬ್ಯಾಂಕ್‌ಮಾಜಿ ಅಧ್ಯಕ್ಷ ಆರ್‌ ಮುನೇಗೌಡ,ಪುರಸಭಾ ಸದಸ್ಯ ಜಿ.ಎ.ರವೀಂದ್ರ,ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ಮಾಜಿ ಪುರಸಭಾ ಸದಸ್ಯಕುಮಾರ್‌, ಮುಖಂಡರಾದ ವಿಜಯ್‌ಕುಮಾರ್‌,ಪ್ರಭಾಕರ್‌,ನಾರಾಯಣಪ್ಪಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next