Advertisement

ಕೊರೊನಾ ಮುಕ್ತ ಗ್ರಾಪಂಗೆ ಪಣ ತೊಡಿ

08:25 PM Jun 17, 2021 | Team Udayavani |

ಹುಳಿಯಾರು: ಗ್ರಾಮೀಣ ಮಟ್ಟದಲ್ಲಿಕೊರೊನಾ ವೈರಸ್‌ ಕೊಂಡಿ ಮುರಿಯಲುಕೋವಿಡ್‌ ಕಾರ್ಯಪಡೆಯ ಸದಸ್ಯರಪಾತ್ರ ಹೆಚ್ಚಿನದಾಗಿದೆ ಎಂದು ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಪಂ ಕೋವಿಡ್‌ ನೋಡಲ್‌ ಅಧಿಕಾರಿ ಗಂಗಾಧರಯ್ಯ ಹೇಳಿದರು.

Advertisement

ಕೋರಗೆರೆ ಗ್ರಾಪಂ ಆಯೋಜಿಸಿದ್ದಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರಸಭೆಯಲ್ಲಿ ಮಾತನಾಡಿದ ಅವರು,ಕೋವಿಡ್‌ ಮುಕ್ತ ಪಂಚಾಯ್ತಿಯಾಗಿಸಲುಪ್ರತಿ ವಾರ್ಡ್‌ ಮತ್ತು ಬಡಾವಣೆಗಳಿಗೆಸದಸ್ಯರು ಭೇಟಿ ನೀಡಿ ಧೈರ್ಯತುಂಬಬೇಕು. ಅಗತ್ಯ ಇದ್ದವರಿಗೆ ಚಿಕಿತ್ಸೆಒದಗಿಸಲು ನೆರವು ಕಲ್ಪಿಸಬೇಕು. ಕೋವಿಡ್‌ಬಗ್ಗೆ ಅನಗತ್ಯ ಭಯ, ಭೀತಿ ಹೋಗಲಾಡಿಸಿ,ಅವರಲ್ಲಿ ಆತ್ಮವಿಶ್ವಾಸ ತುಂಬುವಕೆಲಸವಾಗಬೇಕು ಎಂದರು.

ಪಿಡಿಒ ಗಂಗಾಧರಪ್ಪ ಮಾತನಾಡಿ,ಕೋವಿಡ್‌ ಆರೈಕೆ ಕೇಂದ್ರಗಳಿಗೆಕಳುಹಿಸುತ್ತಾರೆ ಎನ್ನುವ ಭಯದಿಂದ ಜನಪರೀಕ್ಷಿಸಿಕೊಳ್ಳಲು, ಕೊರೊನಾ ಪರೀಕ್ಷೆಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.ಈ ಸಂದರ್ಭದಲ್ಲಿ ಪಂಚಾಯಿತಿಕಾರ್ಯಪಡೆ ಪರಿಶೀಲನೆ ನಡೆಸುವಾಗ ಸರಿಯಾಗಿ ತಿಳಿ ಹೇಳಬೇಕು.

ಕೊರೊನಾಲಕ್ಷಣ ಕಾಣಿಸಿಕೊಂಡ ಏಳು ದಿನಗಳು ಬಹಳಮುಖ್ಯವಾಗಿದ್ದು, ಈ ಅವಧಿಯಲ್ಲಿ ಸೂಕ್ತಔಷಧೋಪಚಾರ ಪಡೆದುಕೊಂಡರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದರು.ಪಿಎಸ್‌ಐ ಕೆ.ಟಿ.ರಮೇಶ್‌, ಯಳನಾಡುವಿಎಸ್‌ಎಸ್‌ಎನ್‌ ಅಧ್ಯಕ್ಷ ಸಿದ್ದು, ಯಳನಾಡುಗ್ರಾಪಂ ಉಪಾಧ್ಯಕ್ಷ, ಸದಸ್ಯ ಭಟ್ಟರಹಳ್ಳಿದಿನೇಶ್‌, ಕೆ.ಕೆ.ಹನುಮಂತಪ್ಪ, ಕಾಂತರಾಜು,ರಂಗಸ್ವಾಮಿ, ಚಂದ್ರಶೇಖರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next