ಹಾಸನ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಹಾಸನ ಹಾಲು ಒಕ್ಕೂಟ(ಹಾಮುಲ್) ಮತ್ತು ಹಾಸನ ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್ (ಎಚ್‌ಡಿಸಿಸಿ ಬ್ಯಾಂಕ್) ವತಿಯಿಂದ 10ಸಾವಿರ ರೂ. ಪರಿಹಾರ ನೀಡಲಾಗುವುದು ಎಂದುಹಾ ಮುಲ್ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಮೃತರ ಕುಟುಂಬಗಳಿಗೆ ನೀಡುವ 10 ಸಾವಿರ ರೂ.ಪರಿಹಾರದಲ್ಲಿ ಹಾಮುಲ್ 6 ಸಾವಿರ ರೂ. ಮತ್ತು ಎಚ್‌ಡಿಸಿಸಿ ಬ್ಯಾಂಕ್ 4 ಸಾವಿರ ರೂ. ಭರಿಸಲಿವೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರಿಗೆಮಾತ್ರ ಪರಿಹಾರ ನೀಡಲಾಗುವುದು. ಇನ್ನೊಂದುವಾರ ದೊಳಗೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಬಿಪಿಎಲ್ ಕುಟುಂಬದವರ ಗುರುತಿಸುವಿಕೆ:ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಈವರೆಗೆ 1,129 ಮಂದಿ ಮೃತಪಟ್ಟಿದ್ದು 2ನೇ ಅಲೆಯಲ್ಲಿ ಮೃತಪಟ್ಟಿರುವ 663 ಮಂದಿ ಪೈಕಿ ಬಿಪಿಎಲ್ ಕುಟುಂಬದವ ರನ್ನು ಗುರ್ತಿಸಿ ಮೊದಲು ತಲಾ 10 ಸಾವಿರರೂ. ಪರಿಹಾರ ನೀಡಲಾಗುವುದು. ಹಣಕಾಸಿನಪರಿ ಸ್ಥಿತಿ ನೋಡಿಕೊಂಡು ಕೊರೊನಾ ಮೊದಲ ಅಲೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರನೀಡುವ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲಾಡಳಿತದಿಂದ ಮೃತರ ಪಟ್ಟಿ ಪಡೆದು ಅದರಲ್ಲಿ ಬಿಪಿಎಲ್‌ಕುಟುಂ ಬದವರನ್ನು ಗುರ್ತಿಸಿ ಪರಿಹಾರ ನೀಡಲಾಗುವುದು ಎಂದರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ: ಕೊರೊನಾ ಸೋಂಕು ಇಳಿಮುಖವಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕಾಣಿಸಿಕೊಳ್ಳು ತ್ತಿದ್ದು, ಮತ್ತಷ್ಟು ವ್ಯಾಪಿಸಬಹುದು. ಆದ್ದರಿಂದಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡುಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಹರಡುವುದನ್ನುನಿಯಂತ್ರಿಸಬೇಕು ಎಂದರು.
ಲಸಿಕೆ ಪೂರೈಕೆಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚುಲಸಿಕೆ ಪೂರೈಕೆ ಮಾಡಿ ಜೆಡಿಎಸ್, ಕಾಂಗ್ರೆಸ್ ಶಾಸಕರಕ್ಷೇತ್ರಗಳನ್ನು ಕಡೆಗಣಿಸದೆ ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.ಕೊರೊನಾ 3ನೇ ಅಲೆ ಎದುರಾಗಲಿದೆ ಎಂದುತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.2ನೇ ಅಲೆಯಲ್ಲಾದ ಲೋಪಗಳು ಮರುಕಳಿಸದಂತೆಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.