ಬಂಗಾರಪೇಟೆ: ಕ್ಷೇತ್ರದ ಜನರಿಗಾಗಿ ಲಸಿಕೆ ಖರೀದಿಸಲು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಕೋಟಿ ರೂ. ನೀಡಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಘೋಷಿಸಿದರು.
ತಾಲೂಕಿನ ಆಲಂಬಾಡಿ ಜೋತೇನಹಳ್ಳಿ,ಮಾಗೊಂದಿ, ಹುಲಿಬೆಲೆ ಮತ್ತು ಐನೋರ ಹೊಸಹಳ್ಳಿ ಗ್ರಾಪಂಗಳಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಸಭೆಯಲ್ಲಿ ಮಾತನಾಡಿ, ಸರ್ಕಾರ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುತ್ತಿದೆ,
ಮತ್ತೂಂದು ಕಡೆ ಲಸಿಕೆ ಸಮರ್ಪಕವಾಗಿ ಪೂರೈಸದೆ ನಿರ್ಲಕ್ಷ್ಯ ಮಾಡುತ್ತಿದೆ. ತಮ್ಮ ತಪ್ಪುಮರೆಮಾಚಲು ವಿರೋಧ ಪಕ್ಷಗಳು ಲಸಿಕೆವಿಷಯದಲ್ಲಿ ಜನರನ್ನು ತಪ್ಪು ದಾರಿಗೆಎಳೆಯುತ್ತಿವೆ ಎಂದು ಆರೋಪಿಸುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಶಾಸಕರ್ಯಾರೂ ಲಸಿಕೆವಿರೋಧಿಸಿಲ್ಲ, ಫಲಾನುಭವಿಗಳ ಸಂಖ್ಯೆಗೆತಕ್ಕಂತೆ ಆಸ್ಪತ್ರೆಗಳಿಗೆ ಲಸಿಕೆ ನೀಡದೆ ನಿರ್ಲಕ್ಷ್ಯಮಾಡಿ, ಆ ಲೋಪ ಮುಚ್ಚಿಡಲು ವಿಪಕ್ಷಗಳನಾಯಕರ ಮೇಲೆ ಸರ್ಕಾರ ಟೀಕಾ ಪ್ರಹಾರಮಾಡುತ್ತಿದೆ. ನಿತ್ಯ 4 ಸಾವಿರ ಜನಕ್ಕೆ ಲಸಿಕೆಬೇಕಿದೆ. ಕೇವಲ 200 ಮಂದಿಗೆ ಮಾತ್ರನೀಡುತ್ತಿದ್ದಾರೆ ಎಂದು ದೂರಿದರು.
ಲಸಿಕೆ ಖರೀದಿಗೆ ಸರ್ಕಾರದ ಬಳಿ ಹಣ ಇಲ್ಲದ ಕಾರಣ, ನಾನು ಕ್ಷೇತ್ರದ ಜನರಿಗಾಗಿಶಾಸಕರ ಅನುದಾನದಲ್ಲಿ 1 ಕೋಟಿ ರೂ.ಬಳಸಲು ಜಿಲ್ಲಾಧಿಕಾರಿಗೆ ಮನವಿ ಪತ್ರನೀಡುವೆ. ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯರು ನೆಮ್ಮದಿಯಾಗಿ ಬದುಕಲುಸಾಧ್ಯವಿಲ್ಲ. ದಿನ ಬಳಕೆ ವಸ್ತುಗಳು,ಪೆಟ್ರೋಲ್, ಡೀಸೆಲ್, ಔಷಧಿಗಳ ಬೆಲೆಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆದೂಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲಾರಂಗದಲ್ಲಿಯೂ ಜನರ ಹಿತ ಕಾಪಾಡುವಲ್ಲಿವಿಫಲವಾಗಿದೆ ಎಂದು ಟೀಕಿಸಿದರು.ತಹಶೀಲ್ದಾರ್ ಎಂ.ದಯಾನಂದ್,ತಾಪಂ ಇಒ ಎನ್.ವೆಂಕಟೇಶಪ್ಪ, ಬಿಇಒಕೆಂಪಯ್ಯ, ಹುಲಿಬೆಲೆ ಗ್ರಾಪಂ ಅಧ್ಯಕ್ಷಎಚ್.ವಿ.ಸುರೇಶ್, ಐನೋರಹೊಸಹಳ್ಳಿಗ್ರಾಪಂ ಅಧ್ಯಕ್ಷೆ ಸುಮಿತ್ರ ಶ್ರೀನಿವಾಸ್,ಉಪಾಧ್ಯಕ್ಷ ರಾಮರೆಡ್ಡಿ, ಪಿಕಾರ್ಡ್ ಬ್ಯಾಂಕಿನಅಧ್ಯಕ್ಷ ಎಚ್.ಕೆ. ನಾರಾಯಣಸ್ವಾಮಿ,ನಿರ್ದೇಶಕ ವೆಂಕಟಾ ಚಲಪತಿ,ಮುಖಂಡರಾದ ಕೆ.ಸಿ.ಗೋಪಾಲ್,ಬಸವರಾಜ್, ಕೆಸರನಹಳ್ಳಿ ಮಂಜುನಾಥ್,ಪಿಡಿಒಗಳಾದ ಗಂಗೋಜಿರಾವ್,ಶ್ರೀನಿವಾಸರೆಡ್ಡಿ, ಶಂಕರ್, ಚಂದ್ರಕಲಾಮುಂತಾದವರಿದ್ದರು.