ಬೆಂಗಳೂರು: ರಾಜ್ಯದಲ್ಲಿ ಒಂಭತ್ತು ವಾರದ ಬಳಿಕಕೊರೊನಾ ಸೋಂಕು ಪ್ರಕರಣಗಳು ಏಳು ಸಾವಿರಆಸುಪಾಸಿಗೆ ಇಳಿಕೆಯಾಗಿವೆ. 10 ಜಿಲ್ಲೆಗಳಲ್ಲಿ100ಕ್ಕಿಂತ ಕಡಿಮೆ ಮಂದಿಗೆ ಸೋಂಕು ತಗುಲಿದ್ದು,ಎಂಟು ಜಿಲ್ಲೆಗಳಲ್ಲಿ ಸೋಂಕಿತರ ಸಾವಾಗಿಲ್ಲ.ಭಾನುವಾರ 7,810 ಮಂದಿಗೆ ಸೋಂಕುತಗುಲಿದ್ದು, 125 ಸೋಂಕಿತರ ಸಾವಾಗಿದೆ.
18,648 ಸೋಂಕಿತರು ಗುಣಮುಖರಾಗಿದ್ದಾರೆ. ಶನಿವಾರಕ್ಕೆ ಹೋಲಿಸಿದರೆ ಸೋಂಕುಪರೀಕ್ಷೆಗಳು 19 ಸಾವಿರ (1.29 ಲಕ್ಷಕ್ಕೆ)ಕಡಿಮೆಯಾಗಿದ್ದು ಹೊಸ ಪ್ರಕರಣಗಳು 1975,ಸೋಂಕಿತರ ಸಾವು 19 ಕಡಿಮೆಯಾಗಿವೆ. ಸೋಂಕುಪರೀಕ್ಷೆಗಳ ಪಾಸಿಟಿವಿಟಿ ದರ ಶೇ.6.5ರಷ್ಟು, ಮರಣದರ ಶೇ 1.6 ರಷ್ಟು ದಾಖಲಾಗಿದೆ.ಬೆಂಗಳೂರಿನಲ್ಲಿ 1348, ಮೈಸೂರು 1251ಮಂದಿಗೆ ಸೋಂಕು ತಗುಲಿದೆ.
ಇವುಗಳನ್ನುಹೊರತುಪಡಿಸಿದರೆ ಎಲ್ಲ ಜಿಲ್ಲೆಗಳಲ್ಲಿಯಲ್ಲಿಯೂಸೋಂಕು ಪ್ರಕರಣಗಳು ಒಂದು ಸಾವಿರದೊಳಗಿವೆ.ಹಾಸನದಲ್ಲಿ 581, ಮಂಡ್ಯ, ಶಿವಮೊಗ್ಗ, ತುಮಕೂರು, ದಾವಣಗೆರೆ ಹಾಗೂ ದಕ್ಷಿಣ ಕನ್ನಡದಲ್ಲಿ400ಕ್ಕೂ ಹೆಚ್ಚಿದೆ. ರಾಮನಗರ, ರಾಯ ಚೂರು,ಯಾದಗಿರಿ, ವಿಜಯಪುರ, ಕೊಪ್ಪಳ, ಹಾವೇರಿ,ಗದಗ, ಕಲಬುರಗಿ, ಬೀದರ್ ಹಾಗೂ ಬಾಗಲಕೋಟೆಸೇರಿ 10 ಜಿಲ್ಲೆಗಳಲ್ಲಿ 100ಕ್ಕೂ ಕಡಿಮೆಮಂದಿಗೆ ಸೋಂಕು ತಗುಲಿದೆ. ಬಾಗ ಲಕೋಟೆ, ಬೀದರ್, ಚಿಕ್ಕಮಗಳೂರು,ಚಿತ್ರದುರ್ಗ, ಕಲಬುರಗಿ, ಮಂಡ್ಯ,ರಾಮನಗರ, ಯಾದಗಿರಿ ಸೇರಿ ಎಂಟುಜಿಲ್ಲೆಗಳಲ್ಲಿ ಸೋಂಕಿತರ ಸಾವಾಗಿಲ್ಲ. ಮೈಸೂರಿನಲ್ಲಿ25, ಬೆಂಗಳೂರಿನಲ್ಲಿ 23 ಸೋಂಕಿತರ ಸಾವಾಗಿದೆ.
ಸೋಂಕು ಪರೀಕ್ಷೆಗಳು ಇಳಿಕೆ: ಕಳೆದ ವಾರಆರಂಭದಲ್ಲಿ 1.50 ಲಕ್ಷಕ್ಕೂ ಅಧಿಕ ಸೋಂಕುಪರೀಕ್ಷೆಗಳಾಗುತ್ತಿದ್ದು, ಸದ್ಯ ಆ ಪ್ರಮಾಣ 1.30 ಲಕ್ಷಕ್ಕೆಇಳಿಕೆಯಾಗಿವೆ. ಬೆಂಗಳೂರಿನಲ್ಲಿ 65 ಸಾವಿರದಿಂದ45 ಸಾವಿರಕ್ಕೆ ಇಳಿಕೆಯಾಗಿವೆ. ಹೀಗಾಗಿ, ಸೋಂಕುಪ್ರಕರಣಗಳು ಇಳಿಕೆಯಾಗುತ್ತಿವೆ. ಸೋಂಕುಪರೀಕ್ಷೆಗಳು ಹೆಚ್ಚಳವಾದರೆ ಮತ್ತೆ ಪರೀಕ್ಷೆಗಳುಹೆಚ್ಚಳವಾಗುವ ಸಾಧ್ಯತೆಗಳಿವೆ