Advertisement
ಕೊರೊನಾ ನಿಯಂತ್ರಣಕ್ಕೆ ನಿಮ್ಮ ಕ್ಷೇತ್ರದಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದೀರಾ?
Related Articles
Advertisement
ಬಡವರಿಗೆ ಫುಡ್ ಕಿಟ್ ಹಂಚಿಕೆ ಮಾಡಿದ್ದೀರಾ?
ಕ್ಷೇತ್ರದಲ್ಲಿ ಆಶಾ, ಅಂಗನವಾಡಿ, ಪೌರ ಕಾರ್ಮಿಕರಿಗೆಆಹಾರದ ಕಿಟ್ ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿಅವರಿಗೆ ಫುಡ್‌ಕಿಟ್ ವಿತರಣೆ ಮಾಡಲಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟದಲ್ಲಿ ಇರುವವರಿಗೆಮನೆ ಮನೆಗೆ ಹಂಚಿಕೆ ಮಾಡಲಾಗಿದೆ. ಅಲ್ಲದೆ ಎರಡುಹೋಬಳಿಗೆ ಸಹಾಯವಾಣಿ ಮಾಡಿದ್ದೇವು. ಯಾರಾದರೂ ಸಹಾಯ ಕೇಳಿದರೆ ಅವರಿಗೆಫುಡ್ ವ್ಯವಸ್ಥೆ ಮಾಡಲಾಗುತ್ತಿದೆ.
ವ್ಯಾಕ್ಸಿನೇಷನ್ ಹಾಕಿಸುವಕೆಲಸ ಹೇಗೆ ನಡೆದಿದೆ?
ವ್ಯಾಕ್ಸಿನೇಷನ್ ಹಾಕಿಸುವಕೆಲಸವನ್ನು ವ್ಯವಸ್ಥಿತವಾಗಿಮಾಡಲಾ ಗುತ್ತಿದೆ. ನಮ್ಮಲ್ಲಿಗೆಸಿಟಿಯಿಂದ ಜನರು ಬರು ತ್ತಾರೆ.ಮೊಬೈಲ್ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಿದ್ದೇವೆ.ಆಕ್ಸಿಜನ್‌ಗಳನ್ನು ನಮ್ಮ ಫೌಂಡೇಷನ್ ವತಿಯಿಂದ 20ಸಿಲಿಂಡರ್ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ. ಖಾಸಗಿಆಸ್ಪತ್ರೆ ಸೇರಿದಂತೆ ಅಗತ್ಯ ಇರುವವರಿಗೆ ನಾವೇತಲುಪಿಸುವ ಕೆಲಸ ಮಾಡುತ್ತಿದ್ದೇವೆ.
ಖಾಸಗಿ ಆಸ್ಪತ್ರೆಯವರ ಸಹಕಾರ ಇದೆಯಾ?
ಖಾಸಗಿ ಆಸ್ಪತ್ರೆಯವರು ನಮ್ಮ ಬೇಡಿಕೆಗೆಸ್ಪಂದಿಸಿದ್ದಾರೆ. ಅವರಿಗೆ ಅಗತ್ಯ ಆಕ್ಸಿಜನ್ ಕೂಡನಾವೇ ಸರಬರಾಜು ಮಾಡಿದ್ದೇವೆ. ಕೆಲವುಆಸ್ಪತ್ರೆಗಳಲ್ಲಿ ಹೆಚ್ಚಿನ ಬಿಲ್ ಮಾಡಿದಾಗ ಕಡಿಮೆಮಾಡಿಸಿದ್ದು, ಕೆಲವು ರೋಗಿಗಳ ಬಿಲ್ ನಾವೇಪಾವತಿಸುವ ಕೆಲಸ ಮಾಡಿದ್ದೇವೆ. ನಿಮ್ಮ ಕ್ಷೇತ್ರದಲ್ಲಿ ಸ್ಮಶಾನ ವ್ಯವಸ್ಥೆ ಇದೆಯಾ?ನಮ್ಮ ಕ್ಷೇತ್ರದಲ್ಲಿ ಕೊರೊನಾ ರೋಗದಿಂದ ನಿಧನರಾದವರ ಅಂತ್ಯಸಂಸ್ಕಾರಕ್ಕೆ ಎರಡು ಸ್ಮಶಾನಗಳವ್ಯವಸ್ಥೆ ಮಾಡಿದ್ದೇವೆ. ಕೆಲವು ಶವಗಳ ಅಂತ್ಯಸಂಸ್ಕಾರವನ್ನು ನಾನೇ ಮುಂದೆ ನಿಂತು ಮಾಡಿದ್ದೇನೆ.ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕೆ ಒಂದು ತಂಡರಚನೆ ಮಾಡಿದ್ದೇವೆ. ಅವರು ಸಂಪ್ರದಾಯ ಪ್ರಕಾರಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಐಸೋಲೇಷನ್‌ಸೆಂಟರ್ ಮಾಡಿದ್ದೀರಾ?
ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರನ್ನುಆ್ಯಂಬುಲೆನ್ಸ್‌ಗಳ ಮೂಲಕ ಸಿಟಿಗೆ ತಂದು ಚಿಕಿತ್ಸೆಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಗತ್ಯಸೌಕರ್ಯ ಇಲ್ಲದ ಕಾರಣ ನಗರಕ್ಕೆ ಆ್ಯಂಬುಲೆನ್ಸ್‌ಮೂಲಕ ತರುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
3ನೇ ಅಲೆ ನಿಯಂತ್ರಣಕ್ಕೆ ಯಾವ ರೀತಿ ಮುಂಜಾಗ್ರತೆ ತೆಗೆದು ಕೊಂಡಿದ್ದೀರಿ?
3ನೇ ಅಲೆ ಮಕ್ಕಳಿಗೆ ಬರುತ್ತದೆಎನ್ನುವ ಕಾರಣಕ್ಕೆ ವಿಶೇಷ ಆಸ್ಪತ್ರೆ ವ್ಯವಸ್ಥೆಮಾಡುತ್ತಿದ್ದೇವೆ. ಖಾಸಗಿ ಕಂಪನಿಗಳಸಹಾಯದಿಂದ 75 ಲಕ್ಷ ರೂ.ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಘಟಕ ಹಾಕಿದ್ದೇವೆ. ಗ್ರಾಮೀಣಪ್ರದೇಶದಲ್ಲಿ ಪಿಎಚ್‌ಸಿಗಳಲ್ಲಿ ಆಕ್ಸಿಜನ್‌ಕಾನ್ಸಂಟ್ರೇಟ್‌ಗಳನ್ನುಒದಗಿಸಲಾಗಿದೆ.
ಶಂಕರ ಪಾಗೋಜಿ