Advertisement
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂಕೊರೊನಾ ಕಾರ್ಯಪಡೆ, ಹಾಸಿಗೆ, ಆಕ್ಸಿಜನ್,ಚುಚ್ಚುಮದ್ದು ನಿರ್ವಹಣೆ ಉಸ್ತುವಾರಿವಹಿಸಿಕೊಂಡಿರುವ ಐವರು ಸಚಿವರು ಸೇರಿ ಇಡೀಸಂಪುಟ ದಿನದ 24 ಗಂಟೆ ಕೆಲಸ ಮಾಡುತ್ತಿದೆ.ಮುಖ್ಯಮಂತ್ರಿಯವರು ರಾಜ್ಯ ಮಟ್ಟದ ಉಸ್ತುವಾರಿ ವಹಿಸಿದ್ದರೆ ಜಿಲ್ಲಾ ಉಸ್ತುವಾರಿಸಚಿವರುಗಳು ಆಯಾ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಕೊರೊನಾ ನಿಯಂತ್ರಣಕ್ಕೆ ಒತ್ತುನೀಡುತ್ತಿದ್ದಾರೆ.ಕೊರೊನಾ ಎರಡನೇ ಅಲೆಯನ್ನುನಿಯಂತ್ರಿಸಲು ಸರ್ಕಾರಯುದ್ದೋಪಾದಿಯಲ್ಲಿ ಕ್ರಮಗಳನ್ನುಕೈಗೊಳ್ಳುತ್ತಿದ್ದು ಲಸಿಕೆ ಅಭಿಯಾನವೂ ಉತ್ತಮವಾಗಿ ನಡೆಯುತ್ತಿದೆ.
Related Articles
Advertisement
ಅದಾದ ನಂತರ ಹೂವು, ಹಣ್ಣು, ತರಕಾರಿ ಬೆಳೆದು ನಷ್ಟಮಾಡಿಕೊಂಡಿರುವ ರೈತರಿಗೆ ಹೆಕ್ಟೇರ್‌ಗೆ 10 ಸಾವಿರ ರೂ.,ಆಟೋ ,ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಹಾಗೂಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂ., ಕೌÒರಿಕರು, ಅಗಸರು,ಟೈಲರ್, ಹಮಾಲಿ, ಕುಂಬಾರರು, ಅಕ್ಕ ಸಾಲಿಗರು, ಭಟ್ಟಿಕಾರ್ಮಿಕರು, ಮೆಕ್ಯಾನಿಕ್, ಕಮ್ಮಾರ, ಗೃಹ ಕಾರ್ಮಿಕರು, ರಸ್ತೆಬದಿ ಬೀದಿ ವ್ಯಾಪಾರಿಗಳಿಗೆ 2 ಸಾವಿರ ರೂ. ಆರ್ಥಿಕ ಪ್ಯಾಕೇಜ್‌ಘೋಷಿಸಲಾಯಿತು.
ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಲಾಕ್‌ಡೌನ್‌ನಿಂದ ಕಷ್ಟ ಅನುಭವಿಸುತ್ತಿದ್ದ ಇತರೆ ವರ್ಗದವರಿಗೂ 500 ಕೋಟಿ ರೂ.ಪ್ಯಾಕೇಜ್ ಘೋಷಿಸಿತು. ಪವರ್‌ಲೂಮ್ ನೇಕಾರರಿಗೆ ಮೂರು ಸಾವಿರ ರೂ. ಘೋಷಣೆ ಮಾಡಿರುವುದು 59 ಸಾವಿರ ಜನರಿಗೆನೆರವಾಗಲಿದೆ. ಅದೇ ರೀತಿ ಚಿತ್ರೋದ್ಯಮದ ಅಸಂಘಟಿತಕಾರ್ಮಿಕರು ಕಲಾವಿದರಿಗೆ 3 ಸಾವಿರ ರೂ. ನೀಡಿದ್ದು 22ಸಾವಿರ ಮಂದಿಗೆ ಅನುಕೂಲವಾಯಿತು.ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡುಗೆಕೆಲಸಗಾರರು, ಸಿಬ್ಬಂದಿ ಮತ್ತು ಮಸೀದಿಗಳಲ್ಲಿ ಕೆಲಸ ಮಾಡುವಮೌಜ್ವಾನ್ ಹಾಗೂ ಇಮಾಮ್‌ಗಳಿಗೂ ನೆರವು ವಿಸ್ತರಿಸಿದ್ದುಸಂಕಷ್ಟದಲ್ಲಿರುವ 36 ಸಾವಿರ ಮಂದಿಗೆ ನೆರವಾಗಲಿದೆ. ಹಾಗಾಗಿಎಲ್ಲ ವರ್ಗಕ್ಕೂ ಪ್ಯಾಕೇಜ್ ಸಿಕ್ಕಿದಂತಾಯಿತು.