Advertisement

ಮೂರನೇ ಅಲೆ ಎದುರಿಸಲು ಎಲ್ಲ ರೀತಿಯಲ್ಲೂ ಸಿದ್ಧತೆ

04:57 PM Jun 13, 2021 | Team Udayavani |

ಬೆಂಗಳೂರು: ಎರಡನೇ ಅಲೆ ಮರೆಯಾಗುವಮೊದಲೇ 3ನೇ ಅಲೆಯ ಭೀತಿ ಕಾಡುತ್ತಿದೆ.ಅದರಲ್ಲೂ ಈ ಬಾರಿ ಮಕ್ಕಳಿಗೆ ಅದುಅಪಾಯಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಅದನ್ನು ಎದುರಿಸಲುಬಸವನಗುಡಿ ವಿಧಾನಸಭಾ ಕ್ಷೇತ್ರಈಗಾಗಲೇ ಸನ್ನದ್ಧವಾಗಿದೆ.- ಇದು ಆ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಅವರ ವಿಶ್ವಾಸದ ನುಡಿಗಳು.

Advertisement

ಉದಯವಾಣಿ ಜತೆ ಕೊರೊನಾ ನಿಯಂತ್ರಣಕುರಿತು ಮಾತನಾಡಿದ ಅವರು ಕ್ಷೇತ್ರದಲ್ಲಿ 2ನೇ ಅಲೆಎದುರಿಸಿದ ಬಗೆ ಹಾಗೂ ಮೂರನೇ ಅಲೆಎದುರಿಸುವ ಬಗ್ಗೆ ಮಾಹಿತಿ ನೀಡಿದರು.„

ಕೊರೊನಾ 2ನೇ ಅಲೆಯನ್ನು ಕ್ಷೇತ್ರದಲ್ಲಿ ನೀವುಹೇಗೆ ನಿಭಾಯಿಸಿದೀರಿ?

ಮೊದಲನೇ ಅಲೆ ಕಲಿಸಿದ ಅನುಭವದ ಪಾಠದಿಂದ ಸೋಂಕಿನ ತೀವ್ರತೆ ಅರಿತು ಸ್ವಯಂ ಸೇವಾಸಂಸ್ಥೆಗಳನ್ನು ಸಂಪರ್ಕಿಸಿ, ಸಹಾಯಹಸ್ತ ಕೇಳಲಾಯಿತು. ಪೂರಕ ಸ್ಪಂದನೆಯೂ ಸಿಕ್ಕಿತು.ಕಳೆದ ಬಾರಿಗೆ ಹೋಲಿಸಿದರೆ, ತುಸುಕಡಿಮೆ ಅನಿಸಿದರೂ ಅಷ್ಟಾಗಿ ಸಮಸ್ಯೆಆಗಲಿಲ್ಲ. ಸಹಾಯವಾಣಿ ಜತೆಗೆ 60 ಆಕ್ಸಿಜನ್‌ ಸಿಲಿಂಡರ್‌ಗಳ ಜತೆಗೆ ಮೂರುಆರೈಕೆ ಕೇಂದ್ರಗಳನ್ನು ತೆರೆದು, ಅಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಯಿತು. ಬಡವರಿಗೆನಿತ್ಯ ಆಹಾರದ ಕಿಟ್‌ಗಳ ವಿತರಣೆ ಮಾಡಲಾಯಿತು.„ ಇದನ್ನು ಉಳಿದ ವಿಧಾನಸಭಾ ಕ್ಷೇತ್ರಗಳೂಮಾಡಿವೆ.

 ನಿಮ್ಮ ಕಾರ್ಯವೈಖರಿ ಹೇಗೆ ಭಿನ್ನ?

Advertisement

ಉಳಿದ ಕ್ಷೇತ್ರಗಳಲ್ಲೂ ಅಲ್ಲಿನ ಜನಪ್ರತಿನಿಧಿಗಳುಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೂಲಸಿಕೆಗಾಗಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವುದು ಅಲ್ಲಿತಪ್ಪಿಲ್ಲ. ಇದು ಕೆಲವೊಮ್ಮೆ ಸೋಂಕಿಗೂ ಕಾರಣವಾಗಬಹುದು. ಬಸವನಗುಡಿ ಜನತೆಗೆ ಆಸಮಸ್ಯೆ ಎದುರಾಗಲಿಲ್ಲ. ಹೆಚ್ಚು ದಟ್ಟಣೆಉಂಟಾಗುತ್ತಿದ್ದಂತೆ ನಮ್ಮಕಾರ್ಯಕರ್ತರು ಅಲ್ಲಿ ಧಾವಿಸಿ,ಸಾರ್ವಜನಿಕರ ಮಾಹಿತಿ ಕಲೆಹಾಕಿ,ಟೋಕನ್‌ ನೀಡಿ, ಸಮಯನಿಗದಿಪಡಿಸಿ ಕಳುಹಿಸುತ್ತಿದ್ದರು.„ ಹಾಗಿದ್ದರೆ,

ಕ್ಷೇತ್ರ ದಲ್ಲಿ ಯಾವುದೇ ಸಮಸ್ಯೆಆಗಲೇ ಇಲ್ಲವೇ?

ಹಾಗೇ ನಿಲ್ಲ,ಸೋಂಕು ತೀರ್ವವಾಗಿದ್ದಾಗ ನಮ್ಮ ಕ್ಷೇತ್ರದಲ್ಲೂ ರೋಗಿಗಳಿಗೆಆಮ್ಲಜನಕ ಕೊರತೆ ಉಂಟಾಯಿತು. ಒಂದೊಂದುನಿಮಿಷಕ್ಕೂ ಒಂದು ಫೋನ್‌ ಕರೆ ಬರುತ್ತಿತ್ತು. ಒಂದುಹಾಸಿಗೆ ವ್ಯವಸ್ಥೆಗೂ ಪರದಾಡಿದ್ದು ಉಂಟು. ಆದರೆ,ಅದು ಅತ್ಯಲ್ಪ ಅವಧಿ ಆಗಿತ್ತು. ಸ್ವಯಂ ಸೇವಾಸಂಸ್ಥೆಗಳು, ಸಂಸದರ ಬಳಿ ಲಭ್ಯ ಇದ್ದ ಆಕ್ಸಿಜನ್‌ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಲಾಯಿತು.„

 ಕ್ಷೇತ್ರದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆಅಭಿಯಾನ ಆಗಿದೆ?

ಇದನ್ನು ನಿಖರವಾಗಿ ಹೇಳುವುದು ಕಷ್ಟ.ಯಾಕೆಂದರೆ, ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂಊರಿಗೆ ಹೋದಾಗ ಹಾಕಿಸಿಕೊಂಡು ಬಂದಿರುತ್ತಾರೆ.ಇನ್ನು ಹೊರಗಿನವರೂ ಇಲ್ಲಿ ಬಂದು ಲಸಿಕೆಪಡೆದಿರಬಹುದು. ಅಂಕಿ-ಅಂಶಗಳ ಪ್ರಕಾರಇದುವರೆಗೆ ಸುಮಾರು 75 ಸಾವಿರ ಜನ ಲಸಿಕೆಪಡೆದಿದ್ದಾರೆ ಎಂದು ಹೇಳಬಹುದು.ಕಳೆದೆರಡು ಅವಧಿಯಲ್ಲಿ ಕೊರೊನಾಸೃಷ್ಟಿಸಿದ ಅವಾಂತರ ಹಾಗೂಅದರಿಂದ ಕಲಿತ ಪಾಠ ಭವಿಷ್ಯದಲ್ಲಿಎದುರಾಗಲಿರುವ ಮತ್ತೂಂದು ಅಲೆಗೆನಮ್ಮನ್ನು ಮಾನಸಿಕವಾಗಿ ಮತ್ತುಭೌತಿಕವಾಗಿ ಸಿದ್ಧಗೊಳಿಸಿದೆ. ಈಗಾಗಲೇಕ್ಷೇತ್ರದಲ್ಲಿ 20 ಹಾಸಿಗೆಗಳ ಮಕ್ಕಳ ಆಸ್ಪತ್ರೆಸಜ್ಜಾಗಿದೆ. ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ತಲಾ ಒಂದುತಂಡ ಈ ನಿಟ್ಟಿನಲ್ಲಿಕಾರ್ಯನಿರ್ವಹಿಸುತ್ತಿದೆ.

ರವಿ ಸುಬ್ರಮಣ್ಯ

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next