Advertisement

ಕೋವಿಡ್: ರಾಜ್ಯದಲ್ಲಿಂದು 539 ಪಾಸಿಟಿವ್ ಪ್ರಕರಣ | 591 ಸೋಂಕಿತರು ಗುಣಮುಖ

07:23 PM Sep 29, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ 539 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 17 ಜನರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 591 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 12565 ಪಾಸಿಟಿವ್ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.48 % ಇದ್ದು, ಡೆತ್ ರೇಟ್ 3.15 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-1, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-10, ಬೆಂಗಳೂರು ನಗರ-239, ಬೀದರ್-3, ಚಾಮರಾಜನಗರ-2, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-4, ಚಿತ್ರದುರ್ಗ-8, ದಕ್ಷಿಣ ಕನ್ನಡ-75, ದಾವಣಗೆರೆ-2, ಧಾರವಾಡ-5, ಗದಗ-2, ಹಾಸನ-21, ಹಾವೇರಿ-1, ಕಲಬುರಗಿ-2, ಕೊಡಗು-36, ಕೋಲಾರ-13, ಕೊಪ್ಪಳ-1, ಮಂಡ್ಯ-10, ಮೈಸೂರು-31, ರಾಯಚೂರು-0, ರಾಮನಗರ-3, ಶಿವಮೊಗ್ಗ-14, ತುಮಕೂರು-22, ಉಡುಪಿ-6, ಉತ್ತರ ಕನ್ನಡ-19, ವಿಜಯಪುರ-0, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next