ಪಣಜಿ: ಮೇ 10 ರಿಂದ ಗೋವಾ ಸರ್ಕಾರವು ರಾಜ್ಯಕ್ಕೆ ಪ್ರವೇಶಿರುವ ಹೊರ ರಾಜ್ಯಗಳ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಅಥವಾ ಕೋವಿಡ್ ವ್ಯಾಕ್ಸಿನೇಶನ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಗೋವಾ ಪ್ರವೇಶಿಸಲು ಪ್ರವಾಸಿಗರಿಗೆ ಈ ಮೂಲಕ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ.
ಓದಿ : ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್, ಬೆನ್ನಿಗೆ ತಗಡಿನ ಶೀಟ್ ಕಟ್ಟಿಕೊಂಡ ಸೈಕಲ್ ಸವಾರ
ಹೊರ ರಾಜ್ಯಗಳಿಗೆ ತೆರಳಿದ್ದ ಗೋವಾದ ಜನರು, ಗೋವಾದಲ್ಲಿ ಉದ್ಯೋಗದಲ್ಲಿರುವವರಿಗೆ ಅಥವಾ ಅನಾರೋಗ್ಯ ಸಂಬಂಧಿತ ಕಾರಣಗಳಿದ್ದರೆ ಅಂತವರಿಗೆ ಗೋವಾ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಗೋವಾ ಸರ್ಕಾರ ಸ್ಪಷ್ಟಪಡಿಸಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಆ್ಯಂಬುಲೆನ್ಸ್ ನಲ್ಲಿ ಗೋವಾಕ್ಕೆ ತೆರಳುವ ವ್ಯಕ್ತಿಗಳಿಗೆ ಕೂಡ ಯಾವುದೇ ನಿರ್ಬಂಧವಿಲ್ಲದೆಯೇ ಪ್ರವೇಶಾವಕಾಶ ನೀಡಲಾಗಿದೆ. ಈ ಆದೇಶ ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸುವುದಾಗಿ ಗೋವಾ ಸರ್ಕಾರ ಎಚ್ಚರಿಸಿದೆ.
ಗಡಿ ಭಾಗಕ್ಕೆ ಆಗಮಿಸಿದ ಹಲವರು ವಾಪಸ್ :
ಗೋವಾದಿಂದ ಕರ್ನಾಟಕಕ್ಕೆ ಆಗಮಿಸಲು ಮತ್ತು ಕರ್ನಾಟಕದಿಂದ ಗೋವಾಕ್ಕೆ ತೆರಳಲು ಗಡಿ ಭಾಗಕ್ಕೆ ಆಗಮಿಸಿದ್ದ ಹಲವರು ಪ್ರವೇಶಾವಕಾಶ ಲಭಿಸದೆಯೇ ವಾಪಸ್ಸಾಗುತ್ತಿದ್ದಾರೆ. ಗೋವಾದಲ್ಲಿ ಕಠಿಣ ಕರ್ಫ್ಯೂ ಮತ್ತು ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿನ ಸಾರ್ವಜನಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಓದಿ : ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಪ್ರಾಣಿ ಪ್ರೀತಿಗೆ ಭಾರಿ ಮೆಚ್ಚುಗೆ..!